ಬಳಿಕ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರಿಗೆ ರೋಗಿಗಳಿಂದ ಸಮಸ್ಯೆ ಸುರಿಮಳೆ ಆಯಿತು. ಸೂಕ್ತ ಚಿಕಿತ್ಸೆ ನೀಡಲು ವೈದ್ಯರಿಲ್ಲ. ಬಡವರಾಗಿರುವ ನಾವು ಹೆರಿಗೆ ವಾಡಿಸಲು ಖಾಸಗಿ ಆಸ್ಪತ್ರೆಗೆ ಹೋಗಬೇಕಿದೆ. ಸಾವಿರಾರು ರೂ. ಖರ್ಚು ವಾಡುವ ಶಕ್ತಿ ತಮಗಿಲ್ಲ. ಹಲವಾರು ಔಷಧ ಬೇರೆಡೆ ತೆಗೆದುಕೊಳ್ಳುವಂತೆ ಚೀಟಿ ಬರೆದುಕೊಡುತ್ತಾರೆ ಎಂದು ರೋಗಿಗಳು ದೂರಿದರು. ಈ ವೇಳೆ ಆಸ್ಪತ್ರೆಗೆ ಸೂಕ್ತ ಸಿಬ್ಬಂದಿ ಮತ್ತು ವೈದ್ಯರ ಕೊರತೆ ಇದೆ ಎಂದು ತಾಲೂಕು ಆಡಳಿತಾಧಿಕಾರಿ ಡಾ.ರಂಗನಾಥ್ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಲಕ್ಷ್ಮೀಕಾಂತ್ ಜಿಲ್ಲಾಧಿಕಾರಿಗಳಿಗೆ ವಿವರಿಸಿದರು. ನಂತರ ತಾಲೂಕಿನ ದಂಡಿನಶಿವರದ ಸರ್ಕಾರಿ ಆಸ್ಪತ್ರೆಗೂ ಜಿಲ್ಲಾಧಿಕಾರಿ ಭೇಟಿ ನೀಡಿದ್ದರು. ಉಪವಿಭಾಗಾಧಿಕಾರಿ ಸಪ್ತಶ್ರೀ, ತಹಸೀಲ್ದಾರ್ ಕುಂಇಅಹಮದ್, ಇಒ ಅನಂತರಾಜು, ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ತನ್ವೀರ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪ್ರಸನ್ನ ಕುವಾರ್, ಆಹಾರ ನಿರೀಕ್ಷರಾದ ಕೃಷ್ಣೇಗೌಡ, ಹರೀಶ್, ಬಿಇಒ ಸೋಮಶೇಖರ್ ಮತ್ತಿತರರು ಇದ್ದರು.