ಕಲಬುರಗಿ: ಮದ್ಯಪಾನವು ಕೇವಲ ವ್ಯಕ್ತಿಯ ಆರೋಗ್ಯವನ್ನು ಹಾಳುಗೆಡವುದಲ್ಲದೆ, ಇಡೀ ಕುಟುಂಬದ ನೆಮ್ಮದಿಯನ್ನೇ ಕಸಿದುಕೊಳ್ಳುತ್ತದೆ. ಮದ್ಯದ ವ್ಯಸನಕ್ಕೆ ದಾಸರಾಗುವ ಬದಲು, ಆ ಅಭ್ಯಾಸದಿಂದ ಹೊರಬಂದು ಪತ್ನಿ-ಮಕ್ಕಳೊಂದಿಗೆ ಗೌರವಯುತ, ಆರೋಗ್ಯಕರ ಜೀವನ ನಡೆಸಲು ಸಂಕಲ್ಪ ಮಾಡಿ ಎಂದು ರಾಜ್ಯ ಪೊಲೀಸ್ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ, ಡಿಜಿಪಿ ಅರುಣ ಚಕ್ರವರ್ತಿ ಅವರು ಹೇಳಿದರು.