ಸೊಲ್ಲಾಪುರ ಅನೇಕ ಭಾಷೆಗಳ ಸಂಗಮ

ಸೊಲ್ಲಾಪುರದಲ್ಲಿ ಭಾನುವಾರ ನಡೆದ ಅಖಿಲ ಭಾರತ ಹೊರನಾಡ ಕನ್ನಡ ಸಂಗಳ ಪ್ರತಿನಿಧಿಗಳ 10ನೇ ಮಹಾಮೇಳದ ಸಮಾರೋಪದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಕಾಶಿ ಜಗದ್ಗುರು ಶ್ರೀ ಡಾ.ಮಲ್ಲಿಕಾರ್ಜುನ ಶಿವಾಚಾರ್ಯ, ಮಾಜಿ ಶಾಸಕ ವಿಶ್ವನಾಥ ಚಾಕೋತೆ, ರಂಜಾನ್​ ದರ್ಗಾ, ಶಂಕರ ಹಲಗತ್ತಿ, ಸಂಜೀವ ಕುಲಕರ್ಣಿ, ಶಿವಾನಂದ ಭಾವಿಕಟ್ಟಿ, ವಿಶ್ವೇಶ್ವರ ಹಿರೇಮಠ, ಗುರು ಹಿರೇಮಠ ಇತರರಿದ್ದರು.
ಸೊಲ್ಲಾಪುರದಲ್ಲಿ ಭಾನುವಾರ ನಡೆದ ಅಖಿಲ ಭಾರತ ಹೊರನಾಡ ಕನ್ನಡ ಸಂಗಳ ಪ್ರತಿನಿಧಿಗಳ 10ನೇ ಮಹಾಮೇಳದ ಸಮಾರೋಪದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಕಾಶಿ ಜಗದ್ಗುರು ಶ್ರೀ ಡಾ.ಮಲ್ಲಿಕಾರ್ಜುನ ಶಿವಾಚಾರ್ಯ, ಮಾಜಿ ಶಾಸಕ ವಿಶ್ವನಾಥ ಚಾಕೋತೆ, ರಂಜಾನ್​ ದರ್ಗಾ, ಶಂಕರ ಹಲಗತ್ತಿ, ಸಂಜೀವ ಕುಲಕರ್ಣಿ, ಶಿವಾನಂದ ಭಾವಿಕಟ್ಟಿ, ವಿಶ್ವೇಶ್ವರ ಹಿರೇಮಠ, ಗುರು ಹಿರೇಮಠ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಗದ್ಗುರು ಶ್ರೀ ಡಾ.ಮಲ್ಲಿಕಾರ್ಜುನ ಶಿವಾಚಾರ್ಯ ನುಡಿ
  • ಕನ್ನಡ ಸಂಘಗಳ 10ನೇ ಮಹಾಮೇಳಕ್ಕೆ ತೆರೆ
ಸೊಲ್ಲಾಪುರ: ಕನ್ನಡ, ತೆಲುಗು, ಮರಾಠಿ ಸೇರಿ ಅನೇಕ ಭಾಷಿಕರಿರುವ ಸೊಲ್ಲಾಪುರ ಭಾಷೆಗಳ ಸಂಗಮವಾಗಿದೆ ಎಂದು ಕಾಶಿ ಪೀಠದ ಜಗದ್ಗುರು ಶ್ರೀ ಡಾ.ಮಲ್ಲಿಕಾರ್ಜುನ ಶಿವಾಚಾರ್ಯ ನುಡಿದರು.
ನಗರದಲ್ಲಿ ಭಾನುವಾರ ಆಯೋಜಿಸಿದ್ದ ಅಖಿಲ ಭಾರತ ಹೊರನಾಡ ಕನ್ನಡ ಸಂಗಳ ಪ್ರತಿನಿಧಿಗಳ 10ನೇ ಮಹಾಮೇಳದ ಸಮಾರೋಪದಲ್ಲಿ ಆಶೀರ್ವಚನ ನೀಡಿದ ಅವರು, ಔದ್ಯೋಗಿಕ ೇತ್ರವಾಗಿರುವ ಸೊಲ್ಲಾಪುರದಲ್ಲಿ ಶೇ.40 ಕನ್ನಡಿಗರಿದ್ದಾರೆ. ಎಲ್ಲರಿಗೂ ಅವರವರ ಭಾಷೆ, ಪ್ರಾಂತ್ಯದ ಬಗ್ಗೆ ಗೌರವ, ಅಭಿಮಾನ ಇರಬೇಕು. ಆದರೆ ಮಾತೃ ಾಷೆಗೆ ಎತ್ತರ ಸ್ಥಾನ ಇಟ್ಟು ಬೇರೆ ಭಾಷೆಗಳನ್ನು ಗೌರವಿಸಬೇಕು ಎಂದು ಕಿವಿಮಾತು ಹೇಳಿದರು.
