ಗ್ಯಾರಂಟಿ ಅನುಷ್ಠಾನದಲ್ಲಿ ಶ್ರೀನಿವಾಸಪುರಕ್ಕೆ 2ನೇ ಸ್ಥಾನ guarantee

ಗ್ಯಾರಂಟಿ ಅನುಷ್ಠಾನದಲ್ಲಿ ಶ್ರೀನಿವಾಸಪುರಕ್ಕೆ 2ನೇ ಸ್ಥಾನ guarantee
ಗ್ಯಾರಂಟಿ ಅನುಷ್ಠಾನದಲ್ಲಿ ಶ್ರೀನಿವಾಸಪುರಕ್ಕೆ 2ನೇ ಸ್ಥಾನ guarantee
Published on
ಶ್ರೀನಿವಾಸಪುರ: ತಾಲೂಕಿನಲ್ಲಿ ಅನ್ನಭಾಗ್ಯ, ಯುವಶಕ್ತಿ ಯೋಜನೆಗಳ ಅನುಷ್ಠಾನದಲ್ಲಿ ಜಿಲ್ಲೆಗೆ ತಾಲೂಕು 2ನೇ ಸ್ಥಾನದಲ್ಲಿದ್ದು, ಪ್ರಥಮ ಸ್ಥಾನ ಪಡೆಯಲು ಶ್ರಮಿಸುತ್ತಿದ್ದೇವೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸರ್ವೇಶ್​ ತಿಳಿಸಿದರು.guarantee
ತಾಪಂ ಸಭಾಂಗಣದ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 14ನೇ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದೆ 2-3 ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಸೋರಿಕೆಯಾಗುತ್ತಿದೆ ಎಂಬ ದೂರುಗಳು ಬಂದಿದ್ದು, ಸಮಸ್ಯೆ ಸರಿಪಡಿಸಲಾಗಿದೆ. ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ 200 ವಾಟ್​ ಹೆಚ್ಚಿಗೆ ವಿದ್ಯುತ್​ ಬಳಕೆಗೆ ಕೆಲ ಗ್ರಾಹಕರು ಹೆಚ್ಚಾಗಿದ್ದು, ಇವರಿಗೆ ಅರಿವು ಮೂಡಿಸಿದ ಬಳಿಕ ಆ ಸಂಖ್ಯೆ ಕಡಿಮೆಯಾಗಿದೆ ಎಂದರು.
ಯುವನಿಧಿಗೆ ಸಂಬಂಧಿಸಿದಂತೆ ಈಗಾಗಲೇ 787 ಮಂದಿಗೆ ನೇರವಾಗಿ ಅವರ ಖಾತೆಗಳಿಗೆ ಹಣ ಕ್ರೆಡಿಟ್​ ಆಗುತ್ತಿದೆ. ಪ್ರಸಕ್ತ ವರ್ಷದಲ್ಲಿ 600 ಅರ್ಜಿ ಬಂದಿವೆ. ಇವುಗಳನ್ನು ಪರಿಶೀಲಿಸಲಾಗುವುದು. ಗೃಹಲಕ್ಷಿ$್ಮ ಯೋಜನೆಯಡಿ ಗ್ರಾಮೀಣಭಾಗದಲ್ಲಿ 46,760 ಕಾರ್ಡ್​ದಾರರಿಗೆ ಪ್ರತಿ ತಿಂಗಳು ಅವರ ಖಾತೆಗೆ ಹಣ ಸೇರುತ್ತಿದೆ. ಇವುಗಳಲ್ಲಿ 74 ಕಾರ್ಡ್​ಗಳು ಜಿಎಸ್​ಟಿಐಟಿಯಿಂದ ವಂಚಿತರಾಗಿದ್ದಾರೆ ಎಂದರು.
ನಿರ್ದೇಶಕ ವೆಂಕಟರೆಡ್ಡಿ ಮಾತನಾಡಿ, ಶ್ರೀನಿವಾಸಪುರದಿಂದ ನೇರವಾಗಿ ಸಿಗಂದೂರಿಗೆ ಬಸ್​ ಸಂಪರ್ಕ ಕಲ್ಪಿಸಿಕೊಡಬೇಕೆಂದು ಕೆಎಸ್​ಆರ್​ಟಿಸಿ ಅಧಿಕಾರಿಗಳಿಗೆ ಮನವಿ ಮಾಡಿದರು. ಇದಕ್ಕೆ ಸಂಬಂಧಪಟ್ಟ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ರಸ್ತೆ ಮಾರ್ಗ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಮೊತ್ತೊಬ್ಬ ನಿರ್ದೇಶಕ ಶಿವರಾಮ್​ ಶರ್ಮ ಮಾತನಾಡಿ, ಸರ್ಕಾರ ನಮ್ಮನ್ನು ನೇಮಿಸಿರುವ ನಿರ್ದೇಶಕರ ಸ್ಥಾನಗಳಿಗೆ ನಾವು ಸಾಮಾಜಿಕ ನ್ಯಾಯ ಕೊಡಬೇಕು, ಇದಕ್ಕೆ ಪೂರಕವಾಗಿ ಅಧಿಕಾರಿಗಳು ಸರ್ಕಾರದಿಂದ ಬರುವ ಸೌಲಭ್ಯಗಳು, 5 ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸುಧಾರಣೆಗಾಗಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net