ದಿಟ್ಟಿಸಿ ನೋಡಿದ್ದೇ ತಪ್ಪಾಯಿತೇ? ಭೀಮಾ ತೀರದಲ್ಲಿ ಮತ್ತೆ ಜಳಪಿಸಿದ ಆಯುಧ, ಆಟೋ ಚಾಲಕನ ಭೀಕರ ಹಲ್ಲೆ! Bheema Theera

ದಿಟ್ಟಿಸಿ ನೋಡಿದ್ದೇ ತಪ್ಪಾಯಿತೇ? ಭೀಮಾ ತೀರದಲ್ಲಿ ಮತ್ತೆ ಜಳಪಿಸಿದ ಆಯುಧ, ಆಟೋ ಚಾಲಕನ ಭೀಕರ ಹಲ್ಲೆ! Bheema Theera
ದಿಟ್ಟಿಸಿ ನೋಡಿದ್ದೇ ತಪ್ಪಾಯಿತೇ? ಭೀಮಾ ತೀರದಲ್ಲಿ ಮತ್ತೆ ಜಳಪಿಸಿದ ಆಯುಧ, ಆಟೋ ಚಾಲಕನ ಭೀಕರ ಹಲ್ಲೆ! Bheema Theera
Published on
ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳ ದೇವಲಗಾಣಗಾಪುರದಲ್ಲಿ ಭೀಕರ ಹಲ್ಲೆ ನಡೆದಿದೆ. ಕೇವಲ 'ದಿಟ್ಟಿಸಿ ನೋಡಿದ' ಸಣ್ಣ ವಿಚಾರವೇ ನೆಪವಾಗಿ, ಟಂ-ಟಂ ಚಾಲಕನಾಗಿದ್ದ 19 ವರ್ಷದ ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ಮಾಡಿರುವ ಘಟನೆ ಭೀಮಾ ತೀರದ ( Bheema Theera ) ಜನತೆಯನ್ನು ಬೆಚ್ಚಿಬೀಳಿಸಿದೆ.
ಶುಕ್ರವಾರ ನಸುಕಿನ ಜಾವ ಸುಮಾರು 2:17 ರ ಸುಮಾರಿಗೆ ದೇವಲಗಾಣಗಾಪುರದ ಸಂಗಮ ರಸ್ತೆಯಲ್ಲಿರುವ ಅವಧೂತ ಆಶ್ರಮದ ಸಮೀಪ ಈ ಕ್ರೌರ್ಯ ನಡೆದಿದೆ. ಗ್ರಾಮದ ದತ್ತು (19) ಎಂಬ ಟಂ-ಟಂ ಚಾಲಕ ಹಲ್ಲೆಗೊಳಗಾಗಿದ್ದಾನೆ. ದತ್ತು ಮೇಲೆ ಅದೇ ಗ್ರಾಮದ ಪ್ರಜ್ವಲ್ ಮಲ್ಕಪ್ಪ ಹೊಸಮನಿ ಹಾಗೂ ಪ್ರೀತಮ್ ಹೊಸಮನಿ ಎಂಬಿಬ್ಬರು ದಾಳಿ ನಡೆಸಿ ಮಾರಕಾಸ್ತ್ರಗಳಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ದತ್ತು ಅವರನ್ನು ತಕ್ಷಣವೇ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 'ಆರೋಪಿಗಳು ತಂಗಿದ್ದ ಜಾಗದಲ್ಲಿ ದಿಟ್ಟಿಸಿ ನೋಡಿದೆ' ಎಂಬ ಕ್ಷುಲ್ಲಕ ನೆಪವನ್ನಿಟ್ಟುಕೊಂಡು ತನ್ನ ಮೇಲೆ ಹಲ್ಲೆ ನಡೆಸಿದರು ಎಂದು ಗಾಯಾಳು ಯುವಕ ಆಸ್ಪತ್ರೆಯಲ್ಲಿದ್ದಾಗ ನೀಡಿರುವ ಹೇಳಿಕೆಯಿಂದ ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ದೇವಲಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳೀಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪವಿತ್ರ ಕ್ಷೇತ್ರದಲ್ಲೇ ನಡುರಾತ್ರಿ ನಡೆದ ಈ ಭೀಕರ ಹಲ್ಲೆಯಿಂದಾಗಿ ಇಡೀ ಗ್ರಾಮದಲ್ಲಿ ತೀವ್ರ ಆತಂಕ ಹಾಗೂ ಬೂದಿ ಮುಚ್ಚಿದ ಕೆಂಡದಂತಹ ವಾತಾವರಣ ನಿರ್ಮಾಣವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net