‘ಗೇರ್ ಫಾರ್ ಗೋಲ್ಡ್’ ಯೋಜನೆಯು ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ವೇಯ್ಟ್ ಲಿಫ್ಟಿಂಗ್, ಬಾಕ್ಸಿಂಗ್, ಅಥ್ಲೆಟಿಕ್ಸ್ ಮತ್ತು ಶೂಟಿಂಗ್ ಸೇರಿದಂತೆ ಒಟ್ಟು ಆರು ಕ್ರೀಡಾ ವಿಭಾಗಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಅಕಾಡೆಮಿ-ಫಸ್ಟ್ ವಿಧಾನದ ಮೂಲಕ ಮೂಲಸೌಕರ್ಯ ಅಭಿವೃದ್ಧಿ, ಆಧುನಿಕ ಕ್ರೀಡಾ ವಿಜ್ಞಾನ ಅಳವಡಿಕೆ ಮತ್ತು ಅತ್ಯಾಧುನಿಕ ಸಲಕರಣೆ-ತಂತ್ರಜ್ಞಾನಗಳನ್ನು ಒದಗಿಸುವುದು ಇತ್ಯಾದಿ ಕಾರ್ಯ ನಡೆಸಲಾಗುವುದು. ಈ ಅಕಾಡೆಮಿಗಳಲ್ಲಿ ತರಬೇತಿ ಪಡೆಯುವ ಕ್ರೀಡಾಪಟುಗಳಿಗೆ ವಿದ್ಯಾರ್ಥಿವೇತನ, ಉನ್ನತ ತರಬೇತಿ, ಸ್ಪರ್ಧೆಗಳಲ್ಲಿ ಭಾಗವಹಿಸಲು ನೆರವು, ಪೌಷ್ಟಿಕಾಹಾರ ಮತ್ತು ಗಾಯ ನಿರ್ವಹಣೆ ಮಾರ್ಗದರ್ಶನ ಸಿಗಲಿದೆ. ಕಾರ್ಯಾಗಾರಗಳು, ಪ್ರಮಾಣಪತ್ರ ಕೋರ್ಸ್‌ಗಳು ಮತ್ತು ಅಂತಾರಾಷ್ಟ್ರೀಯ ವೇದಿಕೆ ಅವಕಾಶಗಳ ಮೂಲಕ ಕ್ರೀಡಾಪಟುಗಳು, ತರಬೇತುದಾರರು ಮತ್ತು ಸಿಬ್ಬಂದಿಗಳ ಸಾಮರ್ಥ್ಯ ವೃದ್ಧಿಗೆ ಅನುವು ಮಾಡಿಕೊಡಲಾಗುವುದು.