ಪ್ರಚಾರ ಬಯಸದ ಸೇವಕ ಎಸ್.ಆರ್.ರಾಮಸ್ವಾಮಿ; ಆರ್‌ಎಸ್‌ಎಸ್ ಸಹ ಸರಕಾರ್ಯವಾಹ ಮುಕುಂದ್ ಬಣ್ಣನೆ

ಎಸ್.ಆರ್.ರಾಮಸ್ವಾಮಿ ನುಡಿ ನಮನ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಸಹ-ಸರಕಾರ್ಯವಾಹ ಮುಕುಂದ ಸಿ. ಆರ್., ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಕಾರ್ಯದರ್ಶಿ ವಿ. ನಾಗರಾಜ್, ಲೇಖಕ ಟಿ. ವಿ. ವೆಂಕಟಾಚಲ ಶಾಸ್ತ್ರೀ, ರಾಷ್ಟೋತ್ಥಾನ ಪರಿಷತ್ ಅಧ್ಯಕ್ಷ ಎಂ. ಪಿ. ಕುಮಾರ್, ಶತಾವಧಾನಿ ಆರ್.ಗಣೇಶ್  ಪಾಲ್ಗೊಂಡಿದ್ದರು.
ಎಸ್.ಆರ್.ರಾಮಸ್ವಾಮಿ ನುಡಿ ನಮನ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಸಹ-ಸರಕಾರ್ಯವಾಹ ಮುಕುಂದ ಸಿ. ಆರ್., ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಕಾರ್ಯದರ್ಶಿ ವಿ. ನಾಗರಾಜ್, ಲೇಖಕ ಟಿ. ವಿ. ವೆಂಕಟಾಚಲ ಶಾಸ್ತ್ರೀ, ರಾಷ್ಟೋತ್ಥಾನ ಪರಿಷತ್ ಅಧ್ಯಕ್ಷ ಎಂ. ಪಿ. ಕುಮಾರ್, ಶತಾವಧಾನಿ ಆರ್.ಗಣೇಶ್ ಪಾಲ್ಗೊಂಡಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಚಾರ ಬಯಸದ ಸೇವಕ ಎಸ್.ಆರ್.ರಾಮಸ್ವಾಮಿ
  • ಆರ್‌ಎಸ್‌ಎಸ್ ಸಹ ಸರಕಾರ್ಯವಾಹ ಮುಕುಂದ್ ಬಣ್ಣನೆ
  • ರಾಷ್ಟ್ರೋತ್ಥಾನ ಪರಿಷತ್​ನಲ್ಲಿ ನುಡಿನಮನ ಕಾರ್ಯಕ್ರಮ

ಬೆಂಗಳೂರು:ರಾಷ್ಟ್ರೀಯಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್)ಸಾಹಿತ್ಯನಿರ್ಮಾಣದಲ್ಲಿ ನಾಡೋಜ ಎಸ್.ಆರ್.ರಾಮಸ್ವಾಮಿಯವರಪಾತ್ರ ಅಗಾಧವಾಗಿತ್ತು.ಆದರೆಎಂದಿಗೂ ಪ್ರಚಾರ ಬಯಸದೆ ಸೇವೆಮಾಡಿದ್ದರು ಎಂದು ಆರ್‌ಎಸ್‌ಎಸ್ಸಹ ಕಾರ್ಯವಾಹ ಸಿ.ಆರ್.ಮುಕುಂದ್ಬಣ್ಣಿಸಿದರು.

ರಾಷ್ಟ್ರೋತ್ಥಾನಪರಿಷತ್ ಮತ್ತು ಗೋಖಲೆ ಸಾರ್ವಜನಿಕವಿಚಾರ ಸಂಸ್ಥೆ ಕೇಶವ ಶಿಲ್ಪದಲ್ಲಿಶುಕ್ರವಾರ ಆಯೋಜಿಸಿದ್ದಎಸ್.ಆರ್.ರಾಮಸ್ವಾಮಿನುಡಿನಮನ ಕಾರ್ಯಕ್ರಮದಲ್ಲಿಮಾತನಾಡಿದರು.

