ಕ್ರೀಡೆ ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರಿ / NELAMANGAL

ನೆಲಮಂಗಲದ ಸೊಂಡೇಕೊಪ್ಪ ಮುಖ್ಯರಸ್ತೆಯ ಶ್ರೀ ಸಿದ್ಧಗಂಗಾ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಮಿಂಚು ಸಾಂಸತಿಕಕಾರ್ಯಕ್ರಮದಡಿ ಆಯೋಜಿಸಿದ್ದ ವಿವಿಧ ವಿಭಾಗಗಳ ಸಾಂಸತಿಕ ಸಮಾರೋಪದಲ್ಲಿ ಸ್ಪರ್ಧೆಗಳಲ್ಲಿ ಜಯ ಸಾಧಿಸಿದ ಪ್ರಶಸ್ತಿ ಪತ್ರ ಪಡೆದ ವಿದ್ಯಾರ್ಥಿಗಳೊಂದಿಗೆ ಕಾಲೇಜು ಪ್ರಾಂಶುಪಾಲ ಡಾ.ಕೆ.ಎನ್​.ಅಮರೇಂದ್ರ, ಪ್ರಾಧ್ಯಾಪಕರಾದ ಡಾ.ಜಿ.ಗಂಗರಾಜು, ವಿಜಯದುಗ್ಗಪ್ಪ, ಎಚ್​.ಎಸ್​.ಪ್ರಕಾಶ್​, ಕಲಾವತಿ, ಕೋಮಲ, ಚೈತ್ರಾ, ಮಂಜುನಾಥ್​, ಡಾ.ಮನುಕುಮಾರ್​, ಎಸ್​.ರವಿ ಮತ್ತಿತರರು ಇದ್ದರು.

Published on
ನೆಲಮಂಗಲ : ಕ್ರೀಡೆ ಮತ್ತು ಸಾಂಸತಿಕ ಚಟುವಟಿಕೆಗಳು ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಗೆ ನೆರವಾಗುತ್ತವೆ ಎಂದು ರಾಜ್ಯ ಪೊಲೀಸ್​ ಇಲಾಖೆ ಡಿಐಜಿ ಡಿ.ದೇವರಾಜು ತಿಳಿಸಿದರು.
ನಗರದ ಸೊಂಡೇಕೊಪ್ಪ ಮುಖ್ಯರಸ್ತೆಯ ಶ್ರೀ ಸಿದ್ಧಗಂಗಾ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಮಿಂಚು ಸಾಂಸತಿಕಕಾರ್ಯಕ್ರಮದಡಿ ಆಯೋಜಿಸಿದ್ದ ಎನ್ನೆಸ್ಸೆಸ್​, ಎನ್​ಸಿಸಿ, ಸ್ಕೌಟ್ಸ್​ ಮತ್ತು ಗೈಡ್​, ರೆಡ್​ ಕ್ರಾಸ್​, ಕ್ರೀಡೆ ಮತ್ತು ಸಾಂಸತಿಕ ಕಾರ್ಯಕ್ರಮಗಳ ಸಮಾರೋಪ ಹಾಗೂ ದತ್ತಿ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು. ಕ್ರೀಡಾ ೇತ್ರದಲ್ಲಿಯೂ ಸಾಕಷ್ಟು ಅವಕಾಶಗಳಿವೆ. ಅವುಗಳನ್ನು ಸರಿಯಾಗಿ ಬಳಸಿಕೊಂಡು ಯಶಸ್ಸು ಗಳಿಸಬೇಕು. ಎನ್ನೆಸ್ಸೆಸ್​, ಸ್ಕೌಟ್ಸ್​ ಮತ್ತು ಗೈಡ್ಸ್​ ಹಾಗೂ ಯುವ ರೆಡ್​ ಕ್ರಾಸ್​ಗಳಿಂದ ನಡೆದ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಶಿಸ್ತು ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿವೆ ಎಂದರು.
ಕಾಲೇಜು ಜೀವನವೇ ಭವಿಷ್ಯದ ಅಡಿಪಾಯ. ವಿದ್ಯಾರ್ಥಿಗಳು ಕಲಿಕೆಗೆ ಹೆಚ್ಚಿನ ಮಹತ್ವ ನೀಡಬೇಕು. ಈಗ ಮೈಮರೆತು ಅಡ್ಡದಾರಿ ಹಿಡಿದರೆ, ಇಡೀ ಭವಿಷ್ಯ ಕತ್ತಲಾಗುತ್ತದೆ ಎಂದರು.
ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಡಾ.ಚಂದ್ರಕಾಂತ್​ ಎಸ್​.ಕರಿಗಾರ್​ ಮಾತನಾಡಿ, ಮೊಬೈಲ್​ ಬದಿಗಿಟ್ಟು ಪುಸ್ತಕ ಓದುವುದರ ಕಡೆಗೆ ಗಮನ ಹರಿಸಬೇಕಾಗಿದೆ. ಮಕ್ಕಳು, ಯುವಕರು ಸಣ್ಣ ಸಣ್ಣ ವಿಚಾರಗಳಿಗೆ ತಾಳ್ಮೆ ಕಳೆದುಕೊಂಡು ಆಕ್ರೋಶಕ್ಕೆ ಒಳಗಾಗುತ್ತಿರುವುದಕ್ಕೆ ಮೊಬೈಲ್​ ಫೋನ್​ ಬಳಕೆ ಕಾರಣವಾಗಿದೆ. ತಾಳ್ಮೆ, ಸಹನೆ, ಪ್ರೀತಿ, ವಿಶ್ವಾಸದ ಜತೆಗೆ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು. ವಿದ್ಯಾರ್ಥಿ ಜೀವನವನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು. ಪಾಲಕರು, ಸಮಾಜಹೆಮ್ಮೆ ಪಡುವ ರೀತಿಯಲ್ಲಿ ಸಾಧನೆ ಮಾಡಬೇಕು ಎಂದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು. ವಿದ್ಯಾರ್ಥಿಗಳ ಸಾಂಸತಿಕ ಕಾರ್ಯಕ್ರಮಗಳು ಹಾಗೂ ಕಲಾ ಪ್ರದರ್ಶನಗಳು ಸಮಾರಂಭದ ವಿಶೇಷ ಆಕರ್ಷಣೆಯಾಗಿದ್ದವು.
ದತ್ತಿ ಬಹುಮಾನ ವಿತರಣೆ : ಕಾಲೇಜಿನಲ್ಲಿ ಕಳೆದ ಶೈಕ್ಷಣಿಕ ಸಾಲಿನಲ್ಲಿ ವಿಷಯವಾರು ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ದತ್ತಿ ಸಮಿತಿಯಿಂದ ನಗದು ರೂಪದಲ್ಲಿ ಬಹುಮಾನವನ್ನು ವಿತರಣೆ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net