ವೈದ್ಯರ ಒತ್ತಡಕ್ಕೆ ಕ್ರೀಡೆಯಿಂದ ಔಷದಿ; ಡಾ.ಸಿ.ಎನ್.ಮಂಜುನಾಥ್ ಅಭಿಮತ

ಆರ್‌ಪಿಎಲ್ ಡಾಕ್ಟರ್ಸ್ ಪ್ರೀಮಿಯರ್ ಲೀಗ್ - 2025ಕ್ಕೆ ಡಾ.ಸಿ.ಎನ್.ಮಂಜುನಾಥ್ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿದರು.
ಆರ್‌ಪಿಎಲ್ ಡಾಕ್ಟರ್ಸ್ ಪ್ರೀಮಿಯರ್ ಲೀಗ್ - 2025ಕ್ಕೆ ಡಾ.ಸಿ.ಎನ್.ಮಂಜುನಾಥ್ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಆರ್‌ಪಿಎಲ್ ಡಾಕ್ಟರ್ಸ್ ಪ್ರಿಮೀಯರ್ ಲೀಗ್
  • ವೈದ್ಯರ ಒತ್ತಡಕ್ಕೆ ಕ್ರೀಡೆಯಿಂದ ಔಷದಿ
  • ಡಾ.ಸಿ.ಎನ್.ಮಂಜುನಾಥ್ ಅಭಿಮತ

ಬೆಂಗಳೂರು:ವೈದ್ಯ ವೃತ್ತಿಅತ್ಯಂತ ಮಾನವೀಯ ಹಾಗೂ ಕಠಿಣವೃತ್ತಿ. 24 ಗಂಟೆಸೇವೆಗೆ ಸಿದ್ಧವಿರಬೇಕಾದ ಒತ್ತಡ,ರೋಗಿಗಳ ಜೀವದಜವಾಬ್ದಾರಿ,ತ್ವರಿತ ನಿರ್ಧಾರಗಳುಇವೆಲ್ಲವು ವೈದ್ಯರ ಮೇಲೆ ಅಪಾರಮಾನಸಿಕ ಭಾರವನ್ನುಂಟುಮಾಡುತ್ತವೆ.ವೈದ್ಯರ ಒತ್ತಡಕ್ಕೆಕ್ರೀಡೆ ಉತ್ತಮ ಪರಿಹಾರ ಎಂದುಹೃದ್ರೋಗ ತಜ್ಞ ಹಾಗೂ ಸಂಸದಡಾ.ಸಿ.ಎನ್.ಮಂಜುನಾಥ್ಹೇಳಿದರು.

ಉತ್ತರಹಳ್ಳಿಯರಕ್ಷಾ ಆಸ್ಪತ್ರೆ ಮತ್ತು ಆರ್‌ಪಿಎಲ್ಡಾಕ್ಟರ್ಸ್ ಪ್ರೀಮಿಯರ್ ಲೀಗ್2025,’ಸೀಸನ್4ಕ್ಕೆ ಕ್ರಿಕೆಟ್ ಆಡುವ ಮೂಲಕ ಚಾಲನೆನೀಡಿ ಮಾತನಾಡಿದರು.

ಕ್ರೀಡಾಕಾರ್ಯಕ್ರಮಗಳು ವೈದ್ಯರ ಫಿಟ್‌ನೆಸ್‌ಗೂ,ಮನಶ್ಶಾಂತಿಗೂಪೂರಕವಾಗಿದ್ದು, ಆಟ ಮನರಂಜನೆಹೊಸ ಶಕ್ತಿ ಮತ್ತು ಸೌಹಾರ್ದತೆಯನ್ನುತುಂಬುತ್ತದೆ.ಸೇವೆಯ ದಣಿವನ್ನುಮರೆಸಿ ಹೊಸ ಉತ್ಸಾಹ ಮತ್ತು ನವಚೈತನ್ಯಒದಗಿಸುತ್ತದೆ ಎಂದುಡಾ.ಮಂಜುನಾಥ್ವಿವರಿಸಿದರು.

ರಕ್ಷಾಪ್ರೀಮಿಯರ್ ಲೀಗ್ (ಆರ್‌ಪಿಎಲ್)ಸಮುದಾಯಕ್ಕೆನಿಸ್ವಾರ್ಥ ಸೇವೆ ಸಲ್ಲಿಸುವವೈದ್ಯರು, ದಾದಿಯರು,ಪ್ಯಾರಾಮೆಡಿಕಲ್ಸಿಬ್ಬಂದಿಗಳಿಗೆ ಸಮರ್ಪಿತವಾದವಾರ್ಷಿಕ ಕ್ರಿಕೆಟ್ ಕ್ರೀಡಾಸಂಭ್ರಮವಾಗಿದ್ದು,ಇದು ಕ್ರೀಡಾಮನೋಭಾವವನ್ನು ಮಾತ್ರವಲ್ಲದೆ,ಸಮಾಜವನ್ನುಗುಣಪಡಿಸುವ ಮಹತ್ತರ ಜವಾಬ್ದಾರಿಹೊತ್ತಿರುವ ಆರೋಗ್ಯ ಕಾರ್ಯಕರ್ತರಫಿಟ್‌ನೆಸ್,ಮಾನಸಿಕ ಯೋಗಕ್ಷೇಮಮತ್ತು ಪರಸ್ಪರ ಸ್ನೇಹಭಾವವನ್ನುಉತ್ತೇಜಿಸುವ ಗುರಿಯನ್ನೂ ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net