ಸಂಸ್ಕಾರಯುತ ಶಿಕ್ಷಣದಿಂದ ಸಾಮಾಜಿಕ ಗೌರವ / SULIBELE

ಹೊಸಕೋಟೆ ತಾಲೂಕಿನ ಸೂಲಿಬೆಲೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಪ್ರತಿಭಾ ದರ್ಪಣ ಕಾರ್ಯಕ್ರಮವನ್ನು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಿ.ಎನ್​.ಗೋಪಾಲಗೌಡ ಉದ್ಘಾಟಿಸಿದರು. ಬಮುಲ್​ ನಿರ್ದೇಶಕ ಬಿ.ವಿ.ಸತೀಶಗೌಡ, ಪ್ರಾಂಶುಪಾಲೆ ಡಾ.ಕಲ್ಪನಾ, ಅಭಿವೃದ್ಧಿ ಸಮಿತಿ ಸದಸ್ಯ ಬೆಟ್ಟಹಳ್ಳಿ ಗೋಪಿನಾಥ್​, ನಿವೃತ್ತ ಪ್ರಾಂಶುಪಾಲ ಡಾ.ಮೋಹನ್​ಕುಮಾರ್​ ಇತರರು ಇದ್ದರು.
ಹೊಸಕೋಟೆ ತಾಲೂಕಿನ ಸೂಲಿಬೆಲೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಪ್ರತಿಭಾ ದರ್ಪಣ ಕಾರ್ಯಕ್ರಮವನ್ನು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಿ.ಎನ್​.ಗೋಪಾಲಗೌಡ ಉದ್ಘಾಟಿಸಿದರು. ಬಮುಲ್​ ನಿರ್ದೇಶಕ ಬಿ.ವಿ.ಸತೀಶಗೌಡ, ಪ್ರಾಂಶುಪಾಲೆ ಡಾ.ಕಲ್ಪನಾ, ಅಭಿವೃದ್ಧಿ ಸಮಿತಿ ಸದಸ್ಯ ಬೆಟ್ಟಹಳ್ಳಿ ಗೋಪಿನಾಥ್​, ನಿವೃತ್ತ ಪ್ರಾಂಶುಪಾಲ ಡಾ.ಮೋಹನ್​ಕುಮಾರ್​ ಇತರರು ಇದ್ದರು.
Published on
ಸೂಲಿಬೆಲೆ : ಹುಟ್ಟಿದ ಪ್ರತಿಯೊಬ್ಬ ಮನುಷ್ಯ ವಿಶ್ವಮಾನರಾಗಿ ಹುಟ್ಟಿ ಅಲ್ಪಮಾನವರಾಗುತ್ತಾರೆ. ಆದರೆ ಇವರನ್ನು ಮಾನವರಾಗಿ ಮಾಡುವ ಜವಾಬ್ದಾರಿ ಶಿಕ್ಷಕರಾಗಿರುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಿ.ಎನ್​.ಗೋಪಾಲಗೌಡ ಹೇಳಿದರು.
ಹೊಸಕೋಟೆ ತಾಲೂಕಿನ ಸೂಲಿಬೆಲೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾಲೇಜು ವಾರ್ಷಿಕೋತ್ಸವ ಮತ್ತು ಪ್ರತಿಭಾ ದರ್ಪಣ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಮಾಜಿಕ ಗೌರವ ಸಂಪಾದನೆ ಮಾಡಬೇಕಾದರೆ ಸಂಸ್ಕಾರಯುತ ಶಿಕ್ಷಣ ಪಡೆಯಬೇಕು ಎಂದರು.
ಬಮುಲ್​ ನಿರ್ದೇಶಕ ಬಿ.ವಿ.ಸತೀಶಗೌಡ ಮಾತನಾಡಿ, ಮಾಜಿ ಸಚಿವ ಬಿ.ಎನ್​.ಬಚ್ಚೇಗೌಡ ಅವರ ಸಹಕಾರದಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾರಂಭವಾಗಿದ್ದು, 5 ಎಕರೆ ಜಾಗ ನೀಡಿ, 2 ಕೋಟಿ ರೂ. ಅನುದಾನದಲ್ಲಿ ಕಾಲೇಜು ನಿರ್ಮಿಸಿದರು. ಇದೀಗ ಶಾಸಕರು 3 ಕೋಟಿಗೂ ಅಧಿಕ ಅನುದಾನ ನೀಡಿ ಹೆಚ್ಚುವರಿ ಕೊಠಡಿ ನಿಮಾರ್ಣ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.
