ವಚನ ಶಿಲಾ ಮಂಟಪ ಸ್ಥಾಪಿಸಿ ವಿಶ್ವ ದಾಖಲೆ ಬರೆದ ಇಂಗಳೇಶ್ವರದ ಶ್ರೀ ಚನ್ನಬಸವ ಸ್ವಾಮಿಗಳು ಲಿಂಗೈಕ್ಯ

ಇಂಗಳೇಶ್ವರ ವಿರಕ್ತಮಠದ ಶ್ರೀಚನ್ನಬಸವ ಸ್ವಾಮೀಜಿ ಸ್ಥಾಪಿಸಿದ  ವಿಶ್ವದಾಖಲೆಯ ವಚನ ಶಿಲಾಮಂಟಪ
ಇಂಗಳೇಶ್ವರ ವಿರಕ್ತಮಠದ ಶ್ರೀಚನ್ನಬಸವ ಸ್ವಾಮೀಜಿ ಸ್ಥಾಪಿಸಿದ ವಿಶ್ವದಾಖಲೆಯ ವಚನ ಶಿಲಾಮಂಟಪ
Published on

ಪ್ರಮುಖ ಮುಖ್ಯಾಂಶಗಳು

  • ವಿಶ್ವದಾಖಲೆಯ ವಚನ ಶಿಲಾಮಂಟಪದ ಸ್ಥಾಪಿಸಿದ ಪೂಜ್ಯರು
  • ಇಂಗಳೇಶ್ವರ ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮಿಗಳು ಲಿಂಗೈಕ್ಯ
  • 1600 ವಚನ, 1.76 ಲಕ್ಷ ಅಕ್ಷರಗಳ ಲಿಪಿ ಕಟ್ಟಡದ ರೂವಾರಿ ಇನ್ನಿಲ್ಲ

ಪ್ರಶಾಂತರಿಪ್ಪನ್​​ಪೇಟೆ ಬೆಂಗಳೂರು : ವಚನಸಾಹಿತ್ಯವನ್ನು ಪ್ರಕಟಿಸುವ, ಪ್ರಚಾರಮಾಡುವ, ಅನುಷ್ಠಾನಗೊಳಿಸುವ, ಶಾಶ್ವತಗೊಳಿಸುವನಿಟ್ಟಿನಲ್ಲಿ ನಾಡಿನಲ್ಲಿ ಹಲವರಸೇವೆ ಗಣನೀಯ. ಈನಿಟ್ಟಿನಲ್ಲಿ ಬಸವಣ್ಣನವರಜನ್ಮಸ್ಥಳವಾದ ಇಂಗಳೇಶ್ವರ ವಿರಕ್ತಮಠದ ಶ್ರೀಚನ್ನಬಸವ ಸ್ವಾಮಿಗಳಪಾತ್ರ ಅತ್ಯಂತ ಹಿರಿದು. ಜಗತ್ತಿನಲ್ಲಿಮತ್ತಾರು ಮಾಡದ ವಚನ ಶಿಲಾಮಂಟಪವನ್ನುಸ್ಥಾಪಿಸಿದ ಪೂಜ್ಯರು ತಮ್ಮ 97ನೇಇಳಿವಯಸ್ಸಿನಲ್ಲಿ ಗುರುವಾರಲಿಂಗೈಕ್ಯರಾಗಿದ್ದು, ಅವರಕಾರ್ಯಗಳ ಕುರಿತ ನುಡಿನಮನ ಇಲ್ಲಿದೆ.

ಸಾಹಿತ್ಯದಸಾರವನ್ನು ಶಾಶ್ವತಗೊಳಿಸುವುದಕ್ಕಾಗಿವಿವಿಧ ಮಾಧ್ಯಮಗಳಲ್ಲಿ ದಾಖಲೀಕರಣನಡೆಯುತ್ತದೆ. ಕಾಗದ, ತಾಳೆಗರಿ, ಲೋಹಪಟಹಾಗೂ ಕಲ್ಲಿನ ಮೇಲೆ ಬರೆಯಲ್ಪಡುವಶಾಸನಗಳು ಅದಕ್ಕೆ ಸಾಕ್ಷಿ. ಕಲ್ಲಿನಮೇಲಿನ ಬರಹ ಹೆಚ್ಚೆಂದರೆ ಒಂದುದೊಡ್ಡ ಗೋಡೆಯಷ್ಟಿರಬಹುದು. ಆದರೆಇಡೀ ಕಟ್ಟಡವೊಂದು ಕಲ್ಲಿನ ಬರಹದಿಂದಕೂಡಿರುವುದು ದಾಖಲೆಯೇ ಸರಿ.

