ಜಿಲ್ಲೆಯ ತೆನಿಕೊಳ್ಳದ ಕೆಎಲ್ಇ ಕೃಷಿ ವಿಾನ ಮಹಾವಿದ್ಯಾಲಯದಲ್ಲಿ ಶುಕ್ರವಾರ ವಿಶ್ವ ಪರಿಸರ ದಿನ ಆಚರಿಸಲಾಯಿತು. ಡಾ.ಪಿ.ಎಲ್.ಪಾಟೀಲ, ಡಾ.ವಿ.ಎಸ್.ಪಾಟೀಲ, ಡಾ.ಪ್ರವಿಣಕುಮಾರ ಎಂ.ಬಿ., ಡಾ.ಮಧುರಿಮಾ ವಿನೋದ, ಡಾ.ಸೌರಭ ಮುನ್ನೋಳಿ ಇತರರಿದ್ದರು.
ಬೆಳಗಾವಿ: ಪರಿಸರವನ್ನು ಸ್ವಚ್ಛವಾಗಿ ಮತ್ತು ಸುರತವಾಗಿ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಕೃಷಿ ಮೂಲಾಧಾರಗಳಾದ ಮಣ್ಣು ಮತ್ತು ನೀರನ್ನು ಸಂರಸುವುದು ಅಗತ್ಯ ಎಂದು ಧಾರವಾಡದ ವಿಶ್ರಾಂತ ಕುಲಪತಿ ಡಾ.ಪಿ.ಎಲ್.ಪಾಟೀಲ ಹೇಳಿದರು.
ಜಿಲ್ಲೆಯ ಸವದತ್ತಿ ತಾಲೂಕಿನ ತೆನಿಕೊಳ್ಳದಲ್ಲಿನ ಕೆಎಲ್ಇ ಕೃಷಿ ವಿಾನ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯತೆ ವಹಿಸಿದ್ದ ಮಹಾವಿದ್ಯಾಲಯದ ವಿದ್ಯಾಧಿಕಾರಿ ಡಾ.ವಿ.ಎಸ್.ಪಾಟೀಲ ಮಾತನಾಡಿ, ಪ್ರತಿಯೊಬ್ಬರೂ ಒಂದು ಗಿಡ ನೆಟ್ಟು ಬೆಳೆಸುವ ಅಭ್ಯಾಸ ರೂಢಿಸಿಕೊಳ್ಳಬೇಕು. ಜನ್ಮದಿನ, ಮದುವೆ ಹಾಗೂ ಇತರ ಶುಭ ಸಮಾರಂಭಗಳಲ್ಲಿ ಉಡುಗೊರೆಯಾಗಿ ಸಸಿಗಳನ್ನು ನೀಡುವ ಸಂಸತಿ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹವಾಮಾನ ಬದಲಾವಣೆಯಿಂದ ಉಷ್ಣ ಗಾಳಿ, ಪ್ರವಾಹಗಳು ಹಾಗೂ ಅಕಾಲಿಕ ಮಳೆಯಂತಹ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಇವು ಮಾನವನ ಜೀವನ ಹಾಗೂ ಕೃಷಿ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ ಎಂದು ವಿವರಿಸಿದರು. ಡಾ.ಪ್ರವಿಣಕುಮಾರ ಎಂ.ಬಿ, ಡಾ.ಮಧುರೀಮಾ ವಿನೋದ, ಡಾ.ಸೌರಭ ಮುನ್ನೋಳಿ ಇತರರಿದ್ದರು.