ಗುಂಡ್ಲುಪೇಟೆ ಪಟ್ಟಣದ ಶ್ರೀರಾಮೇಶ್ವರ ಸ್ವಾಮಿಯನ್ನು ವಿಶೇಷ ಅಲಂಕರಿಸಿರುವುದು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶ್ರೀ ಮಾರ್ಕಂಡೇಯ ಸ್ವಾಮಿ ಜಯಂತಿ
ರಾಮೇಶ್ವರಸ್ವಾಮಿ ದೇವಾಲಯ
ಗುಂಡ್ಲುಪೇಟೆ: ಶ್ರೀ ಮಾರ್ಕಂಡೇಯ ಸ್ವಾಮಿ ಜಯಂತಿಯ ಪ್ರಯುಕ್ತ ಪಟ್ಟಣದ ಶ್ರೀರಾಮೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು.
ದೇವಾಲಯದ ಪ್ರಧಾನ ಅರ್ಚಕ ಶಂಕರನಾರಾಯಣ ಜೋಯಿಸ್ ನೇತೃತ್ವದಲ್ಲಿ ಶಿವಲಿಂಗಕ್ಕೆ ಹಾಲು, ಮೊಸರು, ಜೇನುತುಪ್ಪ, ಕಲ್ಲುಸಕ್ಕರೆ ಹಾಗೂ ಮಂಗಳ ದ್ರವ್ಯಗಳಿಂದ ಅಭಿಷೇಕ ಮಾಡಿ ನೂತನ ವಸ್ತ್ರ ಹಾಗೂ ಭಸ್ಮದಿಂದ ಅಲಂಕರಿಸಲಾಯಿತು. ಶಾಲ್ಯದ ಅನ್ನ ಹಾಗೂ ಪಂಚಾಮೃತಗಳನ್ನು ನೈವೇದ್ಯ ಮಾಡಿ ಮಹಾ ಮಂಗಳಾರತಿ ನಂತರ ಭಕ್ತರಿಗೆ ತೀರ್ಥಪ್ರಸಾದ ವಿನಿಯೋಗ ಮಾಡಲಾಯಿತು.
ಆಡಳಿತ ಮಂಡಳಿಯ ಸೇವಾರ್ಥದಾರರಾದ ಬಂಗಾರಶೆಟ್ಟರ ಕುಟುಂಬ, ಕೃಷ್ಣಪ್ಪ, ಗಣೇಶ, ರಮೇಶ, ಆದರ್ಶ, ಮಾದೇವು, ಮಂಜುಳಾ, ಕವಿತಾ, ಭಾಗ್ಯಮ್ಮ ಭಾಗವಹಿಸಿದ್ದರು.