ರಸ್ತೆ ಅಗಲೀಕರಣ ಶೀಘ್ರ ಆರಂಭಿಸಿ

ಕಕ್ಕೇರಾ ಬಳಿಯ ಶಾಂತಪುರ ಕ್ರಾಸ್​ನಲ್ಲಿ ಭಾನುವಾರ ವಿವಿಧ ಸಂಟನೆಗಳ ಕಾರ್ಯಕರ್ತರು ಹತ್ತಿಗೂಡೂರದಿಂದ ಲಿಂಗಸೂಗೂರವರೆಗೆ ರಸ್ತೆ ಅಗಲೀಕರಣ ಮಾಡುವಂತೆ ಆಗ್ರಹಿಸಿ ಬೃಹತ್​ ಪ್ರತಿಭಟನೆ ನಡೆಸಿ ತಹಸೀಲ್ದಾರ್​ಗೆ ಮನವಿ ಸಲ್ಲಿಸಿದರು. ಪೂಜ್ಯ ವರದಾನೇಶ್ವರ ಸ್ವಾಮೀಜಿ, ಗಂಗಾಧರನಾಯಕ, ರಾಮುನಾಯಕ ಅರಳಳ್ಳಿ, ಮರಿಲಿಂಗ ಹುಣಸಿಹೊಳೆ, ಶರಣುನಾಯಕ ಇತರರಿದ್ದರು.
ಕಕ್ಕೇರಾ ಬಳಿಯ ಶಾಂತಪುರ ಕ್ರಾಸ್​ನಲ್ಲಿ ಭಾನುವಾರ ವಿವಿಧ ಸಂಟನೆಗಳ ಕಾರ್ಯಕರ್ತರು ಹತ್ತಿಗೂಡೂರದಿಂದ ಲಿಂಗಸೂಗೂರವರೆಗೆ ರಸ್ತೆ ಅಗಲೀಕರಣ ಮಾಡುವಂತೆ ಆಗ್ರಹಿಸಿ ಬೃಹತ್​ ಪ್ರತಿಭಟನೆ ನಡೆಸಿ ತಹಸೀಲ್ದಾರ್​ಗೆ ಮನವಿ ಸಲ್ಲಿಸಿದರು. ಪೂಜ್ಯ ವರದಾನೇಶ್ವರ ಸ್ವಾಮೀಜಿ, ಗಂಗಾಧರನಾಯಕ, ರಾಮುನಾಯಕ ಅರಳಳ್ಳಿ, ಮರಿಲಿಂಗ ಹುಣಸಿಹೊಳೆ, ಶರಣುನಾಯಕ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿವಿಧ ಸಂಘಟನೆಗಳ ಕಾರ್ಯಕರ್ತರ ಆಗ್ರಹ
  • ಶಾಂತಪುರ ಕ್ರಾಸ್​ ಬಳಿ ಬೃಹತ್​ ಪ್ರತಿಟನೆ
ಕಕ್ಕೇರಾ: ಬೀದರ್​&ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಹತ್ತಿಗೂಡೂರದಿಂದ ಲಿಂಗಸೂಗೂರವಗಿನ ರಸ್ತೆ ಅಗಲೀಕರಣ ಕಾಮಗಾರಿ ಶ್ರೀ ಆರಂಭಿಸಬೇಕೆಂದು ಆಗ್ರಹಿಸಿ ಸಾಮೂಹಿಕ ಸಂಟನೆಗಳ ಕಾರ್ಯಕರ್ತರು ಭಾನುವಾರ ಬೃಹತ್​ ಪ್ರತಿಭಟನೆ ನಡೆಸಿದರು.
ವಿವಿಧ ಸಂಟನೆಗಳ ಮುಖಂಡರು ಮಾತನಾಡಿ, ಇತ್ತೀಚೆಗೆ ಈ ರಸ್ತೆ ಅಪಘಾತದಲ್ಲಿ ಮೃತಪಟ್ಟ 9ಜನರ ಕುಟುಂಬಗಳಿಗೆ ಹೆದ್ದಾರಿ ಪ್ರಾಧಿಕಾರದಿಂದ ಕೂಡಲೇ ಪರಿಹಾರ ನೀಡಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು.
ಬೀದರ್​&ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ 150 ಈ ಹೆದ್ದಾರಿ ಕಾಮಗಾರಿ ಈಗಾಗಲೇ ಟೆಂಡರ್​ ಆಗಿದ್ದು, ಸುಮಾರು ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿರುವ ಈ ಕಾಮಗಾರಿ ಏಕೆ ಕೈಗೆತ್ತಿಕೊಳ್ಳುತ್ತಿಲ್ಲ. ಈ ವಿಷಯದಲ್ಲಿ ಅಧಿಕಾರಿಗಳ ದಿವ್ಯ ರ್ನಿಲಕ್ಷವೇ ಇದಕ್ಕೆ ಮೂಲ ಕಾರಣ ಎಂದು ಆರೋಪಿಸಿದರು.
