ಶ್ರೀಮರಳೇಶ್ವರಸ್ವಾಮಿ ಬ್ರಹ್ಮರಥೋತ್ಸವ ಸಂಪನ್ನ

ಕೊಳ್ಳೇಗಾಲ ಪಟ್ಟಣದಲ್ಲಿ ಶ್ರೀ ಮೀನಾಕ್ಷೀ ಸಮೇತ ಶ್ರೀ ಮರಳೇಶ್ವರಸ್ವಾಮಿ ಬ್ರಹ್ಮ ರಥೋತ್ಸವ  ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಕೊಳ್ಳೇಗಾಲ ಪಟ್ಟಣದಲ್ಲಿ ಶ್ರೀ ಮೀನಾಕ್ಷೀ ಸಮೇತ ಶ್ರೀ ಮರಳೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
Published on
ಕೊಳ್ಳೇಗಾಲ: ಪಟ್ಟಣದಲ್ಲಿ ಸೋಮವಾರ ಶ್ರೀ ಮೀನಾಕ್ಷೀ ಸಮೇತ ಶ್ರೀ ಮರಳೇಶ್ವರಸ್ವಾಮಿ ಬ್ರಹ್ಮರಥೋತ್ಸವ ಭಕ್ತಿಭಾವದಿಂದ ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು
ಶ್ರೀ ಮರಳೇಶ್ವರಸ್ವಾಮಿ ದೇವಾಲಯದಲ್ಲಿ ಮುಂಜಾನೆಯಿಂದಲೇ ರುದ್ರಾಭಿಷೇಕ, ಶಿವಯಾಗ ಪೂಜಾ ದಿಗ್ಬಲಿ, ಮಹಾಮಂಗಳಾರತಿ ಇನ್ನಿತರ ವಿಶೇಷ ಪೂಜೆ ಕೈಂಕರ್ಯ ನಡೆಸಲಾಯಿತು. ಬಳಿಕ ದೇವಾಲಯ ಮುಂಭಾಗದಲ್ಲಿ ಹೂವಿನ ಅಲಂಕೃತಗೊಂಡು ಸಿದ್ಧ ಗೊಂಡಿದ್ದ ರಥಕ್ಕೆ ಭಕ್ತರು ಮೀನಾಕ್ಷಿ ಸಮೇತ ಶ್ರೀ ಮರಳೇಶ್ವರಸ್ವಾಮಿ ಉತ್ಸವಮೂರ್ತಿಯನ್ನು ದೇವಾಲಯ ಮುಂಭಾಗಕ್ಕೆ ಹೊತ್ತು ತಂದು ರಥದ ಸುತ್ತಲೂ ಮೂರು ಪ್ರದಕ್ಷಿಣೆ ಹಾಕಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.
ನಂತರ ರಥದ ಚಕ್ರಕ್ಕೆ ಶಾಸಕ ಎ.ಆರ್. ಕೃಷ್ಣಮೂರ್ತಿ ಈಡುಗಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ರಾಜ ಬೀದಿಗಳಲ್ಲಿ ಭಕ್ತರು ರಥವನ್ನು ಎಳೆದು ಸಾಗಿದರು. ನೆರೆದಿದ್ದ ಎಲ್ಲ ಭಕ್ತರಿಗೂ ಅನ್ನ ಸಂತರ್ಪಣೆ ಮಾಡಲಾಯಿತು. ಇಂದಿನ ಎಲ್ಲ ಪೂಜಾ ಕೈಂಕರ್ಯವನ್ನು ದೇವಸ್ಥಾನದ ಪ್ರಧಾನ ಅರ್ಚಕ ಡಾ.ನಾಗೇಂದ್ರ ಎನ್.ಭಟ್, ಶಿವರಾಮ್.ಜಿ.ಭಟ್ ಅವರು ನೆರವೇರಿಸಿದು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ಕಾರ್ಯದರ್ಶಿ ಬಸ್ತೀಪುರ ರವಿ, ಯಳಂದೂರು ಗ್ಯಾರಂಟಿ ಯೋಜನೆ ಅಧ್ಯಕ್ಷ ಪ್ರಭು ಪ್ರಸಾದ್, ದೇವಾಂಗ ಸಮಾಜದ ಯಜಮಾನ ನಾಗರಾಜಯ್ಯ ಅಚ್ಗಾಳ್, ಮುಖಂಡರಾದ ಚೇತನ್ ದೊರೈರಾಜು, ನಗರಸಭೆ ಮಾಜಿ ಸದಸ್ಯರು, ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ನಿರಂಜನ್, ಕುಮಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net