ಕಡಿಮೆ ಶುಲ್ಕದಲ್ಲಿ ಅತ್ಯಾಧುನಿಕ ಆರೋಗ್ಯ ಸೌಲಭ್ಯ

ಬಾಗಲಕೋಟೆ ನಗರದಲ್ಲಿ ಡಾ.ದಡ್ಡೇನವರ ಆಸ್ಪತ್ರೆಯ ಸೂಪರ್ ಸ್ಪೇಶಾಲಿಟಿ ವಿಭಾಗ ಹಾಗೂ ಬಾಗಲಕೋಟೆ ಹಾರ್ಟ್ ಕೇರ್ ಸೆಂಟರ್‌ನ್ನು ಭಾನುವಾರ ಸಂಸದ ಪಿ.ಸಿ.ಗದ್ದಿಗೌಡರ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಕೊಪ್ಪಳ ಗವಿಸಿದ್ಧೇಶ್ವರ ಮಠದ ಗವಿಸಿದ್ಧೇಶ್ವರ ಸ್ವಾಮೀಜಿ, ಮಾಜಿ ಶಾಸಕ ರಾಜಶೇಖರ ಶೀಲವಂತ, ಡಾ.ಎಸ್.ಎಂ.ದಡ್ಡೇನವರ್ ಹಾಗೂ ಅವರು ಕುಟುಂಬದ ವೈದ್ಯರು ಚಿತ್ರದಲ್ಲಿ  ಇದ್ದರು.
ಬಾಗಲಕೋಟೆ ನಗರದಲ್ಲಿ ಡಾ.ದಡ್ಡೇನವರ ಆಸ್ಪತ್ರೆಯ ಸೂಪರ್ ಸ್ಪೇಶಾಲಿಟಿ ವಿಭಾಗ ಹಾಗೂ ಬಾಗಲಕೋಟೆ ಹಾರ್ಟ್ ಕೇರ್ ಸೆಂಟರ್‌ನ್ನು ಭಾನುವಾರ ಸಂಸದ ಪಿ.ಸಿ.ಗದ್ದಿಗೌಡರ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಕೊಪ್ಪಳ ಗವಿಸಿದ್ಧೇಶ್ವರ ಮಠದ ಗವಿಸಿದ್ಧೇಶ್ವರ ಸ್ವಾಮೀಜಿ, ಮಾಜಿ ಶಾಸಕ ರಾಜಶೇಖರ ಶೀಲವಂತ, ಡಾ.ಎಸ್.ಎಂ.ದಡ್ಡೇನವರ್ ಹಾಗೂ ಅವರು ಕುಟುಂಬದ ವೈದ್ಯರು ಚಿತ್ರದಲ್ಲಿ ಇದ್ದರು.
Published on
ಬಾಗಲಕೋಟೆ: ಕಡಿಮೆ ಶುಲ್ಕದಲ್ಲಿ ಅತ್ಯಾಧುನಿಕ ಸೌಲಭ್ಯ ಒದಗಿಸುವ ಮೂಲಕ ಡಾ.ದಡ್ಡೇನವರ ಕುಟುಂಬ ಆರೋಗ್ಯ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ದಡ್ಡೇನವರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಿAದ ಭಾನುವಾರ ಸೂಪರ್ ಸ್ಪೇಶಾಲಿಟಿ ವಿಭಾಗ, ಬಾಗಲಕೋಟೆ ಹಾರ್ಟ್ ಕೇರ್ ಸೆಂಟರ್ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ದಶಕಗಳಿಂದಲೂ ವೈದ್ಯ ವೃತ್ತಿಯಲ್ಲಿ ಇರುವ ಡಾ.ಎಂ.ಎಸ್.ದಡ್ಡೇನವರ ಇದೀಗ ಸೂಪರ್ ಸ್ಪೇಶಾಲಿಟಿ, ಹೃದಯರೋಗ ಚಿಕಿತ್ಸೆಯಂತಹ ಆಧುನಿಕ ಸೌಲಭ್ಯಗಳನ್ನು ಜನರಿಗೆ ಒದಗಿಸಿದ್ದಾರೆ. ಆ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಬರುವ ಆಧುನಿಕ ಸೌಲಭ್ಯಗಳನ್ನು ಈ ಭಾಗದ ರೋಗಿಗಳಿಗೆ ಒದಗಿಸುವ ಆಲೋಚನೆ ಹೊಂದ್ದಾರೆ ಎಂದು ಕೊಂಡಾಡಿದರು.
ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ, ನಗರದಲ್ಲಿ ದಶಕಗಳ ಹಿಂದೆ ಬೆರಳೆಣಿಕೆಯ ಆಸ್ಪತ್ರೆಗಳಿದ್ದವು. ಹೆಚ್ಚಿನ ಚಿಕಿತ್ಸೆಗೆ ಸೊಲ್ಲಾಪುರ, ಮೀರಜ್‌ಗೆ ಹೋಗುವ ಪರಿಸ್ಥಿತಿ ಇತ್ತು. ಬಿವಿವಿ ಸಂಘದ ಮೆಡಿಕಲ್ ಕಾಲೇಜ್, ಖಾಸಗಿ ಆಸ್ಪತ್ರೆಗಳಿಂದ ಇದೀಗ ಬಾಗಲಕೋಟೆ ಮೆಡಿಕಲ್ ಹಬ್ ಆಗಿದೆ. ಮಹಾನಗರಗಳಲ್ಲಿ ದೊರೆಯುವ ಸೌಲಭ್ಯಗಳು ಇಲ್ಲಿ ದೊರೆಯುವಂತಾಗಿದೆ. ಇದರಿಂದ ಈ ಭಾಗದ ಜನರು ಚಿಕಿತ್ಸೆಗಾಗಿ ಬೇರೆ ಊರುಗಳಿಗೆ ಹೋಗುವ ಅನಿವಾರ್ಯತೆಯಿಲ್ಲ. ಡಾ. ದಡ್ಡೇನವರ ಅವರು ಹೊಸ ಸೌಲಭ್ಯದ ವಿಭಾಗ ಆರಂಭಿಸಿದ್ದಾರೆ. ರೋಗಿಗಳಿಗೆ ಉತ್ತಮ ಚಿಕಿತ್ಸೆ ಒದಗಿಸಬೇಕು, ಆಶ್ರಯಕ್ಕೆ ಬಂದವರು ಆರೋಗ್ಯವಂತರಾಗಬೇಕು ಎಂದು ಸಲಹೆ ನೀಡಿದರು.