ರಾಷ್ಟ್ರೀಯವಿಚಾರದ ಅನೇಕ ಪುಸ್ತಕಗಳಿಗೆಬೆನ್ನೆಲುಬಾಗಿ ನಿಂತ ರಾಮಸ್ವಾಮಿಯವರು,ಡಾ.ಅಂಬೇಡ್ಕರ್ಅವರ ಕುರಿತಾದ ‘ಸಮಾಜ ಚಿಕಿತ್ಸಕ’ಕೃತಿಯಲ್ಲಿ ಶೇ.90ರಷ್ಟುಶ್ರಮ ವಹಿಸಿದ್ದರೂ ತಮ್ಮ ಹೆಸರಿಗಿಂತಸಂಘದ ಕಾರ್ಯಕ್ಕೆ ಮೊದಲ ಆದ್ಯತೆನೀಡಿದರು.‘ಸುಧಾ’ಪತ್ರಿಕೆಯ ಉಪಸಂಪಾದಕರಾಗಿ ಉತ್ತಮವೇತನ ಪಡೆಯುತ್ತಿದ್ದ ಅವರು,ಸಂಘದ‘ಉತ್ಥಾನ’ ಪತ್ರಿಕೆಗೆ ಸಂಪಾದಕರಅಗತ್ಯವಿದೆ ಎಂದಾಗ ತಕ್ಷಣವೇಸುಧಾ ಪತ್ರಿಕೆಗೆ ರಾಜೀನಾಮೆನೀಡಿದರು.ರಾಷ್ಟ್ರಕಾರ್ಯದಲ್ಲಿ ಅವರಿಗಿದ್ದಬದ್ಧತೆಯನ್ನು ತೋರುತ್ತದೆ.ಓಶೋರಜನೀಶರ ಚಿಂತನೆಗಳ ಬಗ್ಗೆ ಅಪಾರಜ್ಞಾನ ಹೊಂದಿದ್ದ ಅವರಿಗೆ ಭಗವದ್ಗೀತೆಯ ವ್ಯಾಖ್ಯಾನಗಳಬಗ್ಗೆ ಆಳವಾದ ಅರಿವಿತ್ತು.ಕೇವಲಸಾಹಿತಿ ಅಥವಾ ಚಿಂತಕರಾಗಿಮಾತ್ರವಲ್ಲ,ಸಂಘದಒಬ್ಬ ಸಾಮಾನ್ಯ ಸ್ವಯಂಸೇವಕನಾಗಿಕಾರ್ಯಕರ್ತರೊಂದಿಗೆ ಬೆರೆತ ರೀತಿಅನನ್ಯ.ಅವರಹಾಸ್ಯಪ್ರಜ್ಞೆ ಮತ್ತು ಸರಳತೆಎಂತಹವರನ್ನೂ ಸೆಳೆಯುತ್ತಿತ್ತು.ಅವರೊಬ್ಬನಗುಮುಖದ ಗಂಭೀರ ಚೇತನ ಎಂದುಮುಕುಂದ್ ನೆನಪಿಸಿಕೊಂಡರು.

ಕಾರ್ಯಕ್ರಮದಲ್ಲಿಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಕಾರ್ಯದರ್ಶಿ ವಿ.ನಾಗರಾಜ್,ಲೇಖಕಟಿ.ವಿ.ವೆಂಕಟಾಚಲಶಾಸೀ,ರಾಷ್ಟೋತ್ಥಾನಪರಿಷತ್ ಅಧ್ಯಕ್ಷ ಎಂ.ಪಿ.ಕುಮಾರ್,ಶತಾವಧಾನಿಆರ್.ಗಣೇಶ್ಮತ್ತಿತರರು ಪಾಲ್ಗೊಂಡಿದ್ದರು.

ಹೆಸರಿಗಿಂತ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದ ಅಚಲ ವ್ಯಕ್ತಿತ್ವ ರಾಮಸ್ವಾಮಿಯವರದ್ದಾಗಿತ್ತು. ಸಮಾಜದ ಸ್ವಾಸ್ಥ್ಯಕ್ಕಾಗಿ ಮೌಲ್ಯಾಧಾರಿತ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದ ಅವರು, ಡಿ.ವಿ.ಜಿ ಅವರ ಆಶಯದಂತೆ ಗೋಖಲೆ ಸಂಸ್ಥೆ ಹಾಗೂ ರಾಷ್ಟ್ರೋತ್ಥಾನವನ್ನು ಕಟ್ಟಿ ಬೆಳೆಸಿದರು. ಕಾರ್ಯಕರ್ತರು ಮತ್ತು ಸಹದ್ಯೋಗಿಗಳ ಬಗ್ಗೆ ಅಪಾರ ಕಾಳಜಿ ಮತ್ತು ನಿರೀಕ್ಷೆಯಿಲ್ಲದ ಪ್ರೀತಿ ಹೊಂದಿದ್ದರು. ಅಂಧತ್ವ ಮತ್ತು ವಯೋಸಹಜ ಕಾಯಿಲೆಗಳ ನಡುವೆಯೂ ಸಂಸ್ಥೆಯ ಕೆಲಸಗಳಿಗಾಗಿ ಬದ್ಧತೆ ತೋರುತ್ತಿದ್ದರು.ಹೊಸ ಲೇಖಕರು ಹಾಗೂ ವಿದ್ವಾಂಸರನ್ನು ಗುರುತಿಸಿ, ಅವರಿಗೆ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸುತ್ತಿದ್ದರು. ಅವರು ಹಾಕಿಕೊಟ್ಟ ದಕ್ಷತೆ, ಪ್ರಾಮಾಣಿಕತೆ ಮತ್ತು ಸಾಂಸ್ಕೃತಿಕ ಬದ್ಧತೆಯಲ್ಲಿ ನಡೆಯುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ.

— ಶತಾವಧಾನಿ ಡಾ. ಆರ್. ಗಣೇಶ್, ವಿದ್ವಾಂಸರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net