ಗುಳೇದಗುಡ್ಡದ ಶೆಟ್ಟರ ಸಮಸ್ತ ಕಲ್ಯಾಣ ಮಂಟಪದಲ್ಲಿ ನಡೆದ ಗುರು ಸಮರ್ಪಣೆ ಮತ್ತು ಸೇವಾ ನಿವತ್ತಿ ಸಮಾರಂಭವನ್ನು ಮರಡಿಮಠದ ಅಭಿನವ ಕಾಡಸಿದ್ಧೇಶ್ವರ ಸ್ವಾಮಿಗಳು ಉದ್ಘಾಟಿಸಿದರು. ಕ್ಷೇತ್ರ ಸಮನ್ವಯ ಅಧಿಕಾರಿ ಎಂ.ಬಿ.ದೊಡ್ಡಪ್ಪನವರು, ಸಮಾಜದ ಅಧ್ಯಕ್ಷ ಶಿವನಯ್ಯ ಮಳ್ಳಿಮಠ, ಸರ್ವ ಮಂಗಳ ಪೂಜಾರಿ, ಸಂಗಮೇಶ ಎಲಿಗಾರ ಇತರರಿದ್ದರು.
ಗುಳೇದಗುಡ್ಡ: ಪ್ರಜ್ಞಾವಂತ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅನನ್ಯವಾಗಿದ್ದು, ನಿಸ್ವಾರ್ಥ ಸೇವೆಯ ಮೂಲಕ ಅವರು ಸಮಾಜಕ್ಕೆ ದಿಕ್ಕು ತೋರಿಸುತ್ತಾರೆ ಎಂದು ಮರಡಿಮಠದ ಅಭಿನವ ಕಾಡಸಿದ್ಧೇಶ್ವರ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಶೆಟ್ಟರ ಸಮಸ್ತ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಗುರು ಸಮರ್ಪಣೆ ಮತ್ತು ಸೇವಾ ನಿವತ್ತಿ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಕ ವತ್ತಿ ಪವಿತ್ರವಾದ್ದ್ದು, ಜೀವನಪೂರ್ತಿ ನಿಷ್ಠೆಯಿಂದ ಬೋಧನೆ ಮಾಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ತರ ಕೊಡುಗೆ ನೀಡುತ್ತಾರೆ ಎಂದರು.
ನಿವತ್ತಿಗೊಂಡ ನಿಂಗಯ್ಯ ಪೂಜಾರಿ ಅವರು ದೀರ್ಘಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ, ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಿದ ಸಾಧನೆ ಶ್ಲಾಘನೀಯವಾಗಿದೆ ಎಂದು ಕೊಂಡಾಡಿದರು. ನಿವತ್ತಿ ನಂತರವೂ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿ ಜೀವನವನ್ನು ಸಾರ್ಥಕಗೊಳಿಸಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಸಮನ್ವಯ ಅಧಿಕಾರಿ ಎಂ.ಬಿ. ದೊಡ್ಡಪ್ಪನವರು, ಜಂಗಮ ಸಮಾಜದ ಅಧ್ಯಕ್ಷ ಶಿವನಯ್ಯ ಮಳ್ಳಿಮಠ, ಸರ್ವ ಮಂಗಳ ಪೂಜಾರಿ, ಸಂಗಮೇಶ ಎಲಿಗಾರ, ರಾಜು ಹಿರೇಮಠ, ಪ್ರಭು ತಟ್ಟಿ ಮಠ, ಮಹಾಂತೇಶ ಸರಗಣಾಚಾರಿ, ಸಿದ್ದು ಕರನಾಲಗಿ, ಸಂಜು ನಡುವಿನಮನಿ, ಭುವನ್ ಪೂಜಾರಿ ಮತ್ತಿತರರಿದ್ದರು.