ಯೋಧರ ತ್ಯಾಗ, ದೇಶಪ್ರೇಮ ಎಲ್ಲರಿಗೂ ಸ್ಫೂರ್ತಿ

ತಲ್ಲೂರ ಗ್ರಾಮದಲ್ಲಿ ನಿವೃತ್ತ ಹವಾಲ್ದಾರರಾದ ಮಹಾಂತೇಶ ಕೊಪ್ಪದ ಹಾಗೂ ಶಿವಾನಂದ ಗಾಣಿಗೇರ ಅವರನ್ನು ಇಂಚಲದ ಪೂರ್ಣಾನಂದ ಭಾರತಿ ಸ್ವಾಮೀಜಿ ಸನ್ಮಾನಿಸಿದರು. ಸಂಜೀವಕುಮಾರ ದೇಸಾಯಿ, ಆರ್​.ಐ.ಹಿರೇಮಠ, ಬಸಪ್ಪ ಅಂಗಡಿ, ಮಹಾರುದ್ರಪ್ಪ ಉಪ್ಪಿನ, ಶಂಕರಗೌಡ ಪಾಟೀಲ ಇತರರಿದ್ದರು.
ತಲ್ಲೂರ ಗ್ರಾಮದಲ್ಲಿ ನಿವೃತ್ತ ಹವಾಲ್ದಾರರಾದ ಮಹಾಂತೇಶ ಕೊಪ್ಪದ ಹಾಗೂ ಶಿವಾನಂದ ಗಾಣಿಗೇರ ಅವರನ್ನು ಇಂಚಲದ ಪೂರ್ಣಾನಂದ ಭಾರತಿ ಸ್ವಾಮೀಜಿ ಸನ್ಮಾನಿಸಿದರು. ಸಂಜೀವಕುಮಾರ ದೇಸಾಯಿ, ಆರ್​.ಐ.ಹಿರೇಮಠ, ಬಸಪ್ಪ ಅಂಗಡಿ, ಮಹಾರುದ್ರಪ್ಪ ಉಪ್ಪಿನ, ಶಂಕರಗೌಡ ಪಾಟೀಲ ಇತರರಿದ್ದರು.
Published on
ತಲ್ಲೂರ: ಯೋಧರ ತ್ಯಾಗ, ಧೈರ್ಯ ಹಾಗೂ ಶಿಸ್ತು ಎಲ್ಲರ ಬದುಕಿಗೂ ಪ್ರೇರಣೆಯಾಗಿದೆ ಎಂದು ಇಂಚಲದ ಪೂರ್ಣಾನಂದ ಭಾರತಿ ಸ್ವಾಮೀಜಿ ಹೇಳಿದರು.
ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ "ಜೈ ಜವಾನ್​ ಜೈ ಕಿಸಾನ್​' ಮಾಜಿ ಸೈನಿಕರ ೇಮಾಭಿವೃದ್ಧಿ ಸಂದ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಸೇನೆಯಿಂದ ಸೇವಾ ನಿವೃತ್ತರಾದ ಹವಾಲ್ದಾರ್​ ಮಹಾಂತೇಶ ಕೊಪ್ಪದ ಹಾಗೂ ಹವಾಲ್ದಾರ್​ ಶಿವಾನಂದ ಗಾಣಿಗೇರ ಅವರ ಸ್ವಾಗತ, ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಗಡಿಯಲ್ಲಿ ಗಾಳಿ, ಚಳಿ ಲೆಕ್ಕಿಸದೆ ಯೋಧರು ನಿರಂತರವಾಗಿ ದೇಶಕ್ಕಾಗಿ ಶ್ರಮಿಸುತ್ತಿರುವ ಲವಾಗಿ ನಾವೆಲ್ಲರೂ ಕುಟುಂಬಸ್ಥರೊಂದಿಗೆ ನೆಮ್ಮದಿ ಜೀವನ ಸಾಗಿಸುತ್ತಿದ್ದೇವೆ. ಯೋಧರ ಕಾರ್ಯ ಅವಿಸ್ಮರಣೀಯ. ಮಹಾಂತೇಶ ಕೊಪ್ಪದ ಹಾಗೂ ಶಿವಾನಂದ ಗಾಣಿಗೇರ ಆಪರೇಷನ್​ ಸಿಂಧೂರನಲ್ಲಿ ಭಾಗವಹಿಸಿದ್ದು ಹೆಮ್ಮೆಯ ಸಂಗತಿ ಎಂದರು.
ವಿಜಯಪುರ ಮಾಜಿ ಸೈನಿಕರ ಸಂದ ಅಧ್ಯ ಆರ್​.ಐ.ಹಿರೇಮಠ, ಮಹಾಂತೇಶ ಕೊಪ್ಪದ, ಶಿವಾನಂದ ಗಾಣಿಗೇರ ಮಾತನಾಡಿ, ಯುವಕರು ದೇಶಸೇವೆಗೆ ಮುಂದಾಗಬೇಕು. ಪ್ರತಿ ಕುಟುಂಬದಿಂದ ಒಬ್ಬರು ಸೇನೆ ಸೇರಬೇಕು ಎಂದರು.
ಪ್ರಗತಿಪರ ರೈತ ಅಡಿವೆಪ್ಪ ಮಾದರ, ಅಶೋಕ ಇಂಗಳೆ, ಯೋಧರ ಪತ್ನಿ ನಿರ್ಮಲಾ ಕೊಪ್ಪದ, ಭಾರತಿ ಗಾಣಿಗೇರ ಅವರನ್ನು ಸನ್ಮಾನಿಸಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ನಿವೃತ್ತ ಯೋಧರ ಮೆರವಣಿಗೆ ನಡೆಸಲಾಯಿತು.
ಮುಖಂಡ ಸಂಜೀವಕುಮಾರ ದೇಸಾಯಿ, ಮಾಜಿ ಸೈನಿಕರ ೇಮಾಭಿವೃದ್ಧಿ ಸಂದ ಅಧ್ಯ ಬಸಪ್ಪ ಅಂಗಡಿ, ಗ್ರಾಪಂ ಮಾಜಿ ಉಪಾಧ್ಯ ಬಾಬುಗೌಡ ಅಣ್ಣಿಗೇರಿ, ಪಿಕೆಪಿಎಸ್​ ಅಧ್ಯ ಮಹಾರುದ್ರಪ್ಪ ಉಪ್ಪಿನ, ಮುಖ್ಯಶಿಕ ಡಿ.ಡಿ.ಭೋವಿ, ಮುಖಂಡ ಶಂಕರಗೌಡ ಪಾಟೀಲ, ಲಕ್ಷಿ$್ಮ ರಾಯಣ್ಣವರ, ನಿವೃತ್ತ ಮುಖ್ಯಶಿಕ ಎ.ವಿ.ಇಂಗಳೆ, ಬಸಪ್ಪ ಲಕ್ಕನ್ನವರ, ಕೀರಪ್ಪ ಕುಂಬಾರ, ಶಂಕರಪ್ಪ ಗಾಣಿಗೇರ, ಬಸಪ್ಪ ಕೊಪ್ಪದ, ಶಿವಾನಂದ ಯರಗಟ್ಟಿ, ಉಮಾರೂಢ ತಲ್ಲೂರ ಇತರರಿದ್ದರು. ಬಸನಗೌಡ ಅಣ್ಣಿಗೇರಿ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net