

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿತಮ್ಮ 33ನೇವರ್ಷದ ಚಾತುರ್ಮಾಸ್ಯ ವ್ರತಾಚರಣೆಯನ್ನುಗೋಕರ್ಣದ ಅಶೋಕೆಯ ಮೂಲಮಠದಪರಿಸರದಲ್ಲಿ ಕೈಗೊಂಡಿದ್ದಾರೆ.ಬುಧವಾರ (ಜು.29)ರಂದು ವ್ಯಾಸಪೂಜೆಯಮೂಲಕ ಚಾತುರ್ಮಾಸ್ಯ ವ್ರತಪ್ರಾರಂಭವಾಗಿ ಸೆ.26 ರಂದು ಪೂರ್ಣಗೊಳ್ಳಲಿದೆ.
ಧಾರ್ಮಿಕತೆಯಜೊತೆಗೆ ಜನಜಾಗೃತಿ ಎಂಬ ವಿಶಿಷ್ಟಪರಿಕಲ್ಪನೆಯನ್ನು ಮೈಗೂಡಿಕೊಂಡಿರುವಶ್ರೀಗಳು ಪ್ರತಿವರ್ಷದಂತೆಚಾತುರ್ಮಾಸ್ಯವನ್ನು ವಿಷಯಾಧಾರಿತಜನಜಾಗೃತಿಗೆ ಬಳಸಿಕೊಂಡಿದ್ದಾರೆ.ಈ ವರ್ಷ ಆಹಾರದಕುರಿತಾಗಿ ಸಮಾಜದಲ್ಲಿ ಜಾಗೃತಿಮೂಡಿಸಲು ‘ಅನ್ನಬ್ರಹ್ಮ ಚಾತುರ್ಮಾಸ್ಯ’ಎಂಬ ಹೆಸರಿನೊಂದಿಗೆ ಚಾತುರ್ಮಾಸ್ಯವನ್ನುಸಂಕಲ್ಪಿಸಿದ್ದಾರೆ.ಆಹಾರದ ಮಹತ್ವವನ್ನುಜನರಿಗೆ ಮನವರಿಕೆ ಮಾಡಿಕೊಡುವುದಷ್ಟೇಅಲ್ಲದೆ ಅನ್ನವನ್ನು ಗೌರವಿಸುವಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವುದುಈ ಬಾರಿಯ ಚಾತುರ್ಮಾಸ್ಯದಉದ್ದೇಶವಾಗಿದೆ.
60ದಿನಗಳ ಸುದೀರ್ಘಕಾರ್ಯಕ್ರಮದಲ್ಲಿ ಶ್ರೀಗಳುಪ್ರತಿದಿನ ಆಹಾರದ ಕುರಿತು ಪ್ರವಚನನೀಡಲಿದ್ದಾರೆ.ಹಾಗೂ ಪ್ರಾಚೀನವಿಧಾನದ ಪಾರಂಪರಿಕ ಆಹಾರವೂ ಈಚಾತುರ್ಮಾಸ್ಯದಲ್ಲಿ ಇರಲಿದೆ.