ನಿರ್ಲಕ್ಷೃ ವಹಿಸಿದರೆ ರಾಜ್ಯ ವ್ಯಾಪ್ತಿ ಧರಣಿ

ಬಸವನಬಾಗೇವಾಡಿ ಪಟ್ಟಣದಲ್ಲಿ ಔಷಧಗಳನ್ನು ಅನ್‌ಲೈನ್ ಸೇವೆ ಮೂಲಕ ವಿತರಿಸುವುದನ್ನು ಸ್ಥಗಿತಗೊಳಿಸಬೇಕೆಂದು ತಾಲೂಕು ಔಷಧ ವ್ಯಾಪಾರಸ್ಥರು ಸಂಘದಿಂದ ಪ್ರಧಾನಮಂತ್ರಿಗೆ ಬರೆದ ಮನವಿ ಪತ್ರವನ್ನು ಶಿರಸ್ತೇದಾರ ರಾಜು ದೊಡ್ಡಮನಿಯವರಿಗೆ ಸಲ್ಲಿಸಿದರು. ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ಕೋರಿ, ರಮೇಶ ಯಳಮೇಲಿ, ಪ್ರಭು ಪಟ್ಟಣಶೆಟ್ಟಿ (ಅಶ್ವಿನಿ) ಗುರು ಸಾರಂಗಮಠ, ಶ್ರೀಕಾಂತ ಕೊಟ್ರೆಶೆಟ್ಟಿ ಇತರರಿದ್ದರು.
ಬಸವನಬಾಗೇವಾಡಿ ಪಟ್ಟಣದಲ್ಲಿ ಔಷಧಗಳನ್ನು ಅನ್‌ಲೈನ್ ಸೇವೆ ಮೂಲಕ ವಿತರಿಸುವುದನ್ನು ಸ್ಥಗಿತಗೊಳಿಸಬೇಕೆಂದು ತಾಲೂಕು ಔಷಧ ವ್ಯಾಪಾರಸ್ಥರು ಸಂಘದಿಂದ ಪ್ರಧಾನಮಂತ್ರಿಗೆ ಬರೆದ ಮನವಿ ಪತ್ರವನ್ನು ಶಿರಸ್ತೇದಾರ ರಾಜು ದೊಡ್ಡಮನಿಯವರಿಗೆ ಸಲ್ಲಿಸಿದರು. ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ಕೋರಿ, ರಮೇಶ ಯಳಮೇಲಿ, ಪ್ರಭು ಪಟ್ಟಣಶೆಟ್ಟಿ (ಅಶ್ವಿನಿ) ಗುರು ಸಾರಂಗಮಠ, ಶ್ರೀಕಾಂತ ಕೊಟ್ರೆಶೆಟ್ಟಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅನ್‌ಲೈನ್ ಸೇವೆ ಮೂಲಕ ಔಷಧ ವಿತರಣೆ ಸ್ಥಗಿತಗೊಳಿಸಿ
  • ತಾಲೂಕು ಔಷಧ ವ್ಯಾಪಾರಸ್ಥರು ಸಂಘ ಆಗ್ರಹ
ಬಸವನಬಾಗೇವಾಡಿ: ಆನ್‌ಲೈನ್ ಸೇವೆ ನೆಪದಲ್ಲಿ ಔಷಧ ಪೂರೈಸುತ್ತಿರುವ ಕೆಲವು ಕಂಪನಿಗಳು ಗ್ರಾಹಕರಿಗೆ ಸರಿಯಾದ ಔಷಧಿ ನೀಡದೇ ವಂಚಿಸುತ್ತಿವೆ. ಅಲ್ಲದೇ ಕೆಲವು ಖಾಸಗಿ ದೊಡ್ಡ ದೊಡ್ಡ ಕಂಪನಿಗಳು ಔಷಧಗಳಿಗೆ ಹೆಚ್ಚಿನ ರಿಯಾಯಿತಿ ನೀಡಿ ಗ್ರಾಹಕರನ್ನು ದಾರಿ ತಪ್ಪಿಸುತ್ತಿವೆ. ಈ ವ್ಯವಸ್ಥೆಯನ್ನು ಬಂದ್ ಮಾಡಬೇಕೆಂದು ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ಕೋರಿ, ಜಿಲ್ಲಾ ಉಪಾಧ್ಯಕ್ಷ ರಮೇಶ ಯಳಮೇಲಿ, ತಾಲೂಕು ಅಧ್ಯಕ್ಷ ಪ್ರಭು ಪಟ್ಟಣಶೆಟ್ಟಿ (ಅಶ್ವಿನಿ) ತಾಲೂಕ ಖಜಾಂಚಿ ಗುರು ಸಾರಂಗಮಠ, ಶ್ರೀಕಾಂತ ಕೊಟ್ರೆಶೆಟ್ಟಿ ಒತ್ತಾಯಿಸಿದರು.
