ಪೇಜಾವರಮಠದ ವಿದ್ಯಾಪೀಠದಿಂದ ವಸಂತ ಧಾರ್ಮಿಕ ಶಿಬಿರ

ಪೇಜಾವರಮಠದ ವಿದ್ಯಾಪೀಠದಿಂದ ವಸಂತ ಧಾರ್ಮಿಕ ಶಿಬಿರ
ಪೇಜಾವರಮಠದ ವಿದ್ಯಾಪೀಠದಿಂದ ವಸಂತ ಧಾರ್ಮಿಕ ಶಿಬಿರ
Published on

ಪ್ರಮುಖ ಮುಖ್ಯಾಂಶಗಳು

  • ಪೂರ್ಣಪ್ರಜ್ಞಾ ವಿದ್ಯಾಪೀಠದಿಂದ ವಸಂತ ಧಾರ್ಮಿಕ ಶಿಬಿರ
  • ಪೇಜಾವರ ಮಠದ ಮಾಧ್ವ ಮಹಾ ಮಂಡಳದ ಸಹಯೋಗ
  • ದೇಶ ಮತ್ತು ರಾಜ್ಯದ ವಿವಿಧೆಡೆ ನಡೆಯುವ ಶಿಬಿರ

ಬೆಂಗಳೂರು:ಮಕ್ಕಳಲ್ಲಿಧಾರ್ಮಿಕ ಜಾಗೃತಿ ಮೂಡಿಸುವಉದ್ದೇಶದಿಂದ ಅಖಿಲ ಭಾರತ ಮಾಧ್ವಮಹಾಮಂಡಲ,ಪೂರ್ಣಪ್ರಜ್ಞಾವಿದ್ಯಾಪೀಠ ಪ್ರತಿಷ್ಠಾನ,ಮತ್ತಿತರಸಂಘಟನೆಗಳ ಆಶ್ರಯದಲ್ಲಿ ದೇಶದವಿವಿಧ ರಾಜ್ಯಗಳಲ್ಲಿ ವಸಂತಧಾರ್ಮಿಕ ಶಿಬಿರವನ್ನು ಆಯೋಜಿಸಲಾಗಿದೆ.

ಪೇಜಾವರಮಠದ ಶ್ರೀವಿಶ್ವಪ್ರಸನ್ನ ತೀರ್ಥಸ್ವಾಮೀಜಿ ನಿರ್ದೇಶನದಂತ,ಸನಾತನಧಾರ್ಮಿಕ ಮೌಲ್ಯಗಳನ್ನು ಬಲಪಡಿಸುವುದುಮತ್ತು ಯುವಪೀಳಿಗೆಗೆ ಸನ್ಮಾರ್ಗದಅರಿವು ಮೂಡಿಸುವುದು ಶಿಬಿರಗಳಮುಖ್ಯ ಉದ್ದೇಶವಾಗಿದೆ.

ಕರ್ನಾಟಕದಲ್ಲಿಮೈಸೂರು,ಶಿವಮೊಗ್ಗ,ರಾಯಚೂರು,ಧಾರವಾಡ,ಚಿತ್ರದುರ್ಗ ಸೇರಿದಂತೆ ರಾಜ್ಯದ ಅನೇಕಜಿಲ್ಲೆಗಳಲ್ಲಿ ಪ್ರತ್ಯೇಕದಿನಾಂಕಗಳಲ್ಲಿ ಶಿಬಿರ ನಡೆಯಲಿವೆ.ವಿಶೇಷವಾಗಿಬೆಂಗಳೂರಿನಲ್ಲಿ ಏ.11ರಿಂದ22ರವರೆಗೆನಗರದ ವಿವಿಧ ಪ್ರದೇಶಗಳಲ್ಲಿಶಿಬಿರಗಳು ನಡೆಯಲಿವೆ.

ಶಿಬಿರಗಳಲ್ಲಿವೇದಶಾಸ್ತ್ರ ಅಧ್ಯಯನ,ಭಕ್ತಿಗೀತೆ,ಶ್ಲೋಕಪಠಣ,ವಿವಿಧಸಂಸ್ಕಾರ ಸೇರಿದಂತೆ ಹಲವಾರುಧಾರ್ಮಿಕ ವಿಷಯಗಳ ಕುರಿತು ತರಬೇತಿನೀಡಲಾಗುತ್ತದೆ.ಡಾ.ಹೆಚ್.ಸತ್ಯನಾರಾಯಣಾಚಾರ್ಯರು ಶಿಬಿರಗಳಿಗೆ ಮಾರ್ಗದರ್ಶಕರಾಗಿದ್ದು,ವಿವಿಧಪ್ರದೇಶಗಳಲ್ಲಿ ಪ್ರತ್ಯೇಕಸಂಯೋಜಕರನ್ನು ನೇಮಕ ಮಾಡಲಾಗಿದೆ.ಭಕ್ತರುಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆಶ್ರೀಮಠದ ಪ್ರಕಟಣೆಯಲ್ಲಿ ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net