ಕ್ರೀಡೆ ಎಂಬುವುದು ಕೇವಲ ಗೆಲುವು-ಸೋಲಲ್ಲ, ಅದು ಶಿಸ್ತು ಮತ್ತು ದೈಹಿಕ ಸದೃಢತೆಯ ಸಂಕೇತ

photo
photo
Published on

ಪ್ರಮುಖ ಮುಖ್ಯಾಂಶಗಳು

  • ಜಂಟಿ ನಿರ್ದೇಶಕ ರವೀಂದ್ರನಾಥ ಬಾಳ್ಳಿ
ಕಲಬುರಗಿ : ಕ್ರೀಡೆ ಎಂಬುವುದು ಕೇವಲ ಗೆಲುವು-ಸೋಲಲ್ಲ, ಅದು ಶಿಸ್ತು ಮತ್ತು ದೈಹಿಕ ಸದೃಢತೆಯ ಸಂಕೇತ. ಕ್ರೀಡೆ ಎಂಬುದು ಹಬ್ಬದ ವಾತಾವರಣವಿದ್ದಂತೆ ಅದನ್ನು ಸರಿಯಾಗಿ ಸದ್ಭಳಕೆ ಮಾಡಿಕೊಂಡು ರಾಜ್ಯ ರಾಷ್ಟ್ರಮಟ್ಟದಲ್ಲಿ ಗೆಲುವು ಸಾಧಿಸಿದರೆ ಸರ್ಕಾರಿ ಕೋಟಾದಲ್ಲಿ ಮೇಸಲಾತಿ ಅನ್ವಯ ಉದ್ಯೋಗ ದೊರೆಯುತ್ತದೆ. ಇನಸ್ಟಿಟ್ಯೂಟ್ ಆಫ್ ಟ್ರೈನಿಂಗ್ ಆಫ್ ಟ್ರೈನರ್ಸ್ (ಐ.ಟಿ.ಓ.ಟಿ), ದಾವಣಗೆರೆಯ ಜಂಟಿ ನಿರ್ದೇಶಕರಾದ ರವೀಂದ್ರನಾಥ ಬಾಳ್ಳಿ ಅವರು ಹೇಳಿದರು.
ಸೋಮವಾರದಂದು ನಡೆಯುವ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಫೆಬ್ರವರಿ 16 ರಿಂದ 18 ರವರೆಗೆ ಆಯೋಜಿಸಿದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ(ಪುರುಷ) ಕಲಬರುಗಿ, ನೋಡಲ್ ಅಧೀನದಲ್ಲಿ ಜಿಲ್ಲೆಯ ಸರಕಾರಿ ಮತ್ತು ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳ ತರಬೇತಿದಾರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಬಲೂನ ಹಾರಿಬಿಡುವುದರ ಮೂಲಕ ಚಾಲನೆ ನೀಡಿದರು.
ಕ್ರೀಡಾಕೂಟದಲ್ಲಿ ಅಥ್ಲೇಟಿಕ್ಸ್, ಕಬ್ಬಡ್ಡಿ, ವಾಲಿಬಾಲ್, ಕ್ರಿಕ್ರೇಟ್, ಥ್ರೋ ಬಾಲ್ ಮುಂತಾದ ಕ್ರೀಡೆಗಳನ್ನು ಆಯೋಜಿಸಲಾಗಿದ್ದು ಇದರ ಸದುಪಯೋಗ ಪಡೆಯಲು ಕರೆ ನೀಡಿದರು.
ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ(ಪು), ಕಲಬುರಗಿಯ ಪ್ರಾಚಾರ್ಯರಾದ ಮುರಲಿಧರ ರತ್ನಗಿರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, "ಆರೋಗ್ಯವೇ ಭಾಗ್ಯ" ಎಂಬ ಗಾದೆಯಂತೆ, ಮನುಷ್ಯನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕ್ರೀಡೆ ಅತ್ಯಗತ್ಯ. ಕೇವಲ ಪಠ್ಯಪುಸ್ತಕದ ಜ್ಞಾನದಿಂದ ಜೀವನ ಪೂರ್ಣವಾಗುವುದಿಲ್ಲ, ಮೈದಾನದಲ್ಲಿ ಆಡುವ ಆಟಗಳು ನಮಗೆ ಶಿಸ್ತು, ಸಹನೆ ಮತ್ತು ತಂಡದೊಂದಿಗೆ ಕೆಲಸ ಮಾಡುವ ಚಾಕಚಕ್ಯತೆಯನ್ನು ಕಲಿಸಿಕೊಡುತ್ತವೆ. ಎಂದು ಹೇಳಿದರು.
ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದಿನದ 24 ಗಂಟೆಯಲ್ಲಿ 1 ಗಂಟೆಯಾದರೂ ಕ್ರೀಡೆಯಲ್ಲಿ ಭಾಗವಹಿಸಿ ಆರೋಗ್ಯಕ್ಕೆ ಲಕ್ಷಕೋಡಬೇಕು. ಇಂದಿನ ಕ್ರೀಡಾಕೂಟದಲ್ಲಿ ಸುಮಾರು 11 ಸಂಸ್ಥೆಗಳು ಭಾಗವಿಸಿದ್ದು ಹಾಗೂ 600 ತರಬೇತುದಾರರು ಭಾಗವಹಿಸಿದ್ದು ನಮಗೆ ಖುಷಿ ತಂದಿದೆ ಎಂದು ಪ್ರಾಸ್ಥಾವಿಕ ನುಡಿ ಮಾತನಾಡಿದರು.
ಕಲಬುರಗಿ ಕಛೇರಿಯ ವಿಭಾಗೀಯ ಉಪ ನಿರ್ದೇಶಕರಾದ ರುಬೀನಾ ಪರ್ವೀನ ಮಾತನಾಡಿ, ನನ್ನ ಪ್ರೀತಿಯ ವಿದ್ಯಾರ್ಥಿಗಳೇ, ಕ್ರೀಡೆ ಅಂದ್ರೆ ಹರ್ಷ, ಉಲ್ಲಾಸ, ಖುಷಿ, ಕೇವಲ 3 ದಿನ ಆಟ ಆಡಿ ಮರೋದಲ್ಲ ಫಿಟನೆಸನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅದು ಜೀವನದ ಅತ್ಯಂತ ದೊಡ್ಡ ಸಾಧನೆ ಆಗಬೇಕು, ಕ್ರೀಡೆಯನ್ನು ಹಬ್ಬಗಳಂತೆ ಆಚರಿಸಬೇಕು. ಮೈದಾನಕ್ಕೆ ಇಳಿದ ಮೇಲೆ ಗೆಲ್ಲಲೇಬೇಕು ಎಂಬ ಛಲವಿರಲಿ. ಆದರೆ ನೆನಪಿಡಿ, ಗೆಲುವಿಗಿಂತಲೂ 'ಭಾಗವಹಿಸುವಿಕೆ' (Participation) ಅತಿ ದೊಡ್ಡದು. ಸೋತಾಗ ಕುಗ್ಗಬೇಡಿ, ಅದು ಮುಂದಿನ ಗೆಲುವಿನ ಪಾಠ. ಗೆದ್ದಾಗ ಬೀಗಬೇಡಿ, ಅದು ನಿಮ್ಮ ಶ್ರಮಕ್ಕೆ ಸಿಕ್ಕ ಗೌರವ ಎಂದು ಹೇಳಿದರು.
ತರಬೇತಿ ಅಧಿಕಾರಿಯಾದ ಭಾರತಿ ಅವರು ಸ್ವಾಗತ ಮಾಡಿದರು. ಕಿರಿಯ ತರಬೇತಿ ಅಧಿಕಾರಿಯಾದ ವಿಜಯಕುಮಾರ ಮೇಳಕುಂದಿ ಅವರು ನಿರೂಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಕೆ.ಜಿ.ಟಿ.ಟಿ.ಐ ಕಲಬುರಗಿಯ ನಿರ್ದೇಶಕರಾದ ರಾಜೇಶ ಬಾವಗಿ, ಆದರ್ಶ ಶಿಕ್ಷಣ ಸಂಸ್ಥೆಯ ಸಂಯೋಜಕರಾದ ಬಸವರಾಜ ಯಲ್ಹೇರಿ, ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪುರುಷರ ಕಲಬುರಗಿ ಹಾಗೂ ಸರಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷರಾದ ಸುರೇಶ ವಗ್ಗೆ, ವಿ.ಇ.ಎಸ್, ಕೈ.ತ.ಸಂಸ್ಥೆ ಕಲಬುರಗಿಯ ಪ್ರಾಚಾರ್ಯರಾದ ಶಕೀಲ ಅನ್ಸಾರಿ ಮತ್ತು ಸಿಬ್ಬಂದಿ ವರ್ಗದವರು, ಹಾಗೂ ಸರ್ಕಾರಿ, ಅನುದಾನಿತ ಸಂಸ್ಥೆಯ ಮುಖ್ಯಸ್ಥರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net