ಲಕ್ಷ್ಮೀತಿಮ್ಮಪ್ಪ ದೇವಸ್ಥಾನದಲ್ಲಿ ಶ್ರೀರಾಮ ನವಮಿ ಆಚರಣೆ

ಗುರುಮಠಕಲ್​ : ತಾಲೂಕಿನ ಬೋರಬಂಡ ಲಕ್ಷ್ಮೀತಿಮ್ಮಪ್ಪ ದೇವಸ್ಥಾನದಲ್ಲಿ ಶೀರಾಮನವಮಿ ಹಿನ್ನೆಲೆ ಶೀರಾಮ ಕಲ್ಯಾಣ ಉತ್ಸವ ಮತ್ತು ಭವ್ಯ ರಥೋತ್ಸವ ನೆರವೇರಿತು.
ಗುರುಮಠಕಲ್​ : ತಾಲೂಕಿನ ಬೋರಬಂಡ ಲಕ್ಷ್ಮೀತಿಮ್ಮಪ್ಪ ದೇವಸ್ಥಾನದಲ್ಲಿ ಶೀರಾಮನವಮಿ ಹಿನ್ನೆಲೆ ಶೀರಾಮ ಕಲ್ಯಾಣ ಉತ್ಸವ ಮತ್ತು ಭವ್ಯ ರಥೋತ್ಸವ ನೆರವೇರಿತು.
Published on
ಗುರುಮಠಕಲ್​ : ಶ್ರೀರಾಮ ನವಮಿ ಹಿನ್ನೆಲೆ ಲಕ್ಷ್ಮೀತಿಮ್ಮಪ್ಪ ದೇವಸ್ಥಾನದಲ್ಲಿ ಶೀರಾಮ ಕಲ್ಯಾಣೋತ್ಸವ ಮತ್ತು ಅದ್ಧೂರಿ ರಥೋತ್ಸವ ನೆರವೇರಿತು.
ತಾಲೂಕಿನ ಬೋರಬಂಡದಲ್ಲಿ ಶ್ರೀಲಕ್ಷ್ಮೀತಿಮ್ಮಪ್ಪ ದೇವಸ್ಥಾನ ಜೀಣೋರ್ದ್ಧಾರ ಸೇವಾ ಸಮಿತಿಯಿಂದ ಬೆಳಿಗ್ಗೆಯಿಂದಲೇ ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ ಹಾಗೂ ಅಲಂಕಾಲ ಸೇವೆ ಮಹಾಪೂಜೆಯನ್ನು ದೇವಸ್ಥಾನದ ಕಾರ್ಯದರ್ಶಿ ನರೇಂದ್ರ ರಾಠೋಡ ದಂಪತಿಗಳಿಂದ ನೆರವೇರಿತು.
ಬಳಿಕ ಅದ್ಧೂರಿ ರಥೋತ್ಸವದಲ್ಲಿ ವಿಶೇಷ ಪೂಜೆ ನೆರವೇರಿಸಿ, ರಥ ಎಳೆಯಲಾಯಿತು. ಲಕ್ಷ್ಮೀತಿಮ್ಮಪ್ಪ ಗೋವಿಂದಾ ಗೋವಿಂದಾ.. ಜೈ ಶೀರಾಮ ಘೊಷಣೆಗಳು ಭಕ್ತರಲ್ಲಿ ಮೊಳಗಿದವು.
ಶೀರಾಮ ಕಲ್ಯಾಣ ಉತ್ಸವದಲ್ಲಿ ಗುರುಮಠಕಲ್​ ಪಟ್ಟಣ ಸೇರಿದಂತೆ ಯಾದಗಿರಿ ಅಲ್ಲದೇ ತೆಲಂಗಾಣದ ಭಕ್ತರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಈ ಸಂಧರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯೆಕ್ಷೆ ಲಕ್ಷ್ಮಿಬಾಯಿ, ಮಣಿಕಂಠ ರಾಠೋಡ, ಬೋರಬಂಡಾ, ರಾಜು ಬ ರಾಠೋಡ, ರಮೇಶ ಪವಾರ, ಪ್ರಮುಖರಾದ ಆನಂದ ಬೋಯಿನಿ, ಅನಂತಪ್ಪ ಯದ್ಲಾಪೂರ, ಗೋಪಾಲ ನಾಯಕ್​ ಸೇರಿದಂತೆ ಭಕ್ತರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net