ಭಕ್ತಿಭಂಡಾರಿ ಬಸವಣ್ಣನವರ ಜನ್ಮಸ್ಥಳಬಾಗೇವಾಡಿ ತಾಲೂಕಿನ ಇಂಗಳೇಶ್ವರದಲ್ಲಿರುವವಿರಕ್ತಮಠದಲ್ಲಿ ನಿರ್ಮಾಣಗೊಂಡಿರುವವಚನ ಶಿಲಾಮಂಟಪವು ವಚನ ಸಾಹಿತ್ಯಕ್ಷೇತ್ರದಲ್ಲೇ ಒಂದುಮೈಲುಗಲ್ಲು. ಶಾಸನಗಳು, ದೇವಾಲಯದನಾಮಫಲಕಗಳನ್ನು ಕಲ್ಲಿನಲ್ಲಿಕೆತ್ತಿಸುವ ಪದ್ಧತಿ ಹಿಂದಿನಿಂದಲೂಇದ್ದು, ಇಂದಿಗೂಕೆಲ ದೇವಾಲಯಗಳಲ್ಲಿ ದೇವರಶ್ಲೋಕಗಳನ್ನು ಕಲ್ಲಿನಲ್ಲಿಕೆತ್ತಿಸಿ ಹಾಕಿರುತ್ತಾರೆ. ಅಂತೆಯೇಕನ್ನಡ ಸಾಹಿತ್ಯಕ್ಕೆ ವಿಶ್ವಮಾನ್ಯತೆಯನ್ನು ತಂದು ಕೊಟ್ಟ ವಚನಸಾಹಿತ್ಯವನ್ನು ಅತ್ಯಂತಭಕ್ತಿ-ಗೌರವಗಳಿಂದಪೂಜಿಸುವ ವರ್ಗ ಈ ನಾಡಿನಲ್ಲಿದೆ. ಆಹಿನ್ನಲೆಯಲ್ಲಿ ಇಂಗಳೇಶ್ವರವಿರಕ್ತಮಠವು ವಚನ ಸಾಹಿತ್ಯವನ್ನುಶಾಶ್ವತವಾಗಿರಿಸುವ ಬಹುದೊಡ್ಡಕಾರ್ಯ ಮಾಡಿರುವುದು ವಚನ ಸಾಹಿತ್ಯಸಕ್ತರಸಂತಸವನ್ನು ಹೆಚ್ಚಿಸಿದೆ.

ವಚನಗಳುಮೂಲದಲ್ಲಿ ತಾಳೆಗರಿಗಳಲ್ಲಿರಚನೆಗೊಂಡಿವೆ. ಹಾಗೆರಚನೆಗೊಂಡ ವಚನಗಳ ಸಾರ ಸಂಗ್ರಹವುಅದೆಷ್ಟೋ ಕಾಲ ಭಕ್ತರ ಮನೆಯ ದೇವರಜಗುಲಿಯಲ್ಲಿ ಪೂಜೆಗೆಸೀಮಿತವಾಗಿದ್ದವು. ಅಂತಹಮಹತ್ವದ ವಚನ ಸಾರಾಮೃತವನ್ನುಓದುಗರ ಕೈಗೆ ನೀಡಿದ್ದು ವಚನಪಿತಾಮಹ ಎಂದೇ ಪ್ರಸಿದ್ಧರಾಗಿದ್ದಡಾ.ಫ.ಗು.ಹಳಕಟ್ಟಿಮತ್ತು ಹರ್ಡೇಕರ್ ಮಂಜಪ್ಪನವರು. ಆನಂತರದಲ್ಲಿ ವಚನಗಳ ಪ್ರಕಟಣೆಯಕಾರ್ಯ ಆರಂಭವಾಯಿತು. ಸರ್ಕಾರ, ಹಲವುಸಂಘ ಸಂಸ್ಥೆಗಳು, ಮಠ-ಮಾನ್ಯಗಳುವಚನ ಪ್ರಕಟಣೆಯನ್ನು ಮಾಡಿದ್ದು, ಆಎಲ್ಲವುಗಳಿಗಿಂತ ಇಂಗಳೇಶ್ವರವಿರಕ್ತಮಠದ ವಚನ ಪ್ರಕಟಣೆ ಇಡೀಜಗತ್ತೇ ತಿರುಗಿ ನೋಡುವಂತೆಮಾಡಿದೆ.

