ಸೋಮೇಶ್ವರ ದೇಗುಲದಲ್ಲಿ ವಿಶೇಷ ಹೋಮಹವನ Someshwara Temple

ಸೋಮೇಶ್ವರ ದೇಗುಲದಲ್ಲಿ ವಿಶೇಷ ಹೋಮಹವನ Someshwara Temple
ಸೋಮೇಶ್ವರ ದೇಗುಲದಲ್ಲಿ ವಿಶೇಷ ಹೋಮಹವನ Someshwara Temple
Published on
ಮುಳಬಾಗಿಲು: ಎಚ್.ಡಿ.ದೇವೇಗೌಡರ 94ನೇ ಹುಟ್ಟುಹಬ್ಬ ಹಾಗೂ ಮುಳಬಾಗಿಲಿನ ಅಮರಜ್ಯೋತಿ ವಿದ್ಯಾಸಂಸ್ಥೆಯ 25ನೇ ವರ್ಷಾಚರಣೆ ಅಂಗವಾಗಿ ನಗರದ ಸೋಮೇಶ್ವರಪಾಳ್ಯದ ಶ್ರೀ ಪ್ರಸನ್ನ ಸೋಮೇಶ್ವರ ದೇವಾಲಯದಲ್ಲಿ ಸೋಮವಾರ ದೇವರಿಗೆ ವಿಶೇಷ ಪಂಚಾಮೃತ ಅಭಿಷೇಕ, ಮಹಾ ರುದ್ರಾಭಿಷೇಕ, ಮಹಾಗಣ ಹೋಮ, ರುದ್ರ ಹೋಮ, ಮೃತ್ಯುಂಜಯ ಹೋಮ, ಹವನ ನೆರವೇರಿಸಲಾಯಿತು
.
ಅಮರಜ್ಯೋತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಕಾಡೇನಹಳ್ಳಿ ಕೆ.ಎನ್. ನಾಗರಾಜ್ ಮಾತನಾಡಿ, ದೇವೇಗೌಡರ ಹೆಸರಿನಲ್ಲಿ ಮೃತ್ಯುಂಜಯ ಹೋಮ, ವಿದ್ಯಾಸಂಸ್ಥೆ ಹಾಗೂ ತಾಲೂಕು ಜೆಡಿಎಸ್‌ಗೆ ಯಾವುದೇ ದುಷ್ಟ ಶಕ್ತಿಗಳ ದೃಷ್ಟಿ ಬೀಳದಂತೆ ಗಣಹೋಮ ವಾಡಿಸಲಾಗಿದೆ ಎಂದರು.
ತಾಲೂಕು ಜೆಡಿಎಸ್ ವಕ್ತಾರ ಎಂ.ಎಸ್. ಶ್ರೀನಿವಾಸರೆಡ್ಡಿ ಮಾತನಾಡಿ, ನಿಷ್ಠಾವಂತ ಕಾರ್ಯಕರ್ತರು, ಮುಖಂಡರೇ ಜೆಡಿಎಸ್ ಆಸ್ತಿ. ಅಧಿಕಾರ ಶಾಶ್ವತವಲ್ಲ, ಪ್ರೀತಿ ವಿಶ್ವಾಸವೇ ಮುಖ್ಯವಾಗಬೇಕಿದೆ ಎಂದರು.
ಸಿ.ವಿ.ಗೋಪಾಲ್, ವಾಜಿ ಸದಸ್ಯ ನಗವಾರ ಶ್ರೀನಿವಾಸ್, ಪಿಎಲ್‌ಡಿ ಬ್ಯಾಂಕ್ ವಾಜಿ ಉಪಾಧ್ಯಕ್ಷ ಬೆಳಗಾನಹಳ್ಳಿ ವೆಂಕಟರಮಣಪ್ಪ, ನಗರಸಭೆ ವಾಜಿ ಸದಸ್ಯರಾದ ಡಿ.ಸೋಮಣ್ಣ, ಎನ್.ವಿ. ಶ್ರೀಧರ್, ನಾಗೇಶ್, ಗ್ಯಾಸ್ ರು, ಮುಖಂಡರಾದ ಗ್ಯಾಸ್ ಶ್ರೀಧರ್ ಮೂರ್ತಿ, ಗೊಲ್ಲಹಳ್ಳಿ ಪ್ರಭಾಕರ್, ಡಿ.ವಿ. ರುಪತಿಗೌಡ, ಅನಂತ ಪದ್ಮನಾಭ ರಾವ್, ಪೊಂಬರಹಳ್ಳಿ ಮಂಜುನಾಥ್, ಉತ್ತನೂರು ರಾಮರೆಡ್ಡಿ, ಕೆ.ವಿ.ರಾಜು, ವೈ. ಸೋಮಶೇಖರ್ ಇದ್ದರು.
ಜೆಡಿಎಸ್‌ನಲ್ಲಿ ಬಿರುಕೆ?: ಕ್ಷೇತ್ರದ ಜೆಡಿಎಸ್ ಶಾಸಕ ಸಮೃದ್ಧಿ ವಿ. ಮಂಜುನಾಥ್ ಮತ್ತು ಅವರ ಬೆಂಬಲಿಗರು ಪೂಜಾ ಕಾರ್ಯಕ್ರಮದಿಂದ ಅಂತರ ಕಾಯ್ದುಕೊಂಡು ತಾಲೂಕು ಜೆಡಿಎಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಬಿಂಬಿಸಿದಂತೆ ಕಂಡುಬಂದಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net