ಪಟ್ಟಣದ ಅಖಿಲ ಭಾರತ ಔಷದ ವ್ಯಾಪಾರಸ್ಥರ ಸಂಘಗಳ ಸಂಘಟನೆ (ಎಐಓಸಿಡಿ) ಕರ್ನಾಟಕ ರಾಜ್ಯ ಔಷಧ ವ್ಯಾಪಾರಸ್ಥರ ಸಂಘದ ಜಿಲ್ಲಾ, ತಾಲೂಕು ಘಟಕದ ನೇತೃತ್ವದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಔಷಧಗಳನ್ನು ಅನ್‌ಲೈನ್ ಸೇವೆ ಮೂಲಕ ವಿತರಿಸುವುದನ್ನು ಸ್ಥಗಿತಗೊಳಿಸಬೇಕೆಂದು ತಾಲೂಕು ಔಷಧ ವ್ಯಾಪಾರಸ್ಥರು ಸಂಘದ ವತಿಯಿಂದ ಆಗ್ರಹಿಸಿದರು.
ರೋಗಿಗಳ ಸುರಕ್ಷತೆ: ಔಷಧ ಚೀಟಿಗಳ ದುರುಪಯೋಗ, ನಕಲಿ ಈ ಔಷಧ ಚೀಟಿ ತಡೆಯಲು
ಸರ್ಕಾರ ವ್ಯವಸ್ಥೆ ರೂಪಿಸಬೇಕು. ವೈದ್ಯರ ಚೀಟಿ ಇಲ್ಲದೆ ಆನ್‌ಲೈನ್ ಮೂಲಕ ಔಷದ ಖರೀದಿಗೆ ತಡೆ ನೀಡಬೇಕು ನಮ್ಮ ಯುವ ಜನಾಂಗ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಈ ಆನ್‌ಲೈನ್ ಔಷಧ ಸರಬರಾಜು ಕೇಂದ್ರ ರಾಜ್ಯ ಸರ್ಕಾರ ಬಂದ್ ಮಾಡಬೇಕು ಒಂದು ವೇಳೆ ಎರಡು ಸರ್ಕಾರಗಳು ನಿರ್ಲಕ್ಷೃ ವಹಿಸಿದರೆ ಮುಂದೆ ದೇಶ ರಾಜ್ಯ ವ್ಯಾಪ್ತಿ ಸಾರ್ವಜನಿಕರೊಂದಿಗೆ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸ್ಥಳಕ್ಕೆ ಆಗಮಿಸಿದ ಶಿರಸ್ತೇದಾರ ರಾಜು ದೊಡ್ಡಮನಿಗೆ ಪ್ರಧಾನಮಂತ್ರಿಗೆ ಬರೆದ ಮನವಿ ಪತ್ರ ಸಲ್ಲಿಸಿದರು.
ಮಲ್ಲಿಕಾರ್ಜುನ ಮಠ, ಮಾಹಾವೀರ ಹೊಸಮನಿ, ಎಸ್.ಎ. ನದಾಫ್, ರಾಘು ಸೋಮನಕಟ್ಟಿ, ಅಶೋಕ ಮುಳವಾಡ, ಸುರೇಶ ಗಬ್ಬೂರ, ಶಿವಾನಂದ ಬಿದರಿ, ಶೇಖರ ಹೂಗಾರ, ವಿದ್ಯಾಧರ ಉಪಾಧ್ಯಾಯ ಸೇರಿ ಇತರರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net