ಶಿವನಸಮುದ್ರದ ಸಮೂಹ ದೇವಾಲಯಕ್ಕೆ ಸೇರಿದ ಶ್ರೀ ಮೀನಾಕ್ಷಿ ಸಮೇತ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಮುಂಜಾನೆ ಶಿವಯಾಗ, ಬಲಿ ಪ್ರದಾನ, ರಥ ಪ್ರತಿಷ್ಠೆ, ಯಾತ್ರಾ ದಾನೋತ್ಸವ ಹಾಗೂ ಮಂಟಪೋತ್ಸವ ವಿಶೇಷ ಪೂಜಾ ಕೈಂಕರ್ಯ ನೆರವೇರಿತು. ದೇವಾಲಯ ಮುಂಭಾಗದಲ್ಲಿ ಹೂವುಗಳಿಂದ ಅಲಂಕೃತಗೊಂಡಿದ್ದ ರಥದಲ್ಲಿ ಶ್ರೀ ಮೀನಾಕ್ಷಿ ಸಮೇತ ಶ್ರೀ ಸೋಮೇಶ್ವರ ಉತ್ಸವ ಮೂರ್ತಿಯನ್ನು ಪೂಜೆ ಸಲ್ಲಿಸಲಾಯಿತು. ಬಳಿಕ ರಥೋತ್ಸವ ರಾಜ ಬೀದಿಗಳಲ್ಲಿ ಸಾಗಿತು. ಮನೆ ಮುಂಭಾಗ ಆಗಮಿಸಿದ ರಥೋತ್ಸವಕ್ಕೆ ಭಕ್ತರು ಕೈ ಮುಗಿದು ಹೂವು, ಹಣ್ಣು, ಕಾಯಿ ಸಮರ್ಪಿಸಿದರು.