ಶ್ರೀನಿವಾಸಪುರದ sslc ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ತಾಲೂಕಿನಿಂದ ವರ್ಗಾವಣೆಯಾಗಿದ್ದ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕೆ.ಸಿ.ವಸಂತಾ ಮತ್ತು ಬಿಆರ್ಪಿಸಿಆರ್ಪಿ ಶಿಕ್ಷಕರನ್ನು ಸನ್ಮಾನಿಸಲಾಯಿತು. ನೂತನ ಬಿಆರ್ಸಿ ಗೀತಾ, ಬಿಆರ್ಪಿ ವೆಂಕಟಾಚಲಪತಿ ಇದ್ದರು.
Published on:
Copied
Follow Us
ಶ್ರೀನಿವಾಸಪುರ: ತಾಲೂಕಿನಲ್ಲಿ ಎಲ್ಲ ಶಿಕ್ಷಕರ ಶ್ರಮದಿಂದ ಸತತವಾಗಿ ಎಸ್ಸೆಸ್ಸೆಲ್ಸಿ sslc ಫಲಿತಾಂಶ ಜಿಲ್ಲೆಗೆ ಸತತವಾಗಿ ಪ್ರಥಮ ಸ್ಥಾನ ಬರುತ್ತಿದೆ. ಪ್ರಸಕ್ತ ವರ್ಷದಲ್ಲೂ ತಾಲೂಕು ಪ್ರಥಮ ಸ್ಥಾನ ಬರಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮುನಿಲಕ್ಷಯ್ಯ ತಿಳಿಸಿದರು.
ಪಟ್ಟಣದ ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳ ಕಚೇರಿಯಲ್ಲಿ ತಾಲೂಕಿನಿಂದ sslc ವರ್ಗಾವಣೆಯಾಗಿದ್ದ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕೆ.ಸಿ.ವಸಂತಾ ಮತ್ತು ಬಿಆರ್ಪಿಸಿಆರ್ಪಿ ಶಿಕ್ಷಕರಿಗೆ ವೃಂದ ಸಂಘಗಳು ಮತ್ತು ಕಚೇರಿ ಸಿಬ್ಬಂದಿಯಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿ ತಾಲೂಕಿನಲ್ಲಿ ಎಲ್ಲ ಶಿಕ್ಷಕರು ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಈ ಬಾರಿಯೂ ನಮಗೆ ಎಸ್ಸೆಸ್ಸೆಲ್ಸಿ ಫಲಿತಾಂಶ ಜಿಲ್ಲೆಗೆ ಪ್ರಥಮ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಕ್ಷರದಾಸೋಹ ಇಲಾಖೆ ಸಹಾಯಕ ನಿರ್ದೇಶಕಿ ಸುಲೋಚನ ಮಾತನಾಡಿ, ಇಲಾಖೆಯಿಂದ ಬರುವ ಆಹಾರ ಪದಾರ್ಥಗಳು, ಮೊಟ್ಟೆ, ಬಾಳೆಹಣ್ಣು ಚುಕ್ಕಿ ಇವುಗಳನ್ನು ನಿಗದಿತ ಸಮಯಕ್ಕೆ ಪಡೆದುಕೊಂಡು ವಿದ್ಯಾರ್ಥಿಗಳಿಗೆ ನೀಡಿ, ಮಧ್ಯಾಹ್ನ ಶುಚಿ&ರುಚಿಕರವಾದ ಊಟವನ್ನು ವಿದ್ಯಾರ್ಥಿಗಳಿಗೆ ನೀಡಬೇಕೆಂದು ತಿಳಿಸಿದರು.