ಯೂಟ್ಯೂಬರ್ಸ್‌ಗೆ ಎಚ್ಚರಿಕೆ ನೀಡಿದ ಎಸ್ಪಿ

 SP
SP
Published on
ಬೆಳಗಾವಿ: ಸರ್ಕಾರಿ ನೌಕರರು, ಸಿಬ್ಬಂದಿ, ಸಾರ್ವಜನಿಕರಿಗೆ ಬೆದರಿಕೆ ಹಾಗೂ ವೈಯಕ್ತಿಕ ತೇಜೋವಧೆ ಮಾಡಲು ಪ್ರಯತ್ನಿಸುವ ಯೂಟ್ಯೂಬರ್ಸ್‌ , ಸಾಮಾಜಿಕ ಜಾಲತಾಣ, ಹೋರಾಟಗಾರರ ವಿರುದ್ಧ ಕೇಸ್ ದಾಖಲಿಸಿ ರೌಡಿಶೀಟರ್ ಓಪನ್ ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಹೋರಾಟದ ಹೆಸರಲ್ಲಿ ಕಚೇರಿಯಲ್ಲಿ ಕರ್ತವ್ಯಕ್ಕೆ ಅಡ್ಡಿ, ಕಿರುಕುಳ, ಸಾಮಾಜಿಕ ಜಾಲತಾಣದಲ್ಲಿ ಆಡಿಯೋ, ವಿಡಿಯೋ ಹರಿದು ಬಿಡುವವರ ವಿರುದ್ಧ ದೂರು ಕೊಟ್ಟರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ರೌಡಿಶೀಟರ್ ಕೇಸ್ ಕೂಡ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.
ಅಕ್ರಮ ಚಟುವಟಿಕೆ, ಮೀಟರ್ ಬಡ್ಡಿ ದಂಧೆ, ರೌಡಿಶೀಟರ್, ಬೆದರಿಕೆ ಹಾಕುವವರ ಮೇಲೆ ನಿಗಾ ಇಡುವ ಜತೆಗೆ ಜೂ.10ರಂದು 112 ಜನರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ನಿಪ್ಪಾಣಿಯಲ್ಲಿ ರೌಡಿಶೀಟರ್ ಮನೆಯಲ್ಲಿ ಶಸ್ತಾಸ್ತ್ರ ಪತ್ತೆಯಾಗಿದ್ದು, ಆತನನ್ನು ಬಂಧಿಸಲಾಗಿದೆ.
ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ, ಮಹಿಳೆಯರಿಗೆ ಕಿರುಕುಳ ಹೀಗೆ ಅಪರಾಧ ಚಟುವಟಿಕೆ ಕುರಿತು ಮಾಹಿತಿ ನೀಡಿದರೆ ತಕ್ಷಣ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net