ಇಂದು ಪತ್ರಿಕಾಗೋಷ್ಠಿ ನಡೆಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಎಸ್ಸೆಸ್ಸೆಲ್ಸಿ ಪರೀಕ್ಷೆಯ ಅಂಕವನ್ನು ಈ ವರ್ಷದಿಂದಲೇ 625 ರಿಂದ 525ಕ್ಕೆ ಇಳಿಸಿರುವುದಾಗಿ ಘೋಷಣೆ ಮಾಡಿದರು. ಅಲ್ಲದೆ, ತೃತೀಯ ಭಾಷೆಗೆ ಗ್ರೇಡ್ ಪದ್ದತಿ ಜಾರಿಗೆ ತಂದಿರುವುದಾಗಿ ತಿಳಿಸಿದರು. ಈ ಮೂಲಕ ಹಿಂದಿ, ಉರ್ದು, ಕೊಂಕಣಿ ಸೇರಿದಂತೆ ಇತರೆ ಮೂರನೇ ಭಾಷೆಗಳಿಗೆ ಗ್ರೇಡ್ ಪದ್ಧತಿ ಅನ್ವಯವಾಗಲಿದೆ ಎಂದರು.