ನಿವೃತ್ತ ಪ್ರಾಂಶುಪಾಲ ಡಾ.ಮೋಹನ್​ಕುಮಾರ್​ ಮಾತನಾಡಿ, ಶಿಕ್ಷಕ ವೃತ್ತಿ ಸಾಮಾಜಿಕ ಕಾಳಜಿಯುಳ್ಳ ಕಾಯಕವಾಗಿದ್ದು, ಉಪನ್ಯಾಸಕರು ಬಂಡೆಯಂತಹ ವಿದ್ಯಾರ್ಥಿಗಳನ್ನು ಶಿಲ್ಪಗಳಾಗಿ ರೂಪಿಸಬೇಕು. ವಿದ್ಯಾಭ್ಯಾಸದಲ್ಲಿ ಬಡತನ ಸಿರಿತನ ಎಂಬುದು ಇರುವುದಿಲ್ಲ. ವಿದ್ಯಾರ್ಥಿಗಳು ಹಸಿವು ಹೆಚ್ಚಾಗಬೇಕು. ಕಡ್ಡಾಯವಾಗಿ ಉನ್ನತ ಮಟ್ಟದ ವಿದ್ಯಾಭ್ಯಾಸ ಪಡೆಯಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಯುಪಿಎಸ್​ಸಿ ಪರೀಕ್ಷೆಯ ಗುರಿಹೊಂದಬೇಕು. ಕೆಎಎಸ್​ ಹಾಗೂ ಐಎಎಸ್​ ಸೇವಾ ವೃತ್ತಿಯ ಅಧ್ಯಯನಕ್ಕೆ ಒತ್ತು ನೀಡಬೇಕು ಎಂದರು.
ಕಾಲೇಜು ಪ್ರಾಂಶುಪಾಲೆ ಡಾ.ಕಲ್ಪನಾ ಮಾತನಾಡಿ, ವಿದ್ಯಾರ್ಥಿಗಳು ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಕೆಲಸ ಮಾಡಲು ಡಿಗ್ರಿಯ ಅವಶ್ಯಕತೆ ಇಲ್ಲ. ಶ್ರದ್ಧೆಯಿಂದ ಪದವಿ ಸಂಪಾದಿಸಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಮೂಲಕ ಗೆಲುವು ಸಾಧಿಸಿ. ಉನ್ನತ ಮಟ್ಟದ ಅವಕಾಶಗಳಿಗೆ ಒತ್ತು ನೀಡಿ. ವಿದ್ಯಾರ್ಥಿಗಳು ಪಠ್ಯಕ್ಕೆ ಸಿಮಿತವಾಗದೇ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಿ. ಆಟ, ಪಾಠ, ಓಟ, ಸಾಂಸತಿಕ ಚಟುವಟಿಕೆಗಳಲ್ಲೂ ಸಕ್ರಿಯರಾಗಿಬೇಕು ಸಲಹೆ ನೀಡಿದರು.
ನಿವೃತ್ತಿ ಪ್ರಾಂಶುಪಾಲ ಡಾ.ಮೋಹನ್​ಕುಮಾರ್​ ಹಾಗೂ ಅಧೀಕ್ಷಕರಾದ ಪುಲ್ಲಯ್ಯ ಅವರಿಗೆ ಬಮುಲ್​ ನಿರ್ದೇಶಕ ಬಿ.ವಿ.ಸತೀಶಗೌಡ ಅವರು ಸನ್ಮಾನಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ರವಿಚಂದ್ರ, ಬೆಟ್ಟಹಳ್ಳಿ ಗೋಪಿನಾಥ್​, ಭಾಗ್ಯಮ್ಮ, ಆನಂದ್​, ಪ್ರಶಾಂತ್​, ಉಪನ್ಯಾಸಕರಾದ ಡಾ.ಸಂಗೀತಾ, ಡಾ.ಚನ್ನಕೃಷ್ಣ, ಡಾ.ಅಶ್ವತ್ಥ್​ ನಾರಾಯಣ್​, ವೆಂಕಟರಮಣಪ್ಪ, ಕೃಷ್ಣಪ್ಪ, ಜಯರಾಮ್​, ಡಾ.ಅಮೀರ್​ಪಾಷಾ, ಯುವ ಮುಖಂಡ ಹಸಿಗಾಳ ಜಗದೀಶ್​ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net