ವಿಶ್ವ ದಾಖಲೆಯ ಲಿಪಿ ಕಟ್ಟಡ: ಇಂಗಳೇಶ್ವರ ವಿರಕ್ತಮಠದ ಹಿರಿಯ ಶ್ರೀಗಳಾದ ಶ್ರೀಚನ್ನಬಸವ ಮಹಾಸ್ವಾಮಿಗಳ ಸತ್ಸಂಕಲ್ಪದ ಪ್ರತೀಕ ಈ ವಚನ ಲಿಪಿ ಕಟ್ಟಡ. 1961ರಲ್ಲಿ ಕೇದಾರ ಪರ್ವತಕ್ಕೆ ಪಾದಯಾತ್ರೆ ಕೈಗೊಂಡಿದ್ದ ಶ್ರೀಗಳು ಕರ್ನಾಟಕದಿಂದ ಮಹಾರಾಷ್ಟ್ರ ಮಾರ್ಗವಾಗಿ ಮಧ್ಯಪ್ರದೇಶಕ್ಕೆ ಹೋದಾಗ; ಭೂಪಾಲದಲ್ಲಿದ್ದ ಕೂಪಲಿಪಿ, ಸ್ತೂಪಲಿಪಿ, ಗಿರಿಲಿಪಿ ಎಂಬ ಪ್ರಾಚೀನ ಶಾಸನಗಳನ್ನು ನೋಡುತ್ತಾರೆ. ಅಂದರೆ ಭಾವಿಗಳ ಶಿಲೆಯ ಮೇಲೆ, ಕಲ್ಲಿನ ಕಂಬಗಳ ಮೇಲೆ ಹಾಗೂ ಪರ್ವತಗಳ ಬಂಡೆಯ ಮೇಲೆ ಬುದ್ದನ ಇತಿಹಾಸವನ್ನು ಕೆತ್ತಿದ್ದರು. ಅದೇರೀತಿ ಋಷಿಕೇಶದಲ್ಲಿರುವ ಗೀತಾಭವನ ಮತ್ತು ಜಬ್ಬಲ್​ಪುರದ ದೇವಾಲಯವೊಂದರಲ್ಲಿ ಸಂಪೂರ್ಣ ಭಗವದ್ಗೀತೆಯನ್ನು ಕಲ್ಲಿನಲ್ಲಿ ಕೆತ್ತಿಸಿದ್ದನ್ನು ನೋಡಿದ ಶ್ರೀಗಳು ಕರ್ನಾಟಕದಲ್ಲಿ ಇಂತಹದ್ದೊಂದು ಲಿಪಿಕಟ್ಟಡವನ್ನು ಕಟ್ಟಬೇಕು ಎಂದು ಸಂಕಲ್ಪ ಮಾಡುತ್ತಾರೆ. ಯಾತ್ರೆಯಿಂದ ಹಿಂದಿರುಗಿದ ನಂತರ ರಾಜ್ಯದ ಹಲವು ಸ್ವಾಮೀಜಿಗಳು, ಸಾಹಿತಿಗಳು, ಸಂಶೋಧಕರು ಹಾಗೂ ಸಮಾಜದ ಮುಖಂಡರೊಂದಿಗೆ ಚರ್ಚಿಸಿ 1968ರಲ್ಲಿ ಕಲ್ಲಿನಲ್ಲಿ ವಚನಗಳನ್ನು ಕೆತ್ತಿಸುವ ಕಾರ್ಯ ಆರಂಭಿಸಿ ಸುಮಾರು 5 ದಶಕಗಳ ಕಾಲ ವಚನಗಳ ಕೆತ್ತನೆ ಕಾರ್ಯ ಮಾಡಿದ್ದಾರೆ. ಈ ಕಾರ್ಯಕ್ಕಾಗಿ ಶ್ರೀಗಳು ಸಾವಿರಾರು ಮೈಲಿ ಪಾದಯಾತ್ರೆ ನಡೆಸಿ ಹಣ ಸಂಗ್ರಹಿಸಿದ್ದಾರೆ. ಈ ವಚನ ಶಿಲಾ ಮಂಟಪದಲ್ಲಿ ಬಸವಣ್ಣನವರ 959 ವಚನಗಳು, ಅಲ್ಲಮಪ್ರಭುಗಳ 100 ವಚನ, ಚನ್ನಬಸವಣ್ಣನವರ 100 ವಚನ, ಅಕ್ಕಮಹಾದೇವಿಯ 100 ವಚನ ಸೇರಿದಂತೆ ಸುಮಾರು 1600 ವಚನಗಳನ್ನು ಕೆತ್ತಿಸಲಾಗಿದೆ. ಗುಜರಾತ್ ವಿಶ್ವವಿದ್ಯಾಲಯದ ಸಂಶೋಧನೆಯ ಅಭಿಪ್ರಾಯದಂತೆ ಜಗತ್ತಿನಲ್ಲೇ ಅತಿಹೆಚ್ಚು ಕಲ್ಲಿನ ಅಕ್ಷರಗಳುಳ್ಳ ಲಿಪಿಕಟ್ಟಡವೆಂಬ ದಾಖಲೆಗೆ ವಚನ ಶಿಲಾ ಮಂಟಪ ಭಾಜನವಾಗಿದೆ. ಸಂಪೂರ್ಣ ಭಗವದ್ಗೀತೆ ಕೆತ್ತಲ್ಪಟ್ಟಿರುವ ಕಟ್ಟಡಗಳು ಸಾಕಷ್ಟಿದ್ದು, ಒಂದು ಶ್ಲೋಕದಲ್ಲಿ 32 ಅಕ್ಷರದಂತೆ 700 ಶ್ಲೋಕದ ಸಂಪೂರ್ಣ ಭಗವದ್ಗೀತೆ ಒಟ್ಟು 22,400 ಅಕ್ಷರಗಳಿಂದ ಕೂಡಿವೆ. ಆದರೆ 1600 ವಚನಗಳುಳ್ಳ ವಚನ ಶಿಲಾ ಮಂಟಪದಲ್ಲಿ ಸುಮಾರು 1,76,000 ಕ್ಕಿಂತ ಹೆಚ್ಚಿನ ಅಕ್ಷರಗಳಿದ್ದು ಇದು ವಿಶ್ವದಲ್ಲೇ ಹೊಸ ದಾಖಲೆಯಾಗಿದೆ

