ಸಮಾಜ ಕಲ್ಯಾಣ ಖಾತೆ ದೊಡ್ಡ ಕೊಡುಗೆ / HOSAKOTE

ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಾದರ ಮಹಾಸಭಾ ಅಧ್ಯಕ್ಷ ಡಾ.ಎಚ್​.ಎಂ.ಸುಬ್ಬರಾಜು ಹಾಗೂ ಪದಾಧಿಕಾರಿಗಳು ಸಚಿವ ಕೆ.ಎಚ್​. ಮುನಿಯಪ್ಪ ದಂಪತಿಯನ್ನು ಬೆಂಗಳೂರಿನ ನಿವಾಸದಲ್ಲಿ ಸನ್ಮಾನಿಸಿದರು. ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ವಿಜಯಕುಮಾರ್​, ಹೊಸಕೋಟೆ ಮಾದರ ಮಹಾಸಭಾ ತಾಲೂಕು ಅಧ್ಯಕ್ಷ ಗುಟ್ಟಹಳ್ಳಿ ನಾಗರಾಜ್​ ಇದ್ದರು.

Published on

ಹೊಸಕೋಟೆ :

ಡಿ.ಕೆ.ಶಿವಕುಮಾರ್​ ಸರ್ಕಾರದಲ್ಲಿ ಕೆ.ಎಚ್​.ಮುನಿಯಪ್ಪ ಅವರಿಗೆ ಸಮಾಜ ಕಲ್ಯಾಣ ಖಾತೆ ನೀಡಿರುವುದು ಸಮುದಾಯಕ್ಕೆ ಕಾಂಗ್ರೆಸ್​ ನೀಡಿರುವ ದೊಡ್ಡ ಕೊಡುಗೆ ಎಂದು ಜಿಲ್ಲಾ ಮಾದರ ಮಹಾಸಭಾ ಅಧ್ಯಕ್ಷ ಡಾ.ಎಚ್​.ಎಂ.ಸುಬ್ಬರಾಜು ಹೇಳಿದರು.

ಸಚಿವ ಕೆ.ಎಚ್​ ಮುನಿಯಪ್ಪ ದಂಪತಿಯನ್ನು ಅವರ ಬೆಂಗಳೂರು ನಿವಾಸದಲ್ಲಿ ಸನ್ಮಾನಿಸಿದ ಬಳಿಕ ಹೊಸಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಬ್ಬರಾಜು, ದಶಕಗಳ ರಾಜಕೀಯ ಅನುಭವ ಇರುವ ಮುನಿಯಪ್ಪ ಅವರಿಗೆ ಸಮಾಜ ಕಲ್ಯಾಣ ಇಲಾಖೆಯಂತಹ ಮಹತ್ವದ ಖಾತೆ ದೊರೆತಿರುವುದರಿಂದ

ದಲಿತರು, ಶೋಷಿತರು ಹಾಗೂ ಹಿಂದುಳಿದ ವರ್ಗಗಳ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಮತ್ತಷ್ಟು ಆದ್ಯತೆದೊರೆಯಲಿದೆ ಎಂಬ ನಿರೀಕ್ಷೆ ಮೂಡಿದೆ ಎಂದರು.

ಸಮುದಾಯದ ಮುಖಂಡರಾದ ಹರೀಶ್​ ಚಕ್ರವರ್ತಿ, ದೊಡ್ಡಹುಲ್ಲೂರು ನಾರಾಯಣಸ್ವಾಮಿ, ಸೊಣ್ಣೇನಹಳ್ಳಿ ಶ್ರೀನಿವಾಸ್​ ಸೇರಿದಂತೆ ತಾಲೂಕಿನ ಮಾದರ ಮಹಾಸಭಾ ಪದಾಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net