ಈ ರಸ್ತೆ ಬಹಳಷ್ಟು ಇಕ್ಕಟ್ಟಾಗಿದ್ದು 4 ವರ್ಷದಲ್ಲಿ 60 ಜನ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ಕಾಮಗಾರಿ ಬಗ್ಗೆ ಹೆದ್ದಾರಿ ಪ್ರಾಧಿಕಾರದವರು ಏಕೆ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ಈ ರಸ್ತೆಯನ್ನು ಸುಧಾರಣೆ ಮಾಡಬೇಕೆಂಬ ಭಾವನೆ ಏಕೆ ಇವರಲ್ಲಿ ಬರುತ್ತಿಲ್ಲ. ಹತ್ತಿಗೂಡೂರದಿಂದ ಲಿಂಗಸೂಗೂರವರೆಗೆ ಈ ಕಾಮಗಾರಿ ಸುಮಾರು ವರ್ಷಗಳಿಂದ ಕೈಗೆತ್ತಿಕೊಳ್ಳದಿರುವುದರಿಂದ ಈ ರಸ್ತೆ ಸಂಪೂರ್ಣ ಹಾಳಾಗಿ ದೊಡ್ಡ ದೊಡ್ಡ ತಗ್ಗು ಗುಂಡಿಗಳು ಬಿಬಿದ್ದ ಕಾರಣ ಅಪಘಾತಗಳು ಹೆಚ್ಚಾಗುತ್ತಿವೆ ಎಂದು ದೂರಿದರು.
ಕೂಡಲೇ ಜನಪ್ರತಿನಿಧಿಗಳು ಹಾಗೂ ಪ್ರಾಧಿಕಾರದ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆಯನ್ನು ಅಗಲೀಕರಣ ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಬೇಕು. ಇತ್ತೀಚೆಗೆ ಖಾಸಗಿ ಬಸ್​ ಮತ್ತು ಕಾರು ಮಧ್ಯೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ 9ಜನ ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದ ನಾಯಕ ಕುಟುಂಬಕ್ಕೆ ತಲಾ 50ಲಕ್ಷ ರೂ ಪರಿಹಾರ ನೀಡುವಂತೆ ಆಗ್ರಹಿಸಿದರು.
ಹಾಗೊಂದು ವೇಳೆ ಈ ನಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಇದಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಕುರಿತು ಮುಖ್ಯಮಂತ್ರಿಗೆ ಬರೆದ ಮನವಿಪತ್ರವನ್ನು ತಹಸೀಲ್ದಾರ್​ ಮೂಲಕ ಸಲ್ಲಿಸಲಾಯಿತು.
ಪ್ರತಿಭಟನೆಯಿಂದಾಗಿ ಬಸ್​ಗಳು, ಲಾರಿಗಳು, ಕ್ರೂಶರ್​ಗಳು ಸೇರಿದಂತೆ ಅನೇಕ ವಾಹನಗಳು ಸಾಲುಸಾಲಾಗಿ ನಿಂತಿದ್ದವು. ಕೆಂಡದಂಥ ಬಿಸಿಲಿಗೆ ಪ್ರಯಾಣಿಕರು, ನಾಗರೀಕರು, ವೃದ್ಧರು, ಮಕ್ಕಳು ಮೂರು ಗಂಟೆಗಳ ಕಾಲ ಗಿಡ&ಮರಗಳ ಆಶ್ರಯ ಪಡೆಯಲು ಪರದಾಡಿದರು.
ಡಿವೈಎಸ್​ಪಿ ಜಾವೇದ್​ ಇನಾಂದಾರ, ಸುರಪುರ ಸಿಪಿಐ ಉಮೇಶ ನಾಯಕ ಪೊಲೀಸ್​ ಬಿಗಿ ಬಂದೋಬಸ್ತ್​ ಮಾಡಿದ್ದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಇ ಶಿವರಾಜ ಇದ್ದರು. ಪ್ರತಿಭಟನೆಯಲ್ಲಿ ಗೊಲಪಲ್ಲಿಯ ವಾಲ್ಮೀಕಿ ಆಶ್ರಮದ ಪೂಜ್ಯ ವರದಾನೇಶ್ವರ ಸ್ವಾಮೀಜಿ, ದೇವಿಂದ್ರಪ್ಪಗೌಡ ಮೇಟಿ, ಗಂಗಾಧರನಾಯಕ ತಿಂಥಣಿ, ಅಯ್ಯಣ್ಣ ಹಾಲಭಾವಿ, ಸಂಜೀವನಾಯಕ ಕವಾಲ್ದಾರ್​, ಮಲ್ಲಿಕಾರ್ಜುನ ಸತ್ಯಂಪೇಟ, ಬಲಭೀಮನಾಯಕ ದೇವಾಪುರ, ಮರಲಿಂಗಪ್ಪ ಹುಣಸಿಹೊಳೆ, ಶರಣು ಮಕಾಶಿ, ಮಲ್ಲಿಕಾರ್ರ್ಜುನ ಬೇವಿನಾಳ, ರವಿ ಅಂಬಿಗೇರ, ಶರಣುನಾಯಕ ಡೊಣ್ಣಿಗೇರಾ, ರತ್ನರಾಜ ಶಾಲಿಮನಿ, ರಾಮುನಾಯಕ ಅರಳಳ್ಳಿ, ಬಸವರಾಜ ದಳಪತಿ, ಬೈರಣ್ಣ ಅಂಬಿಗೇರ, ಶ್ರವಣಕುಮಾರ ಡೊಣ್ಣಿಗೇರಾ, ಶರಣಗೌಡ ಬಂಡೊಳ್ಳಿ, ಪರಮಣ್ಣ ವಡಿಕೇರಿ, ದೇವಿಂದ್ರಪ್ಪ ತಳವಾರಗೇರ, ಸಚಿನಕುಮಾರ ನಾಯಕ, ದೇವರಾಜ ಗಿರಣಿ, ದೇವಿಂದ್ರಪ್ಪ ವಿಶ್ವಕರ್ಮ, ಸೇರಿ ವಿವಿಧ ಸಂಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net