ಇಂಗಳೇಶ್ವರ ವಿರಕ್ತಮಠದ ಪರಂಪರೆ :

12ನೇ ಶತಮಾನಕ್ಕಿಂತಲೂ ಪೂರ್ವದಲ್ಲಿ ಇಂಗಳೇಶ್ವರವು ಚಂದ್ರಪ್ರಭ ತೀರ್ಥಂಕರರು ನೆಲೆಸಿದ್ದ ಜೈನರ ಅಗ್ರಹಾರವಾಗಿತ್ತು. ಬಾಗೇವಾಡಿಗಿಂತಲೂ ದೊಡ್ಡ ಅಗ್ರಹಾರವಾಗಿದ್ದ ಇಂಗಳೇಶ್ವರವು ಬಸವಣ್ಣನವರ ತಾಯಿ ಮಾದಲಾಂಬಿಕೆಯ ತವರುಮನೆಯಾಗಿತ್ತು. ಇಲ್ಲಿಯೇ ಜನಿಸಿದ ಬಸವಣ್ಣನವರು ನಡೆದಾಡಿದ ಪುಣ್ಯಭೂಮಿಯಲ್ಲಿರುವ ಇಂಗಳೇಶ್ವರ ವಿರಕ್ತಮಠದ ಇತಿಹಾಸವೂ ಕೂಡಾ ಅಷ್ಟೇ ಪ್ರಾಚೀನ.