ನೂತನ ವಿಭಾಗಗಳನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದ ಕೊಪ್ಪಳದ ಗವಿಸಿದ್ದೇಶ್ವರ ಮಠದ ಗವಿಸಿದ್ದೇಶ್ವರ ಸ್ವಾಮೀಜಿ, ಜನರ ಆರೋಗ್ಯ ಕಾಪಾಡಲು ಹೊಸ ವಿಭಾಗಗಳನ್ನು ಆರಂಭಿಸಿರುವುದು ಉತ್ತಮ ಬೆಳವಣಿಗೆ. ಜೀವನದಲ್ಲಿ ನಾವು ಗಳಿಸುವ ಅತಿ ದೊಡ್ಡ ಸಂಪತ್ತು ಎಂದರೆ ಅದು ಆನಂದ ಮತ್ತು ಆರೋಗ್ಯ. ಈ ಸಂಪತ್ತು ಪಡೆಯಲು ಆಹಾರ, ವಿಹಾರ ಮತ್ತು ವಿಚಾರಗಳು ಚನ್ನಾಗಿ ಇರಬೇಕು. ಗುಹೆಯಲ್ಲಿ ಇದ್ದುಕೊಂಡು, ತಪ್ಪಲು ಸೇವಿಸುವವರು ಸಂತರಲ್ಲ. ಯಾರು ಎದೆಯಲ್ಲಿ ಸದಾ ಸಂತೋಷ ತುಂಬಿಕೊAಡಿರುತ್ತಾರೆ ಅವರೇ ನಿಜ ಸಂತರು. ಇದು ಇಲ್ಲವಾದರೆ ಅವರು ಸಂಸಾರಿಗಳು. ಈ ಸಂತ ಮತ್ತು ಸಂಸಾರಿ ಎರಡೂ ತಮ್ಮ ತಲೆಯಲ್ಲಿಯೇ ಇವೆ ಎಂದು ತಿಳಿಸಿದರು.
ಆಸ್ಪತ್ರೆಯ ಮುಖ್ಯಸ್ಥ ಡಾ.ಎಂ.ಎಸ್.ದಡ್ಡೇನವರ ಮಾತನಾಡಿ, ದಶಕಗಳಿಂದ ನಗರದ ಜನತೆಗೆ ಆಸ್ಪತ್ರೆ ಮೂಲಕ ನಾನಾ ಸೌಲಭ್ಯ ಒದಗಿಸಲಾಗಿದೆ. ಸೂಪರ್ ಸ್ಪೇಶಾಲಿಟಿ ವಿಭಾಗದ ಮೂಲಕ ಎಲ್ಲ ಬಗೆಯ ಆರೋಗ್ಯ ಸೇವೆ ಲಭಿಸಲಿದೆ. ಹೃದಯರೋಗಕ್ಕೆ ಸಂಬAಽಸಿದ ಅತ್ಯಾಧುನಿಕ ಚಿಕಿತ್ಸೆ ಆಸ್ಪತ್ರೆಯಲ್ಲಿ ಕಲ್ಪಿಸಲಾಗಿದೆ. ಈ ವಿಭಾಗಗಳ ಆರಂಭ ನಮ್ಮ ಕನಸಾಗಿತ್ತುö, ಈಗ ಕೈಗೂಡಿದೆ ಎಂದರು.
ರಾಜ್ಯಸಭೆ ಸದಸ್ಯ ನಾರಾಯಣಸಾ ಭಾಂಡಗೆ, ಮಾಜಿ ಶಾಸಕರಾದ ರಾಜಶೇಖರ ಶೀಲವಂತ, ಎಂ.ಕೆ.ಪಟ್ಟಣಶೆಟ್ಟಿ, ಡಾ.ಸುಮಂಗಲಾ ದಡ್ಡೇನವರ, ಡಾ.ವಿಜಯ್ ದಡ್ಡೇನವರ, ಡಾ.ನೇಹಾ ದಡ್ಡೇನವರ, ಹೃದಯರೋಗ ತಜ್ಞ ಡಾ.ಸಂತೋಷ ಚಿಕ್ಕೋಡಿ, ಡಾ.ಶಶಿಧರ ಖಾನಾಪೂರ, ಡಾ.ಆನಂದ ದಡ್ಡೇನವರ, ಡಾ.ಬಸವರಾಜ ದಡ್ಡೇನವರ, ಜೆಡಿಎಸ್ ಮುಖಂಡ ಹನಮಂತ ಮಾವಿನಮರದ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net