ಶಿಕ್ಷಣದಿಂದ ಮಾತ್ರ ಸಾಮಾಜಿಕ ಸಮಾನತೆ ಸಾಧ್ಯ / SULIBELE

ಹೊಸಕೋಟೆ ತಾಲೂಕಿನ ಸೂಲಿಬೆಲೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ರಾಜ್ಯ ವೈಜ್ಞಾನಿಕ ಪರಿಷತ್​ನಿಂದ ಅಂಬೇಡ್ಕರ್​ ಜಯಂತಿ ಆಚರಿಸಲಾಯಿತು. ಜಿಲ್ಲಾಧ್ಯಕ್ಷ ಎಂ.ಆರ್​.ಉಮೇಶ್​, ತಾಲೂಕು ಅಧ್ಯಕ್ಷ ರವಿಕುಮಾರ್​, ನಯಾಜ್​ ಖಾನ್​, ರಾಜೇಶ್ವರಿ, ಸುನೀತಾ ಉಮೇಶ್​ ಇತರರು ಇದ್ದರು.
ಹೊಸಕೋಟೆ ತಾಲೂಕಿನ ಸೂಲಿಬೆಲೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ರಾಜ್ಯ ವೈಜ್ಞಾನಿಕ ಪರಿಷತ್​ನಿಂದ ಅಂಬೇಡ್ಕರ್​ ಜಯಂತಿ ಆಚರಿಸಲಾಯಿತು. ಜಿಲ್ಲಾಧ್ಯಕ್ಷ ಎಂ.ಆರ್​.ಉಮೇಶ್​, ತಾಲೂಕು ಅಧ್ಯಕ್ಷ ರವಿಕುಮಾರ್​, ನಯಾಜ್​ ಖಾನ್​, ರಾಜೇಶ್ವರಿ, ಸುನೀತಾ ಉಮೇಶ್​ ಇತರರು ಇದ್ದರು.
Published on
ಸೂಲಿಬೆಲೆ : ದೇಶದಲ್ಲಿ ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಹೋರಾಡಿದ ಡಾ.ಅಂಬೇಡ್ಕರ್​ ಅವರ ಸಾಧನೆ ಅನನ್ಯ ಎಂದು ರಾಜ್ಯ ವೈಜ್ಞಾನಿಕ ವಿಜ್ಞಾನ ಪರಿಷತ್​ ಜಿಲ್ಲಾಧ್ಯಕ್ಷ ಎಂ.ಆರ್​. ಉಮೇಶ್​ ಹೇಳಿದರು.
ಹೊಸಕೋಟೆ ತಾಲೂಕಿನ ಸೂಲಿಬೆಲೆ ಸರ್ಕಾರಿ ಪದವಿಪೂರ್ವ ಕಾಲೇಜಿನ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಡಾ. ಬಿ.ಆರ್​. ಅಂಬೇಡ್ಕರ್​ ಜಯಂತಿಯಲ್ಲಿ ಮಾತನಾಡಿ, ಶಿಕ್ಷಣದಿಂದ ಮಾತ್ರ ಸಾಮಾಜಿಕ ಸಮಾನತೆ ಸಾಧ್ಯ ಎಂದು ಶಿಕ್ಷಣ ಜಾಗೃತಿ ಮೂಲಕ ಅಸ್ಪ--ೃಶ್ಯತೆ ಹಾಗೂ ದಲಿತ ಪರ ಹಕ್ಕುಗಳನ್ನು ಹೋರಾಟದ ಮೂಲಕ ಪಡೆಯಲು ಕಾನೂನು ಮಂತ್ರಿಗಳಾಗಿ ಸರ್ವ ಜನಾಂಗದ ನಾಯಕರಾಗಿ ಗುರುತಿಸಿಕೊಂಡವರು ಎಂದರು.
ಪರಿಷತ್​ನ ಹೊಸಕೋಟೆ ತಾಲೂಕು ಅಧ್ಯಕ್ಷ ರವಿಕುಮಾರ್​ ಮಾತನಾಡಿ, ಅಸ್ಪ--ೃಶ್ಯತೆ ನಿವಾರಣೆಗಾಗಿ ಸತ್ಯಾಗ್ರಹ ಹಾಗೂ ದಲಿತರ ದೇವಾಲಯ ಪ್ರವೇಶಕ್ಕಾಗಿ ಹೋರಾಟ ನಡೆಸುವ ಮೂಲಕ ಸಾಮಾಜಿಕ ಸಮಾನತೆ ಸಾರಿದ ಹರಿಕಾರ ಎಂದು ಬಣ್ಣಿಸಿದರು.
ಸೂಲಿಬೆಲೆ ಹೋಬಳಿ ಅಧ್ಯಕ್ಷ ನಯಾಜ್​ ಖಾನ್​ ಮಾತನಾಡಿ, ಮೇ.1ರಂದು ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು, ಮೂಡನಂಬಿಕೆ ಮತ್ತು ಮೌಡ್ಯಗಳ ಕುರಿತಾದ ವಿಚಾರಗೋಷ್ಠಿ ನಡೆಯಲಿದೆ. ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದರು.
ಕಾರ್ಮಿಕ ದಿನಾಚರಣೆ ಪ್ರಯುಕ್ತ ಆಯೋಜಿಸಿರುವ ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನದ ಪೂರ್ವ ತಯಾರಿ ನಡೆಸಲಾಗಿದ್ದು, ಈ ಹಿನ್ನೆಲೆ ರಂಗೋಲಿ ಸ್ಪರ್ಧೆ ಸೇರಿ ಇತರೆ ಚಟುವಟಿಕೆ ನಡೆಸಲಾಗಿದೆ. ಮೇ.1ರಂದು ಬಹುಮಾನ ವಿತರಣೆ ಮಾಡಲಿದ್ದೇವೆ ಎಂದು ಹೊಸಕೋಟೆ ಮಹಿಳಾ ಅಧ್ಯೆ ರಾಜೇಶ್ವರಿ ಹೇಳಿದರು.
ಸೂಲಿಬೆಲೆ ಹೋಬಳಿ ಅಧ್ಯಕ್ಷ ನಯಾಜ್​ ಖಾನ್​, ಮಹಿಳಾ ಅಧ್ಯಕ್ಷ ರಾಜೇಶ್ವರಿ, ಸುನೀತಾ ಉಮೇಶ್​, ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಶುಂಪಾಲ ವೆಂಕಟೇಶ್​, ಕಸಾಪ ಅಧ್ಯಕ್ಷ ಪ್ರೇಮಕುಮಾರ್​, ಆಶಾ ಕಾರ್ಯಕರ್ತೆ ಶಿಲ್ಪಾ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಎಂ.ಪ್ರಶಾಂತ್​, ಬೆಟ್ಟಹಳ್ಳಿ ಗೋಪಿನಾಥ್​, ಜಿಯಾಉಲ್ಲಾ, ಸೈಯದ್​ ಮಹಬೂಬ್​ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net