ಬಸವಣ್ಣನವರಂತೆಯೇ ಶರಣೆ ಅಕ್ಕನಾಗಮ್ಮ ಹಾಗೂ ಚನ್ನಬಸವಣ್ಣನವರು ಕೂಡಾ ಇಲ್ಲಿಯೇ ಜನಿಸಿದವರು. ಬಸವಣ್ಣನವರು ಬ್ರಾಹ್ಮಣ ಸಂಪ್ರದಾಯವನ್ನು ತೊರೆದು ಬಾಗೇವಾಡಿಯಿಂದ ಹೊರಟು ಮೊದಲು ಬಂದಿದ್ದು ಇಂಗಳೇಶ್ವರಕ್ಕೆ ಎನ್ನಲಾಗುತ್ತದೆ. ಅಂತಹ ಪರಿಸರದಲ್ಲಿರುವ ವಿರಕ್ತಮಠಕ್ಕೆ ಇಲ್ಲಿಯವರೆಗೆ 18 ಸ್ವಾಮೀಜಿಗಳು ಆಗಿದ್ದಾರೆ.

ಇಂಗಳೇಶ್ವರ ಮಠದ ಪರಂಪರೆಯಲ್ಲಿ ಚನ್ನಬಸವ ಸ್ವಾಮಿಗಳು ಹಾಗೂ ಸಿದ್ಧಲಿಂಗ ಸ್ವಾಮಿಗಳು ಎಂಬ ಹೆಸರು ಪ್ರತಿ ಬಾರಿ ಮರುಕಳಿಸಿದೆ. ತುಸು ಮಂಕಾಗಿದ್ದ ಗುರುಪರಂಪರೆಯು ಎಡೆಯೂರು ಸಿದ್ಧಲಿಂಗೇಶ್ವರರ 101 ಶಿಷ್ಯರಲ್ಲಿ ಓರ್ವರಾಗಿದ್ದ ಸಣ್ಣಬರದ ಸಿದ್ಧಲಿಂಗೇಶ್ವರರು ಈ ಮಠದ ಸ್ವಾಮಿಗಳಾಗುವ ಮೂಲಕ ಮತ್ತೆ ಪ್ರವರ್ಧಮಾನಕ್ಕೆ ಬಂತು. ಈ ಹಿಂದೆ ಮೂರು ತಲೆಮಾರಿನ ಹಿಂದಿದ್ದ ಸಿದ್ಧಲಿಂಗ ಸ್ವಾಮಿಗಳು ದೊಡ್ಡ ತಪಸ್ವಿಗಳಾಗಿ ಪವಾಡ ಪುರುಷರಾಗಿ ಈ ಭಾಗದಲ್ಲಿ ಪ್ರಸಿದ್ಧರಾಗಿದ್ದರು. ಅವರ ನಂತರ ಬಂದ ವಚನ ಮಂಟಪದ ನಿರ್ಮಾತೃಗಳಾದ ಶ್ರೀ ಚನ್ನಬಸವ ಸ್ವಾಮಿಗಳು ಶರಣ ಪರಂಪರೆಯನ್ನು ಪ್ರಚಾರ ಮಾಡುವಲ್ಲಿ ಬಹುದೊಡ್ಡ ಸಾಧನೆ ಮಾಡಿದ್ದಾರೆ. 1961ರಲ್ಲಿ ಮೊಟ್ಟ ಮೊದಲ ಬಾರಿಗೆ ಶ್ರೀಶೈಲಕ್ಕೆ ಪಾದಯಾತ್ರೆ ಹೋಗಿ ಅಕ್ಕಮಹಾದೇವಿಯ ಐಕ್ಯಸ್ಥಳವಾದ ಕದಳಿವನವನ್ನು ಸಂಶೋಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಶ್ರೀಗಳ ವಚನ ಶಿಲಾ ಮಂಟಪದ ಸಂಕಲ್ಪವನ್ನು ಸಂಪನ್ನಗೊಳಿಸಿರುವ ಕೀರ್ತಿ ಕಿರಿಯ ಶ್ರೀಗಳಾದ ಶ್ರೀಸಿದ್ಧಲಿಂಗ ಮಹಾಸ್ವಾಮಿಗಳಿಗೆ ಸಲ್ಲುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net