ಬಾಂಗ್ಲಾದಲ್ಲಿ ಹಿಂದುಗಳ ನರಮೇಧಕ್ಕೆ ಕಿಡಿ / DODDABALLAPUR

ದೊಡ್ಡಬಳ್ಳಾಪುರದಲ್ಲಿ ವಿಶ್ವ ಹಿಂದು ಪರಿಷದ್​ ಬಜರಂಗದಳ ಕಾರ್ಯಕರ್ತರು ಪಂಜಿನ ಮೆರವಣಿಗೆ ಮಾಡಿ ಬಾಂಗ್ಲಾದಲ್ಲಿ ಹತ್ಯೆಯಾದ ದೀಪು ಚಂದ್ರದಾಸ್​ಗೆ ನಗರದ ಬಸ್​ ನಿಲ್ದಾಣದ ವೃತ್ತದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು. ವಿಶ್ವ ಹಿಂದೂ ಪರಿಷದ್​, ಬಜರಂಗದಳ ಪದಾಧಿಕಾರಿಗಳಾದ ಶ್ರೀಕಾಂತ್​, ರಮೇಶ್​, ಅಗ್ನಿ ವೆಂಕಟೇಶ, ಉಮೇಶ್​, ವೆಂಕಟೇಶ, ಪುನೀತ್​, ಮಧು, ಸೋಮು, ಕಿರಣ್​, ಬಲರಾಮ್​, ಮುನಿಕೃಷ್ಣ, ಮಹೇಶ್​ ಬಾಬು, ರಾಹುಲ್​, ಕಾರ್ಯಕರ್ತರು ಇದ್ದರು.

Published on
ದೊಡ್ಡಬಳ್ಳಾಪುರ : ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದುಗಳ ನರಮೇಧ ಖಂಡಿಸಿ ವಿಶ್ವ ಹಿಂದು ಪರಿಷದ್​ ಬಜರಂಗದಳ ಕಾರ್ಯಕರ್ತರು ಪಟ್ಟಣದ ರುಮಾಲೆ ಛತ್ರದಿಂದ ಪಂಜಿನ ಮೆರವಣಿಗೆ ನಡೆಸಿದರು. ನಂತರ ಬಾಂಗ್ಲಾದಲ್ಲಿ ಹತ್ಯೆಯಾದ ದೀಪು ಚಂದ್ರದಾಸ್​ಗೆ ನಗರದ ಬಸ್​ ನಿಲ್ದಾಣದ ವೃತ್ತದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.
ಬಜರಂಗದಳ ಜಿಲ್ಲಾ ಸಂಯೋಜಕ ಕೃಷ್ಣಮೂರ್ತಿ ಮಾತನಾಡಿ, ಕ್ರೂರತ್ವ ಹಾಗೂ ಹಿಂಸೆ ಇಡೀ ಮನುಕುಲಕ್ಕೆ ಅಪಾಯಕಾರಿ. ಈ ರೀತಿ ಜನರು ದಂಗೆಯೆದ್ದು ಒಂದು ರ್ನಿದಿಷ್ಟ ಕೋಮಿನ ವಿರುದ್ಧ ಹಿಂಸಾಕೃತ್ಯಕ್ಕೆ ಇಳಿದಿದ್ದಾರೆ ಎಂದರೆ ಇದರ ನಡುವೆ ಐಎಸ್​ಐ ಕೈವಾಡವಿದೆ. ರಾಜಾರೋಷವಾಗಿ ಹಿಂದುವನ್ನು ಮರಕ್ಕೆ ನೇತು ಹಾಕಿ ಬೆಂಕಿ ಹಚ್ಚುವ ಮೂಲಕ ಹಿಂಸೆಗೆ ಒಳಪಟ್ಟಿದ್ದನ್ನು ಗಮನಿಸಿದರೆ ಅಲ್ಲಿ ಸರ್ಕಾರ ಇದೆಯೋ ಇಲ್ಲವೋ ಎಂಬ ಅನುಮಾನ ಮೂಡುತ್ತಿದೆ. ಇಂತಹ ನೀಚ ಕೃತ್ಯಗಳ ವಿರುದ್ಧ ಇಡೀ ಹಿಂದು ಸಮಾಜ ಒಂದಾಗಬೇಕಾಗಿದೆ. ಈ ವಿಚಾರದಲ್ಲಿ ಪ್ರಧಾನಿ ಮೋದಿ ಅವರು ಮಧ್ಯ ಪ್ರವೇಶಿಸಿ ಹಿಂದುಗಳ ಮೇಲಿನ ದೌರ್ಜನ್ಯ ತಡೆಗಟ್ಟಬೇಕು ಎಂದು ಆಗ್ರಹಿಸಿದರು.
ವಿಶ್ವ ಹಿಂದು ಪರಿಷದ್​ ಜಿಲ್ಲಾ ಕಾರ್ಯದರ್ಶಿ ರವಿ ಮಾತನಾಡಿ, ಬಾಂಗ್ಲಾದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ ತಡೆಗೆ ಕೇಂದ್ರ ಅಗತ್ಯ ಕ್ರಮ ಕೈಗೊಳ್ಳಬೇಕು. ಶಾಂತಿ, ಸೌಹಾರ್ದ ನೆಲೆಸಲು ವಿಶ್ವಸಂಸ್ಥೆಗೆ ಪತ್ರ ಬರೆಯಬೇಕು. ಹಿಂದು ಸಮಾಜ ಜಾಗೃತರಾಗಿ ಸಂಘಟಿತರಾಗಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಮಗೂ ಇಂತಹ ಪರಿಸ್ಥಿತಿ ನಿಮಾರ್ಣವಾಗಬಹುದು ಎಂದರು.
ದೌರ್ಜನ್ಯ ತಡೆಗಟ್ಟಿ : ಬಾಂಗ್ಲಾ ಮತ್ತು ಪಾಕಿಸ್ತಾನಗಳಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿವೆ. ಹಿಂದು ಮಹಿಳೆಯರ ಮೇಲೆ ಅತ್ಯಾಚಾರ, ಮತಾಂತರ, ಬಲವಂತದ ಮದುವೆ, ಹಲ್ಲೆ, ಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಕೇಂದ್ರ ಸಂಬಂಧಿಸಿದ ದೇಶಗಳ ಮುಖ್ಯಸ್ಥರ ಜತೆ ಚರ್ಚಿಸಿ ದೌರ್ಜನ್ಯ ತಡೆಗಟ್ಟಬೇಕು. ಗ್ರಾಮಾಂತರ ಜಿಲ್ಲೆ ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಬಾಂಗ್ಲಾದೇಶ ಮುಸ್ಲಿಮರು ಬಂದು ಅಕ್ರಮವಾಗಿ ನೆಲೆಸಿದ್ದಾರೆ. ಅವರನ್ನು ಜಿಲ್ಲಾಡಳಿತ ಮತ್ತು ಪೊಲೀಸ್​ ಇಲಾಖೆ ಗುರುತಿಸಿ, ಓಡಿಸಬೇಕು ಎಂದು ಕೋಲಾರ ವಿಭಾಗ ಬಜರಂಗದಳ ಸಂಯೋಜಕ ನರೇಶ್​ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net