_1776954159831.webp?w=480&auto=format%2Ccompress&fit=max)
_1776954159831.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಕರ್ನಾಟಕರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿನಿಗಮವು ರಾಜ್ಯ ಸರ್ಕಾರದಅಂಗಸಂಸ್ಥೆಯಾಗಿದ್ದು,ಕಳೆದ55 ವರ್ಷಗಳಿಂದರಾಜ್ಯ ಹಾಗೂ ಹೊರರಾಜ್ಯದ ಪ್ರಮುಖಪ್ರವಾಸಿ ತಾಣಗಳಿಗೆ ನಿಗಮವುಹೊಂದಿರುವ ಬಸ್ಸುಗಳ ಮೂಲಕ ವಿವಿಧವ್ಯವಸ್ಥಿತ ಪ್ರವಾಸಗಳನ್ನುಆಯೋಜಿಸುತ್ತಿದೆ.
ಇದೀಗಬೇಸಿಗೆ ರಜೆಯಲ್ಲಿ ಹವಾನಿಯಂತ್ರಿತಸೌಲಭ್ಯದ ಬಸ್ಸಿನೊಂದಿಗೆಯಶವಂತಪುರದಿಂದ -ಬನ್ನೇರುಘಟ್ಟ-ಮುತ್ಯಾಲಮಡುವಿನಪ್ರವಾಸಿ ತಾಣಗಳನ್ನು ವೀಕ್ಷಿಸಲುಒಂದು ದಿನದ ವ್ಯವಸ್ಥಿತ ಪ್ರವಾಸವನ್ನುಆಯೋಜಿಸುತ್ತಿದೆ.ಈಪ್ರವಾಸವು ಮಂಗಳವಾರವನ್ನುಹೊರತುಪಡಿಸಿ,ವಾರದಪ್ರತಿ ದಿನವೂ ಇರಲಿದ್ದು,ಯಶವಂತಪುರದಿಂದಬೆಳಿಗ್ಗೆ 7.15ಕ್ಕೆಪ್ರಾರಂಭವಾಗಿ,ಕೆಂಪೇಗೌಡಬಸ್ ನಿಲ್ದಾಣ,ಶಾಂತಿನಗರಬಸ್ ನಿಲ್ದಾಣ,ಮತ್ತುಜಯನಗರ ಬಸ್ ನಿಲ್ದಾಣಗಳಲ್ಲಿಪ್ರವಾಸಿಗರ ಪಿಕ್ಅಪ್ ಮಾಡಿಕೊಂಡುವಾಹನ ಹೊರಡಲಿದೆ.
ಈಪ್ರವಾಸದಲ್ಲಿ ಬನ್ನೇರುಘಟ್ಟಮೃಗಾಲಯ -ಸಫಾರಿಚಿಟ್ಟೆ ಉದ್ಯಾನವನ –ಮುತ್ಯಾಲಮಡುವು- ಬೋಟಿಂಗ್- ಸೂರ್ಯಾಸ್ತವೀಕ್ಷಣೆಯನ್ನು ಒಳಗೊಂಡಿದೆ.ಬೆಳಗಿನಉಪಹಾರ,ಮಧ್ಯಾಹ್ನದಊಟ, ಸಂಜೆಯಲಘು ಉಪಹಾರ ಹಾಗೂ ಎಲ್ಲ ಕಡೆಗಳಲ್ಲಿನಪ್ರವೇಶ ಶುಲ್ಕವೂ ಸೇರಿ ಒಬ್ಬರಿಗೆ1680 ರೂಪಾಯಿನಿಗದಿಗೊಳಿಸಲಾಗಿದೆ.ನಿಗಮದಮೂಲಕ ಹೋಗುವುದರಿಂದ ಎಲ್ಲ ಕಡೆಗಳಲ್ಲಿನೇರ ಪ್ರವೇಶ ಇರಲಿದೆ.ಆಸಕ್ತರುನಿಗಮದ ಬುಕ್ಕಿಂಗ್ ಕೌಂಟರ್,ನಿಗಮಅಧಿಕೃತ ಟ್ರಾವೆಲ್ ಏಜೆಂಟ್‌ಗಳು ಹಾಗೂನಿಗಮದ ವೆಬ್‌ಸೈಟ್ ಮೂಲಕ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.