ಆರಾಧನೆಯಿಂದ ಆತ್ಮೋನ್ನತಿ ಲಭ್ಯ

Spiritual upliftment is available through worship.
Spiritual upliftment is available through worship.
Published on
ಕೊರಟಗೆರೆ: ವೈಕುಂಠ ಏಕಾದಶಿ ಧರ್ಮ, ಭಕ್ತಿ ಮತ್ತು ಸತ್ಸಂಗದ ಮಹತ್ವವನ್ನು ಸಾರುವ ಪವಿತ್ರ ದಿನ. ಈ ದಿನ ಭಗವಂತನನ್ನು ಸ್ಮರಿಸಿ ಉಪವಾಸ, ಜಪ-ಧ್ಯಾನ ಮಾಡುವುದರಿಂದ ಮಾನವನ ಜೀವನದಲ್ಲಿ ಶಾಂತಿ, ಸದ್ಗುಣ ಹಾಗೂ ಆತ್ಮೋನ್ನತಿ ಲಭಿಸುತ್ತದೆ ಎಂದು ಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿರುವ ಶ್ರೀ ಲಕ್ಷಿ$್ಮ ನರಸಿಂಹ ಸ್ವಾಮಿ ದೇವಾಲಯದಲ್ಲಿ ಮಂಗಳವಾರ ವೈಕುಂಠ ಏಕಾದಶಿ ಪರ್ವದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿ, ವೈಕುಂಠ ದ್ವಾರ ದರ್ಶನವು ಮನಸ್ಸಿನ ಅಜ್ಞಾನವನ್ನು ನಿವಾರಿಸಿ ಸತ್ಪಥದಲ್ಲಿ ನಡೆಯಲು ಪ್ರೇರಣೆಯಾಗಿದೆ ಎಂದರು. ಭಕ್ತಿ ಎಂದರೆ ಕೇವಲ ಪೂಜೆಯಲ್ಲ, ಸಮಾಜದಲ್ಲಿ ಮಾನವೀಯತೆ, ಸೇವಾಭಾವನೆ ಬೆಳೆಸುವುದು ಆಗಿದೆ ಎಂದರು.
ದೇವರಿಗೆ ರಜತ ಅಲಂಕಾರ, ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಪೂಜೆ, ಮಹಾ ಮಂಗಳಾರತಿ ಸೇರಿದಂತೆ ವೈಕುಂಠ ದ್ವಾರ ಪೂಜೆ ನೆರವೇರಿತು. ಮುಖಂಡರಾದ ವೀರಣ್ಣ, ಭಕ್ತರಹಳ್ಳಿ ರಾಮಣ್ಣ, ದುಗ್ಗೇನಹಳ್ಳಿ ರಂಗನಾಥ್​, ನಾಗರಾಜು, ಜಯ ರುದ್ರಯ್ಯ ಮತ್ತಿತರರು ಇದ್ದರು..
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net