ಶ್ರೀ ಕಾಟೇರಮ್ಮ ದೇಗುಲ ವಾರ್ಷಿಕೋತ್ಸವ ಅದ್ದೂರಿ Kateramma Temple

ಶ್ರೀ ಕಾಟೇರಮ್ಮ ದೇಗುಲ ವಾರ್ಷಿಕೋತ್ಸವ ಅದ್ದೂರಿ Kateramma Temple
ಶ್ರೀ ಕಾಟೇರಮ್ಮ ದೇಗುಲ ವಾರ್ಷಿಕೋತ್ಸವ ಅದ್ದೂರಿ Kateramma Temple
Published on
ನರಸಾಪುರ: ಕೋಲಾರ ತಾಲೂಕು ನರಸಾಪುರ ಗ್ರಾಮದ ಡಾ.ಬಿ.ಆರ್​.ಅಂಬೇಡ್ಕರ್​ ಕಾಲನಿಯ ಕೆರೆಯ ಸಮೀಪದಲ್ಲಿ ನೆಲೆಸಿರುವ ಶ್ರೀ ಕೆರೆ ಕಾಟೇರಮ್ಮ ದೇವಾಲಯದ 11ನೇ ವಾರ್ಷಿಕೋತ್ಸವ 2 ದಿನ ಅದ್ದೂರಿಯಾಗಿ ನೆರವೇರಿತು.Kateramma Temple
ವಾರ್ಷಿಕೋತ್ಸವ ಅಂಗವಾಗಿ ದೇವರಿಗೆ ವಿವಿಧ ಹೂವಿನ ಅಲಂಕಾರ, ಮಹಾಗಣಪತಿ ಪೂಜೆ, ಕಳಶ ಪೂಜೆ, ಗಂಗಾಪೂಜೆ, ಪ್ರಧಾನ ಕಳಶ ಸಹಿತ ಪರಿವಾರ ಕಳಶ ಸ್ಥಾಪನೆ, ದುರ್ಗಾ ಹೋಮ, ಪರಿವಾರ ಹೋಮ, ಪುರ್ಣಾಹುತಿ ರುದ್ರಾಭಿಷೇಕ ಸೇರಿವಿವಿಧ ಪೂಜೆ, ಹೋಮಗಳು ಮಾಡಲಾಯಿತು.
ಶ್ರೀ ಕೆರೆ ಕಾಟೇರಮ್ಮ, ಶ್ರೀ ರೇಣುಕಾ ಯಲ್ಲಮ್ಮ ದೇವಿಯರಿಗೆ ವಿಶೇಷ ಪೂಜೆ ಜತೆಗೆ ತಮಟೆ ವಾದ್ಯಗಳೊಂದಿಗೆ ಗ್ರಾಮದ ಅಂಬೇಡ್ಕರ್​, ಇಂದಿರಾ ಕಾಲನಿಯ ಸುಮಂಗಲಿಯರಿಂದ ತಂಬಿಟ್ಟಿನ ದೀಪಗಳೊಂದಿಗೆ ಮೆರವಣಿಗೆ, ಅಗ್ನಿಗುಂಡ ಪ್ರವೇಶ, ಅನ್ನಸಂತರ್ಪಣೆ ಮಾಡಲಾಯಿತು. ಸಂಜೆ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಮೆರವಣಿಗೆ, ಅರ್ಚಕ ಹನಮಂತ ಅವರಿಂದ ಬೆಂಕಿ ಮಡಕೆ ಕರಗ ಅದ್ದೂರಿಯಾಗಿ ನಡೆಯಿತು.
ಗ್ರಾಮದ ಹಿರಿಯರು, ಯುವ ಮುಖಂಡರು, ಸುತ್ತಮುತ್ತಲಿನ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net