ನಾನು ಗರ್ಭ ಧರಿಸಲು ಕೊಹ್ಲಿಯೇ ಕಾರಣ ಎಂದ ಮಹಿಳೆ! ವೈರಲ್​ ವಿಡಿಯೋಗೆ ಫ್ಯಾನ್ಸ್​ ರಿಯಾಕ್ಷನ್​ ಹೀಗಿತ್ತು... Virat Kohli

ನಾನು ಗರ್ಭ ಧರಿಸಲು ಕೊಹ್ಲಿಯೇ ಕಾರಣ ಎಂದ ಮಹಿಳೆ! ವೈರಲ್​ ವಿಡಿಯೋಗೆ ಫ್ಯಾನ್ಸ್​ ರಿಯಾಕ್ಷನ್​ ಹೀಗಿತ್ತು... Virat Kohli
ನಾನು ಗರ್ಭ ಧರಿಸಲು ಕೊಹ್ಲಿಯೇ ಕಾರಣ ಎಂದ ಮಹಿಳೆ! ವೈರಲ್​ ವಿಡಿಯೋಗೆ ಫ್ಯಾನ್ಸ್​ ರಿಯಾಕ್ಷನ್​ ಹೀಗಿತ್ತು... Virat Kohli
Published on

ಪ್ರಮುಖ ಮುಖ್ಯಾಂಶಗಳು

  • ವಿರಾಟ್ ಕೊಹ್ಲಿ ವಿರುದ್ಧ ಮಹಿಳೆಯೊಬ್ಬಳು ಮಾಡಿರುವ ಆರೋಪಗಳು ಜಾಲತಾಣದಲ್ಲಿ ವೈರಲ್ ಆಗಿವೆ.
  • ವಿರಾಟ್ ಕೊಹ್ಲಿಯಿಂದಲೇ ತಾನು ಗರ್ಭಿಣಿಯಾಗಿರುವುದಾಗಿ ಮಹಿಳೆ ಹೇಳಿದ್ದಾಳೆ
  • ಬೇಕಿದ್ದರೆ ನೋಡಿ ಎಂದು ತನ್ನ ಬೇಬಿ ಬಂಪ್ ಅನ್ನು ಮಹಿಳೆ ಪ್ರದರ್ಶಿಸಿದ್ದಾಳೆ
Virat Kohli : ಕೀಡಾಭಿಮಾನಿಗಳು ಎದುರು ನೋಡುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್-2026ರ ಮೆಗಾ ಟೂರ್ನಮೆಂಟ್ ಆರಂಭವಾಗಲು ಇನ್ನೂ ಒಂದೇ ದಿನ ಬಾಕಿ ಇದೆ. ಈಗಾಗಲೇ ಐಪಿಎಲ್​ 19ನೇ ಆವೃತ್ತಿಯ ಕಂಪ್ಲೀಟ್​ ವೇಳಾಪಟ್ಟಿಯನ್ನು ಫೈನಲ್​ ಮಾಡಲಾಗಿದೆ. ಈ ಸೀಸನ್​ನ ಮೊದಲ ಪಂದ್ಯ ಹಾಲಿ ಚಾಂಪಿಯನ್​ ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ಮತ್ತು ಸನ್‌ರೈಸರ್ಸ್ ಹೈದರಾಬಾದ್ ( SRH ) ನಡುವೆ ನಡೆಯಲಿದೆ. ಆದರೆ, ಇದೇ ಸಂದರ್ಭದಲ್ಲಿ, ವಿರಾಟ್ ಕೊಹ್ಲಿ ವಿರುದ್ಧ ಮಹಿಳೆಯೊಬ್ಬಳು ಮಾಡಿರುವ ಆರೋಪಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಅಂದಹಾಗೆ, ವಿರಾಟ್ ಕೊಹ್ಲಿ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಸಚಿನ್ ತೆಂಡೂಲ್ಕರ್ ಅವರಂತೆಯೇ ವಿರಾಟ್ ಕೊಹ್ಲಿ ಕೂಡ ಸುಮಾರು 15 ವರ್ಷಗಳ ಕಾಲ ಟೀಮ್ ಇಂಡಿಯಾ ಕ್ರಿಕೆಟ್ ಅನ್ನು ಆಳಿದರು. ಅಷ್ಟೇ ಅಲ್ಲ, ಟೀಮ್ ಇಂಡಿಯಾದ ನಾಯಕನಾಗಿ ಅನೇಕ ಗೆಲುವುಗಳನ್ನು ತಂದುಕೊಡುವ ಮೂಲಕ ಇತಿಹಾಸ ಕೂಡ ಸೃಷ್ಟಿಸಿದ್ದಾರೆ. ಸಾಕಷ್ಟು ದಾಖಲೆಗಳನ್ನು ಬರೆದಿರುವ ಕೊಹ್ಲಿ, ದಾಖಲೆಗಳ ಸರದಾರ, ಚೇಸ್​ ಮಾಸ್ಟರ್​, ರನ್​ ಮೆಷಿನ್ ಹಾಗೂ ಕ್ರಿಕೆಟ್​ ಲೋಕದ ಕಿಂಗ್​ ಎಂದೇ ಜಗಜ್ಜಾಹೀರಾಗಿದ್ದಾರೆ. ಪ್ರಸ್ತುತ ಟಿ20 ಮತ್ತು ಟೆಸ್ಟ್​ ಪಂದ್ಯಗಳಿಗೆ ವಿದಾಯ ಹೇಳಿರುವ ಕೊಹ್ಲಿ, ಏಕದಿನ ಪಂದ್ಯಗಳನ್ನು ಮಾತ್ರ ಆಡುತ್ತಿದ್ದಾರೆ. ಅದೇ ರೀತಿ ತಮ್ಮ ಐಪಿಎಲ್​ ಜರ್ನಿಯನ್ನು ಮುಂದುವರಿಸಿದ್ದಾರೆ. ಇದೀಗ 19ನೇ ಆವೃತ್ತಿಯಲ್ಲಿ ಮತ್ತಷ್ಟು ದಾಖಲೆಗಳನ್ನು ಬರೆಯಲು ಕೊಹ್ಲಿ ಸಜ್ಜಾಗುತ್ತಿದ್ದಾರೆ. ಇದರ ನಡುವೆ ಯುವತಿಯೊಬ್ಬಳು ಕೊಹ್ಲಿ ವಿರುದ್ಧ ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾಳೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ವೈರಲ್​ ಆಗಿದೆ.

