ಸತ್ಸಂಗದಿಂದ ಕ್ಲಿಷ್ಟ ಸಮಸ್ಯೆ ಪರಿಹಾರ

ಇಂಡಿ ನಗರದ ಶಿರಶ್ಯಾಡದ ಅಭಿನವ ಮುರುಘೇಂದ್ರ ಶ್ರೀಗಳ ಶಾಖಾ ಮಠದಲ್ಲಿ ಹುಣ್ಣಿಮೆ ಬೆಳದಿಂಗಳ ಕಾರ್ಯಕ್ರಮ 60 ವರ್ಷ ದಾಟಿದ ಹಿರಿಯರಿಗೆ ಆದರ್ಶ ದಂಪತಿಗೆ ಸನ್ಮಾನಿಸಲಾಯಿತು. ನೀಲಕಂಠಗೌಡ ಪಾಟೀಲ, ಅರವಿಂದ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ, ರಾಜೇಶ್ವರಿ ಕ್ಷತ್ರಿ, ಅನೀಲ ಪ್ರಸಾದ ಏಳಗಿ ಮತ್ತಿತರರಿದ್ದರು.
ಇಂಡಿ ನಗರದ ಶಿರಶ್ಯಾಡದ ಅಭಿನವ ಮುರುಘೇಂದ್ರ ಶ್ರೀಗಳ ಶಾಖಾ ಮಠದಲ್ಲಿ ಹುಣ್ಣಿಮೆ ಬೆಳದಿಂಗಳ ಕಾರ್ಯಕ್ರಮ 60 ವರ್ಷ ದಾಟಿದ ಹಿರಿಯರಿಗೆ ಆದರ್ಶ ದಂಪತಿಗೆ ಸನ್ಮಾನಿಸಲಾಯಿತು. ನೀಲಕಂಠಗೌಡ ಪಾಟೀಲ, ಅರವಿಂದ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ, ರಾಜೇಶ್ವರಿ ಕ್ಷತ್ರಿ, ಅನೀಲ ಪ್ರಸಾದ ಏಳಗಿ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಭಿನವ ಮುರುಘೇಂದ್ರ ಶ್ರೀ ಅಭಿಮತ
  • ಹಿರಿಯ ದಂಪತಿಗೆ ಸನ್ಮಾನ
ಇಂಡಿ: ಮಠಮಾನ್ಯಗಳಿಂದಲೇ ತಾಲೂಕು ಪ್ರಸಿದ್ಧಿ ಪಡೆದಿದೆ. ಹಲವಾರು ಮಠಗಳು ಅನ್ನ ಪ್ರಸಾದ, ಉಚಿತ ಶಿಕ್ಷಣ ಹುಣ್ಣಿಮೆ ಕಾರ್ಯಕ್ರಮದಂತಹ ಸಂಸ್ಕಾರ ನೀಡುತ್ತಿವೆ. ಸತ್ಸಂಗದಿಂದ ಜೀವನದ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಶಿರಶ್ಯಾಡದ ಅಭಿನವ ಮುರುಘೇಂದ್ರ ಶ್ರೀಗಳು ಹೇಳಿದರು.
ನಗರದ ಶಿರಶ್ಯಾಡದ ಅಭಿನವ ಮುರುಘೇಂದ್ರ ಶ್ರೀಗಳ ಶಾಖಾ ಮಠದಲ್ಲಿ ಹುಣ್ಣಿಮೆ ಬೆಳದಿಂಗಳ ಕಾರ್ಯಕ್ರಮ ಹಾಗೂ 60 ವರ್ಷ ದಾಟಿದ ಹಿರಿಯ ಆದರ್ಶ ದಂಪತಿಯನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಇತಿಹಾಸ ಸಾಂಸ್ಕೃತಿಕ ಧಾರ್ಮಿಕ ಭಜನೆ ಪುರಾಣ ಹಾಗೂ ಪ್ರವಚನ ಮಾಡುತ್ತಿರುವ ಮಠಗಳ ಕಾರ್ಯ ಶ್ಲಾಘನೀಯ ಎಂದರು.
ಶ್ರೀ ಶಾಂತೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ, ಧಾರ್ಮಿಕತೆಯನ್ನು ಬೆಳೆಸಲು ಇಂದಿನ ಯುವ ಪೀಳಿಗೆ ಮುಂದಾಗಬೇಕಿದೆ. ಯಾವುದೇ ಕೆಲಸವಿರಲಿ ಕೀಳಾಗಿ ನೋಡದೆ, ಆ ಕೆಲಸ ಮಾಡಿದಾಗ ನೆಮ್ಮದಿ ಬದುಕು ಸಾಗಿಸಲು ಸಾಧ್ಯ. 12ನೇಯ ಶತಮಾನದ ಬಸವಣ್ಣನವರು ದುಡಿದು ತಿನ್ನುವವರಿಗೆ ಭೇದ ಇಲ್ಲ, ಕಾಯಕವೇ ಶ್ರೇಷ್ಠ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನಾಡಿನ ಸಂಸ್ಕೃತಿಯನ್ನು ಕಾಪಾಡಿಕೊಂಡು ಹೋಗಿದ್ದರು. ಸಮಾನತೆ ಪರಂಪರೆಯಲ್ಲಿ ಮಠಗಳು ಕಾರ್ಯನಿರ್ವಹಿಸುತ್ತಿದ್ದು ಇದನ್ನು ಅರಿತು ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ರಾಘವೇಂದ್ರ ಕುಲಕರ್ಣಿ, ರಾಜೇಶ್ವರಿ ಕ್ಷತ್ರಿ, ಅನೀಲ ಪ್ರಸಾದ ಏಳಗಿ ಮಾತನಾಡಿದರು. ಬಸಯ್ಯ ನಿಂಬರಗಿಮಠ ದಂಪತಿ, ಚಂದ್ರಕಾಂತ ಉಪ್ಪಿನ ದಂಪತಿ, ಭೀಮನಗೌಡ ಪಾಟೀಲ ದಂಪತಿ, ಚನ್ನಗೌಡ ಪಾಟೀಲ ದಂಪತಿ, ಶಂಕರ ಮಜ್ಜಗಿ ದಂಪತಿಯನ್ನು ಸನ್ಮಾನಿಸಲಾಯಿತು. ನೀಲಕಂಠಗೌಡ ಪಾಟೀಲ, ಅರವಿಂದ ಕುಲಕರ್ಣಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net