ಹುಳಿಯಾರು:ಪಟ್ಟಣದಲ್ಲಿ ಪಪಂ ಮಳಿಗೆದಾರರ ಸಂ ಹಾಗೂ ವಿವಿಧ ಹಿಂದೂ ಸಂಟನೆಗಳ ನೇತೃತ್ವದಲ್ಲಿ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಮಂದಿರದ ಪ್ರಾಣ ಪ್ರತಿಷ್ಠಾಪನೆಯ ಎರಡನೇ ವರ್ಷದ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಪಪಂ ಮಳಿಗೆಗಳ ಮುಂಭಾಗದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆ, ಪುಷ್ಪಾರ್ಚನೆ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ಭಕ್ತರು ಜೈ ಶ್ರೀರಾಮ್ ೂಷಣೆಗಳನ್ನು ಕೂಗಿದರು.
ಆಂಜನೇಯ ಮತ್ತು ಶ್ರೀರಾಮನ ವೇಷಧಾರಿಗಳ ಭಜನಾ ಕಾರ್ಯಕ್ರಮವು ಪಟ್ಟಣದಲ್ಲಿ ಭಕ್ತಿ ಸಂಚಲನ ಮೂಡಿಸಿತು. ಭಕ್ತರಿಗೆ ಕಡ್ಲೆಕಾಳು ಉಸ್ಲಿ, ಬಾಳೆಹಣ್ಣು ಮತ್ತು ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.