ವಿಡಿಯೋದಲ್ಲಿ ಏನಿದೆ?

ತೆಲುಗು ಭಾಷೆಯ ಮಹಿಳಾ ಕ್ರಿಕೆಟ್ ಅಭಿಮಾನಿಯೊಬ್ಬರು ವಿರಾಟ್ ಕೊಹ್ಲಿ ಬಗ್ಗೆ ಆಘಾತಕಾರಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಆ ಮಹಿಳೆ ಪ್ರಸ್ತುತ ಏಳು ತಿಂಗಳ ಗರ್ಭಿಣಿಯಾಗಿದ್ದು, ವಿರಾಟ್ ಕೊಹ್ಲಿಯಿಂದಲೇ ತಾನು ಗರ್ಭಿಣಿಯಾಗಿರುವುದಾಗಿ ಹೇಳಿದ್ದಾಳೆ. ವಿಡಿಯೋ ಆರಂಭದಲ್ಲಿ ವಿರಾಟ್​ ಕೊಹ್ಲಿ ನನಗೆ ಲವ್​ ಬೈಟ್​ ಕೊಟ್ಟಿದ್ದಾರೆ ಎಂದು ತನ್ನ ಕತ್ತಿನ ಭಾಗವನ್ನು ತೋರಿಸುತ್ತಾಳೆ. ಆ ಬಳಿಕ, ನೀವು ಯಾರು ಕೂಡ ನಂಬುವುದಿಲ್ಲ, ನಾನು ಈಗಲೂ ಒಂದು ಸಾಕ್ಷಿಯನ್ನು ಸಾಬೀತು ಮಾಡುತ್ತೇನೆ. ನಾನು ವಿರಾಟ್​ ಕೊಹ್ಲಿಯವರ ಮಗುವನ್ನು ಹೊರುತ್ತಿದ್ದೇನೆ. ಬೇಕಿದ್ದರೆ ನೋಡಿ ಎಂದು ಆಕೆ ಬೇಬಿ ಬಂಪ್ ಪ್ರದರ್ಶಿಸಿದ್ದಾಳೆ. ಆಕೆಯ ಮಾತುಗಳನ್ನು ಕೇಳಿ ಯುವಕನೊಬ್ಬ ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾನೆ.
ಸದ್ಯ ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ವಿರಾಟ್ ಕೊಹ್ಲಿ ಅಭಿಮಾನಿಗಳು ಮಹಿಳೆಯ ವಿರುದ್ಧ ಆಕ್ರೋಶಗಳ ಸುರಿಮಳೆಗೈಯುತ್ತಿದ್ದಾರೆ. ನಿನ್ನ ಮುಖಕ್ಕೆ ವಿರಾಟ್ ಕೊಹ್ಲಿ ಬೇರೆ ಬೇಕೇ? ಎಂದು ಕಾಮೆಂಟ್​ಗಳ ಮೂಲಕ ಮಹಿಳೆಯ ಜನ್ಮ ಜಾಲಾಡುತ್ತಿದ್ದಾರೆ.
ಅಂದಹಾಗೆ, ಇದು ಕೇವಲ ಗಮನ ಸೆಳೆಯಲು ಅಥವಾ ಮನೋರಂಜನೆಗಾಗಿ ಮಾಡಿದ ವಿಡಿಯೋವಾಗಿದೆ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ವಿರಾಟ್ ಕೊಹ್ಲಿಯವರ ಕುರಿತು ಇಂತಹ ಆಧಾರರಹಿತ ಮತ್ತು ಸುಳ್ಳು ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇಂತಹ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಬೇಡಿ.
ಅಂದಹಾಗೆ, 19ನೇ ಆವೃತ್ತಿಯು ಐಪಿಎಲ್​, ಮಾರ್ಚ್ 28ರಂದು ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ತವರು ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಸಂಜೆ 7.30ಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net