ದೈಹಿಕ ಶಕ್ತಿ ಹೆಚ್ಚಿಸಲು ಕ್ರೀಡೆ ಸಹಕಾರಿ

ತಿಪಟೂರಿನ ಕಲ್ಪತರು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕ್ರೀಡಾಕೂಟವನ್ನು ಶಾಸಕ ಕೆ.ಷಡಕ್ಷರಿ ಉದ್ಘಾಟಿಸಿದರು. ಬಿಇಒ ತಾರಾಮಣಿ, ಬಾಲಕರ ಸರ್ಕರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಡಿ. ಶಿವಕುವಾರ್ ಇದ್ದರು.
ತಿಪಟೂರಿನ ಕಲ್ಪತರು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕ್ರೀಡಾಕೂಟವನ್ನು ಶಾಸಕ ಕೆ.ಷಡಕ್ಷರಿ ಉದ್ಘಾಟಿಸಿದರು. ಬಿಇಒ ತಾರಾಮಣಿ, ಬಾಲಕರ ಸರ್ಕರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಡಿ. ಶಿವಕುವಾರ್ ಇದ್ದರು.
Published on
ತಿಪಟೂರು :ಕ್ರೀಡೆ ಮನಸ್ಸಿನಲ್ಲಿ ಸಂತೋಷ ಉಂಟುವಾಡುವ ಜತೆಗೆ ದೈಹಿಕ ಮತ್ತು ವಾನಸಿಕ ಶಕ್ತಿ ಹೆಚ್ಚಿಸುತ್ತೆ ಎಂದು ಶಾಸಕ ಕೆ.ಷಡಕ್ಷರಿ ಹೇಳಿದರು.
ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಪಿಯು ಶಾಲಾ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ತಾಲೂಕಿನ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ತಾಲೂಕುಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ವಾತನಾಡಿ, ಶಿಕ್ಷಣ ಎಷ್ಟು ಮುಖ್ಯವೋ ಕ್ರೀಡೆಯೂ ಅಷ್ಟೇ ಮುಖ್ಯ ಎಂದು ತಿಳಿಸಿದರು.
ತಿಪಟೂರು ತಾಲೂಕು ಎಂದಿನಿಂದಲೂ ಕ್ರೀಡೆ, ಶಿಕ್ಷಣ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಸರಾಗಿದೆ. ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ, ಕ್ರೀಡೆಯಲ್ಲಿ ಗೆದ್ದವರು ಸೋತವರಾಗಿ, ಸೋತವರು ಗೆದ್ದವರಾಗಿ ಸವಾನವಾಗಿ ಸ್ವೀಕರಿಸಿದಾಗ ವಾತ್ರ ಕ್ರೀಡಾ ಸಂಕಲ್ಪ ಸಾರ್ಥಕವಾಗುತ್ತೆ. ಕಲ್ಪತರು ಕ್ರೀಡಾಂಗಣಕ್ಕೆ ಅಗತ್ಯವಿದ್ದ ಒಳಾಂಗಳ ಕ್ರೀಡಾಂಗಣ, ಸ್ವಿಮ್ಮಿಂಗ್ ಪೂಲ್, ಜಿಮ್, ಸೌಕರ್ಯಗಳನ್ನು ಒದಗಿಸಿದ್ದೇನೆ. ಮುಂದಿನ ದಿನಗಳಲ್ಲಿ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ನೆಲ ಹಾಸು ಹಾಕಿಸುವುದಾಗಿ ಭರವಸೆ ನೀಡಿದರು.
ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎಂ.ಎನ್.ಕಾಂತರಾಜು ವಾತನಾಡಿ, ಇಂದಿನ ದಿನಗಳಲ್ಲಿ ಪಾಲಕರು ಅಂಕಗಳಿಗೆ ವಾತ್ರ ಪ್ರತಿನಿಧ್ಯ ನೀಡಿ, ಕ್ರೀಡೆ ಮರೆತಿದ್ದಾರೆ. ಕ್ರೀಡಾ ಸಾಧನೆಗೆ ಸರ್ಕಾರ ಎಲ್ಲ ರೀತಿಯಲ್ಲೂ ಪ್ರೋತ್ಸಾಹ ನೀಡುತ್ತಿದೆ. ತಾಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟಕ್ಕೆ ಸೀಮಿತಗೊಳ್ಳದೇ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವ ಕ್ರೀಡಾ ಪಟುಗಳಿಗೆ ಸರ್ಕಾರಿ ನೌಕರಿಯಲ್ಲಿ ಶೇ.3 ಕ್ರೀಡಾ ಮೀಸಲಾತಿ ದೊರೆಯುತ್ತೆ. ಜತೆಗೆ ಕ್ರೀಡೆಯಲ್ಲಿ ಭಾಗವಹಿಸುವಿಕೆಯಿಂದ ದೇಹ ಸದೃಢವಾಗುವ ಜತೆಗೆ ಏಕಾಗ್ರತೆ ಮೂಡಿ ಕಲಿಕೆಗೂ ಸಹಕಾರಿಯಾಗುತ್ತೆ ಎಂದರು.
ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪರಶಿವಮೂರ್ತಿ ವಾತನಾಡಿ, ಕ್ರೀಡೋತ್ಸವದಲ್ಲಿ ಸ್ವಾಭಿವಾನ, ಗೆಲುವಿನ ಛಲ ಮತ್ತು ಸಂಕಲ್ಪ ಇರಬೇಕು. ಎಲ್ಲರೂ ಗೆಲ್ಲಲು ಆಗಲ್ಲ. ಸೋತವರು ಮುಂದಿನ ವರ್ಷ ಗೆಲ್ಲುವ ಸಂಕಲ್ಪ ವಾಡಬೇಕು ಎಂದರು.
ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಡಿ.ಶಿವಕುವಾರ್ ವಾತನಾಡಿ, ಅಸೂಯೆ ಬಿಟ್ಟು ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿ ಎಂದರು.
ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಪರಶಿವಮೂರ್ತಿ, ತಾಲೂಕು ಉಪನ್ಯಾಸಕರ ಸಂದ ಅಧ್ಯಕ್ಷ ಎಸ್.ಎಸ್ ಗಂಗಾಧರ್, ನಿವೃತ್ತ ಪ್ರಾಂಶುಪಾಲ ರೇಣುಕಯ್ಯ, ಕ್ರೀಡಾಕೂಟದ ಸಂಚಾಲಕ ಮಲ್ಲಿಕಾರ್ಜುನ್, ಕಸಾಪ ತಾಲೂಕು ಅಧ್ಯಕ್ಷ ಎಂ. ಬಸವರಾಜಪ್ಪ, ಉಪನ್ಯಾಸಕ ಷಡಕ್ಷರಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net