ಎಸ್‌ಆರ್‌ವಿ ಎಫ್‌ಸಿ ಚಾಂಪಿಯನ್

ಅಮ್ಮತ್ತಿಯಲ್ಲಿ ಕಳೆದ ಫಟ್ಬಾಲ್ ಟೂರ್ನಮೆಂಟ್‌ನಲ್ಲಿ ಚಾಂಪಿಯನ್ ಆದ ಮಡಿಕೇರಿಯ ಎಸ್‌ಆರ್‌ವಿ ಎಫ್‌ಸಿ ತಂಡ.
ಅಮ್ಮತ್ತಿಯಲ್ಲಿ ಕಳೆದ ಫಟ್ಬಾಲ್ ಟೂರ್ನಮೆಂಟ್‌ನಲ್ಲಿ ಚಾಂಪಿಯನ್ ಆದ ಮಡಿಕೇರಿಯ ಎಸ್‌ಆರ್‌ವಿ ಎಫ್‌ಸಿ ತಂಡ.
Published on
ಗೋಣಿಕೊಪ್ಪಲು: ಅಮ್ಮತ್ತಿಯಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆದ ಫುಟ್ಬಾಲ್ ಟೂರ್ನಮೆಂಟ್‌ನಲ್ಲಿ ಮಡಿಕೇರಿಯ ಎಸ್‌ಆರ್‌ವಿ ಎಫ್‌ಸಿ ತಂಡ ಐಎನ್‌ಎಸ್ ಗುಡ್ಡೆಹೊಸರು ಎಫ್‌ಸಿ ವಿರುದ್ಧ 3-1 ಅಂತರದಿಂದ ಗೆಲುವು ಸಾಧಿಸಿತು. ಕರ್ನಾಟಕ ಸ್ಟೇಟ್ ಫುಟ್ಬಾಲ್ ಅಸೋಸಿಯೇಷನ್ ಆಶ್ರಯದಲ್ಲಿ ನಡೆದ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಪಂದ್ಯದಲ್ಲಿ ಎಸ್‌ಆರ್‌ವಿ ಎಫ್‌ಸಿ ಮೇಲುಗೈ ಸಾಧಿಸಿ ಚಾಂಪಿಯನ್ನು ಆಗಿ ಹೊರಹೊಮ್ಮಿತು. ಪಂದ್ಯಾವಳಿಯಲ್ಲಿ ಜಿಲ್ಲೆಯ 10 ತಂಡಗಳು ಭಾಗವಹಿಸಿದ್ದವು. ಬೆಸ್ಟ್ ಗೋಲ್‌ಕೀಪರ್ ಆಗಿ ಎಸ್‌ಆರ್‌ವಿ ತಂಡದ ಮಣಿ, ಅತ್ಯಧಿಕ ಗೋಲ್ ಹೊಡೆದವರು ಎಸ್.ಆರ್.ವಿ.ತಂಡದ ಹಾಶೀರ್, ಬೆಸ್ಟ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಐಎನ್‌ಎಸ್ ತಂಡದ ಮುರ್ಷಿದ್ ಪ್ರಶಸ್ತಿ ಪಡೆದುಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net