ಕಟಕೋಳ: ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ ಈಚೆಗೆ ಜರುಗಿದ ರಾಜ್ಯಮಟ್ಟದ ಪದವಿಪೂರ್ವ ಶಿಣ ಇಲಾಖೆಯ 2025& 26ನೇ ಸಾಲಿನ ಬೆಲ್ಟ್ ಕುಸ್ತಿ ಪಂದ್ಯಾವಳಿಯಲ್ಲಿ ಎಸ್.ಎಂ.ಕಲೂತಿ ಸಂಯುಕ್ತ ಕ್ರೀಡಾ ವಸತಿಶಾಲೆ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.60 ಕೆಜಿ ವಿಭಾಗದಲ್ಲಿ ದುರದುಂಡಿಗೌಡ ಪಾಟೀಲ ಚಿನ್ನದ ಪದಕ, 45 ಕೆಜಿ ವಿಭಾಗದಲ್ಲಿ ಮಂಜುನಾಥ ವಾರಿ ಬೆಳ್ಳಿ ಪದಕ, 65 ಕೆಜಿ ವಿಭಾಗದಲ್ಲಿ ಉಲ್ಲಾಸ ಮೈಲಾರಿ ಬೆಳ್ಳಿ ಪದಕ ಪಡೆದಿದ್ದಾರೆ. 70 ಕೆಜಿ ವಿಭಾಗದಲ್ಲಿ ತಬರೆ ಜಿಡ್ಡಿಮನಿ ಕಂಚಿನ ಪದಕ ಪಡೆದಿದ್ದಾರೆ.