ಪ್ರತಿಭೆ ಅನಾವರಣಕ್ಕೆ ಕ್ರೀಡೆ ಸಹಕಾರಿ

Sports help in revealing talent
Sports help in revealing talent
Published on
ತಿಪಟೂರು: ತಾಲೂಕಿನ ಕಸಬಾ ಹೋಬಳಿಯ ಮತ್ತಿಹಳ್ಳಿಯಲ್ಲಿ ಯುವಕರ ಒಗ್ಗಟ್ಟಿನ ಪ್ರತಿಕವಾಗಿ ಏರಡು ದಿನಗಳ ಕಾಲ ಮತ್ತಿಹಳ್ಳಿ ಪ್ರೀಮಿಯರ್​ ಲೀಗ್​ ಕ್ರಿಕೆಟ್​ ಟೂರ್ನಮೆಂಟ್​ ಹಮ್ಮಿಕೊಳ್ಳಲಾಗಿತ್ತು.
ಅಂತಿಮ ಪಂದ್ಯದಲ್ಲಿ ಎಂ.ಪಿ.ಹರೀಶ್​ ನೇತೃತ್ವದ ಸೂಪರ್​ ಜೆಂಟ್ಸ್​ ತಂಡವು ಸುಭಾಷ್​ ಭರಣಿ ನೇತೃತ್ವದ ಪವರ್​ ಹಿಟ್ಟರ್ಸ್​ ತಂಡದ ವಿರುದ್ಧ 20 ರನ್​ಗಳ ಮೂಲಕ ಜಯಶಾಲಿಯಿತು. ವಿಜೇತ ತಂಡಕ್ಕೆ ರೂಪಾಯಿ 10 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ರನ್ನರ್​ ತಂಡಕ್ಕೆ 7 ಸಾವಿರ ಹಾಗೂ ಆಕರ್ಷಕ ಟ್ರೋಫಿ, ತೃತೀಯ ಸ್ಥಾನ ಪಡೆದ ಸುದರ್ಶನ್​ ನೇತೃತ್ವದ ಐರನ್​ ಲೈನನ್ಸ್​ ತಂಡ 5 ಸಾವಿರ ಹಾಗೂ ಆಕರ್ಷಕ ಟ್ರೂಫಿ ಪಡೆದು ಕೊಂಡಿತು. ಸಿದ್ದಪ್ಪ ನೇತೃತ್ವದ ಗ್ರಾವಿಟಿ ಹಿಟ್ಟರ್ಸ ತಂಡವು ನಾಲ್ಕನೇ ಸ್ಥಾನ ಪಡೆದು ಸಮಾಧಾನಕರ ಬಹುಮಾನ ಪಡೆಯಿತು.
ಬಹುಮಾನ ವಿತರಣೆ ಮಾಡಿ ಮಾತನಾಡಿದ ಬಿಜೆಪಿ ಮುಖಂಡ ಲಿಂಗರಾಜು, ಕ್ರಿಕೆಟ್​ ಕೇವಲ ಆಟವಲ್ಲ, ಅದು ಶಿಸ್ತು, ಸಹನೆ ಹಾಗೂ ತಂಡ ಭಾವನೆಯನ್ನು ಬೆಳೆಸುವ ಶಕ್ತಿ. ಯುವಕರು ಕ್ರೀಡೆಯ ಮೂಲಕ ತಮ್ಮ ಪ್ರತಿಭೆ ಹೊರತಂದು ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.
ಮಾಜಿ ಗ್ರಾಪಂ ಸದಸ್ಯ ರೇಣುಕಮ್ಮಓಂಕಾರಮೂರ್ತಿ ಮಾತನಾಡಿ, ಯುವಕರ ಒಗ್ಗಟ್ಟು ಗ್ರಾಮದ ಶಕ್ತಿಯಾಗಿದೆ. ಇಂತಹ ಕ್ರೀಡಾಕೂಟಗಳು ಸ್ನೇಹ, ಸಹೋದರತ್ವ ಮತ್ತು ಪರಸ್ಪರ ಗೌರವವನ್ನು ಹೆಚ್ಚಿಸುತ್ತವೆ. ಕ್ರೀಡೆ ಯುವಕರನ್ನು ದುಶ್ಚಟಗಳಿಂದ ದೂರವಿಟ್ಟು ಆರೋಗ್ಯಕರ ಸಮಾಜ ನಿಮಾರ್ಣಕ್ಕೆ ಕಾರಣವಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net