ಆಲೂರು ವೆಂಕಟರಾವ್​ ಟ್ರಸ್ಟ್​ ಅಧ್ಯ ರಂಜಾನ್​ ದರ್ಗಾ ಮಾತನಾಡಿ, ಕನ್ನಡಿಗರು ಎಲ್ಲೇ ಇದ್ದರೂ ಒಂದಾಗಿರುವ ಆಸೆ, ಭಾವನೆಯನ್ನೂ ಯಾರೂ ಸೋಲಿಸಲು ಸಾಧ್ಯವಿಲ್ಲ. ಆದರೆ ಹೊರನಾಡು ಕನ್ನಡಿಗರ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರ ಗಂಭೀರ ಚಿಂತನೆ ಮಾಡಬೇಕು ಎಂದು ಒತ್ತಾಸೆ ವ್ಯಕ್ತಪಡಿಸಿದರು.
ಮಾಜಿ ಶಾಸಕ ವಿಶ್ವನಾಥ ಚಾಕೋತೆ ಮಾತನಾಡಿ, ಸೊಲ್ಲಾಪುರದಲ್ಲಿ ಕನ್ನಡ ಬೆಳೆಸಿ ಉಳಿಸಿಕೊಳ್ಳಲು ಸಾಕಷ್ಟು ಮಹಾನ್​ ವ್ಯಕ್ತಿಗಳು ಕಾರ್ಯ ಮಾಡಿದ್ದಾರೆ. ಈ ಪೈಕಿ ಜಯದೇವಿ ತಾಯಿ ಲಿಗಾಡೆ ಹಾಗೂ ಮಲ್ಲಪ್ಪ ವಾರದ ಅಗ್ರರು. ಸೊನ್ನಲಗಿ ಸಿದ್ಧರಾಮೇಶ್ವರ ಆಶೀರ್ವಾದದಿಂದ ಕನ್ನಡಿಗರು ಮತ್ತು ಮರಾಠಿಗರು ಬಾಂಧವ್ಯದಿಂದ ಬದುಕುತ್ತಿದ್ದಾರೆ ಎಂದು ಹೇಳಿದರು.
ಸಂದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಉಪಾಧ್ಯ ಸಂಜೀವ ಕುಲಕರ್ಣಿ, ಶಿವಾನಂದ ಭಾವಿಕಟ್ಟಿ, ವಿಶ್ವೇಶ್ವರ ಹಿರೇಮಠ, ಗುರು ಹಿರೇಮಠ ಇತರರಿದ್ದರು. ಉದ್ಯಮಿ ಪರಮಾನಂದ ಆಲಗೊಂಡ, ಹೋರಾಟಗಾರ ಎನ್​.ಎ. ವಾಲೆ, ಜಾನಪದ ಕಲಾವಿದ ಗೈಬಿಶಾ ಮಕಾನದಾರ, ಡಿ.ಬಿ. ಹೆಬ್ಬಾಳ, ಕೆ.ಎನ್​. ಹೂಗಾರ, ಅಕ್ಬರ್​ ಮುಲ್ಲಾ ಅವರನ್ನು ಸನ್ಮಾನಿಸಲಾಯಿತು.
"

ಗಡಿನಾಡು, ಹೊರನಾಡ ಕನ್ನಡಿಗರ ಕರೆಯಿಸಿ ಸಮ್ಮೇಳನ ಮಾಡಿದ್ದು, ಬರುವ ದಿನಗಳಲ್ಲಿ ಹೊರದೇಶದಲ್ಲಿರುವ ಕನ್ನಡಿಗರನ್ನು ಕರೆಯಿಸಿ ಸಮ್ಮೇಳನ ಮಾಡುವ ಮೂಲಕ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ವಿದ್ಯಾವರ್ಧಕ ಸಂ ಚಿಂತನೆ ಮಾಡಲಿ.

— > ಶ್ರೀ ಡಾ.ಮಲ್ಲಿಕಾರ್ಜುನ ಶಿವಾಚಾರ್ಯ ಜಗದ್ಗುರು ಕಾಶಿ ಪೀಠ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net