ಅಗ್ನಿ ಅವಘಡ ತಪ್ಪಿಸಲು ಠಾಣೆ ಅನುಕೂಲ

ಮಸ್ಕಿಯಲ್ಲಿ ಅಗ್ನಿ ಶಾಮಕ ಠಾಣೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಆರ್.ಬಸನಗೌಡ ತುರ್ವಿಹಾಳ ಭೂಮಿ ಪೂಜೆ ನೆರವೇರಿಸಿದರು. ಸಿದ್ದನಗೌಡ ಮಾಟೂರು, ಮಹಿಬೂಬ್ ಸಾಬ್ ಮುದ್ದಾಪುರ, ಶಿವಣ್ಣ ನಾಯಕ, ಕೃಷ್ಣ ಚಿಗರಿ, ಕಾಂಗ್ರೆಸ್ ಮುಖಂಡ  ಅಂದಾನಪ್ಪ ಗುಂಡಳ್ಳಿ, ಶಿವು ಬ್ಯಾಳಿ, ವೀರೇಶ ಪಾಟೀಲ, ನಾಗರತ್ನ  ಕಟ್ಟಿಮನಿ, ಆನಂದ ವೀರಾಪುರ, ಬಿ.ಜಿ. ನಾಯಕ, ಕಿರಣ ಮುರಾರಿ, ವೀರಭದ್ರ ಕೋಠಾರಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿಕೆ
ಮಸ್ಕಿ: ಅಗ್ನಿ ಶಾಮಕ ಠಾಣೆ ಕಟ್ಟಡ ನಿರ್ಮಾಣಕ್ಕೆ 2.50 ರೂ. ಕೋಟಿ ಬಿಡುಗಡೆಯಾಗಿದೆ ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ತಿಳಿಸಿದರು.
ಪಟ್ಟಣದ ಸಾರಿಗೆ ಬಸ್ ಡಿಪೋ ಹತ್ತಿರದಲ್ಲಿ ಅಗ್ನಿ ಶಾಮಕ ಠಾಣೆ ಕಟ್ಟಡ ನಿರ್ಮಾಣಕ್ಕೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಅಗ್ನಿ ಶಾಮಕ ಠಾಣೆ ನಿರ್ಮಾಣಗೊಂಡರೆ ಅಗ್ನಿ ಅವಘಡಗಳು ತಪ್ಪಿಸಲು ಅನುಕೂಲವಾಗಲಿದೆ.
 ಪ್ರಜಾಸೌಧ ಕಟ್ಟಡ ನಿರ್ಮಾಣ ಕಾಮಗಾರಿ ನಡೆದಿದ್ದು, ಕಾಮಗಾರಿ ಪೂರ್ಣಗೊಂಡ ನಂತರ ತಾಲೂಕಾಡಳಿತ, ನಾನಾ ಕಚೇರಿಗಳು ಪ್ರಾರಂಭಗೊಳ್ಳಲಿವೆ ಎಂದರು. 
ಎಪಿಎಂಸಿ ಅಧ್ಯಕ್ಷ ಸಿದ್ಧನಗೌಡ ಮಾಟೂರು, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಮಹಿಬೂಬ್ ಸಾಬ್ ಮುದ್ದಾಪುರ, ತಾಪಂ ಮಾಜಿ ಅಧ್ಯಕ್ಷ ಶಿವಣ್ಣ ನಾಯಕ, ಪುರಸಭೆ ನಾಮನಿರ್ದೆಶನ ಸದಸ್ಯ ಕೃಷ್ಣ ಚಿಗರಿ, ಪ್ರಮುಖರಾದ ಅಂದಾನಪ್ಪ ಗುಂಡಳ್ಳಿ, ಶಿವು ಬ್ಯಾಳಿ, ವೀರೇಶ ಪಾಟೀಲ, ನಾಗರತ್ನ ಕಟ್ಟಿಮನಿ, ಆನಂದ ವೀರಾಪುರ, ಬಿ.ಜಿ. ನಾಯಕ, ಕಿರಣ ಮುರಾರಿ, ವೀರಭದ್ರ ಕೊಠಾರಿ ಇತರರು  ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net