

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಭಾರತದ ಅತಿದೊಡ್ಡನಾವೀನ್ಯತೆ ಹಬ್ಬ ಎನಿಸಿಕೊಂಡ‘ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್2025ರಸಾಫ್ಟ್ವೇರ್ ಆವೃತ್ತಿ ಗ್ರಾಂಡ್ಫಿನಾಲೆಗೆ ರಾಮಯ್ಯ ಯುನಿವರ್ಸಿಟಿಆಫ್ ಅಪ್ಲೈಡ್ ಸೈನ್ಸ್ (ಆರ್‌ಯುಎಎಸ್)ನಲ್ಲಿ ಸೋಮವಾರಚಾಲನೆ ದೊರೆಯಿತು.
ಮಿನಿಸ್ಟ್ರಿಆಫ್ ಎಜುಕೇಷನ್ಸ್ ಇನೊವೇಷನ್ಸೆಲ್ ಹಾಗೂ ಎಐಸಿಟಿಇ ಸಹಯೋಗದಲ್ಲಿನಡೆಯುತ್ತಿರುವ ಕಾರ್ಯಕ್ರಮದಆಯೋಜನೆಯನ್ನು ಆರ್‌ಯುಎಎಸ್ವಹಿಸಿಕೊಂಡಿದ್ದು,36 ಗಂಟೆ ನಡೆಯುವಹ್ಯಾಕಥಾನ್ ಚಟುವಟಿಕೆಗಳಲ್ಲಿವಿವಿಧ ತಂಡಗಳ ಸಂವಾದ ಮತ್ತು ವಿವಿಧಗೋಷ್ಠಿಗಳು ನಡೆಯಲಿವೆ.
ಭಾರತದಲ್ಲಿನಾವೀನ್ಯತೆ ಹಾಗೂ ಉದ್ಯಮಶೀಲತೆಉತ್ತೇಜಿಸುವ ಉದ್ದೇಶದಿಂದನಡೆಸಿಕೊಂಡು ಬಂದಿರುವ ರಾಷ್ಟ್ರಮಟ್ಟದಸ್ಪರ್ಧೆ ಇದಾಗಿದ್ದು,ಸಾಮಾಜಿಕವಾಗಿಇರುವ ಸಮಸ್ಯೆ-ಸವಾಲುಗಳಿಗೆವಿದ್ಯಾರ್ಥಿಗಳು ಪರಿಹಾರವನ್ನುಸೂಚಿಸುವ ಹಾಗೂ ಅದನ್ನು ರೂಪಿಸಿಅನುಷ್ಠಾನಕ್ಕೆ ತರಲು ಪ್ರೋತ್ಸಾಹಿಸುವುದಕ್ಕೆಈ ಹ್ಯಾಕಥಾನ್ ಆಯೋಜಿಸಲಾಗಿದೆ.
ಅತಿಥಿಗಳಾಗಿಪಾಲ್ಗೊಂಡಿದ್ದ ಐಐಎಸ್ಸಿಯಪ್ರೊ.ದೀಪಕ್ಸೈನಿ ಮಾತನಾಡಿ,ಸಾಫ್ಟ್ವೇರ್ಎಂಬುದು ಇಂದು ಎಲ್ಲ ಕ್ಷೇತ್ರಗಳಲ್ಲೂಹಾಸುಹೊಕ್ಕಾಗಿದೆ.ಅತ್ಯಂತ ಕಡಿಮೆಸಮಯದಲ್ಲಿ ಅತ್ಯುತ್ತಮವಾದದ್ದುಹೊರಹೊಮ್ಮುವುದಕ್ಕೆ ಈ ಹ್ಯಾಕಥಾನ್ಪೂರಕವಾಗಿದೆ ಎಂದು ತಿಳಿಸಿದರು.
ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದಭಾರತೀಯ ಸಾಂಖ್ಯಿಕ ಸಂಸ್ಥೆಯಮಾಜಿ ನಿರ್ದೇಶಕ ಪ್ರೊ.ಕಲ್ಯಾಣ್ ಸಿನ್ಹಾಮಾತನಾಡಿ, ಮೆದುಳುಹೇಗೆ ವೇಗವಾಗಿ ಪ್ರತಿಕ್ರಿಯೆನೀಡುತ್ತದೆಯೋ ಹಾಗೆ ಮಶೀನ್ಲರ್ನಿಂಗ್ ಆರಂಭವಾಗಿದೆ.ಹಾಗೆಂದು ತಪ್ಪುಗಳುಪುನರಾವರ್ತನೆ ಮಾಡಬಾರದು.ಪ್ರತಿಯೊಂದರಹಿಂದೆ ಒಂದು ಗಣಿತವಿದೆ.ಯಂತ್ರದಬುದ್ಧಿವಂತಿಕೆಗೆ ಅವಲಂಬಿಸಿಮನುಷ್ಯ ತನ್ನ ಬುದ್ದಿವಂತಿಕೆಯನ್ನುಅಗ್ಗ ಮಾಡಿಕೊಳ್ಳಬಾರದು ಎಂದರು.
ಕಾರ್ಯಕ್ರಮದಲ್ಲಿಆರ್‌ಯುಎಎಸ್ ರಿಜಿಸ್ಟ್ರಾರ್ಎಸ್.ಅಶೋಕ್ರಾವ್, ಡೀನ್ಪ್ರೊ.ಆರ್.ವಿ.ರಂಗನಾಥ್ಮತ್ತಿತರರಿದ್ದರು.
* 72,165ಐಡಿಯಾಗಳುಸಲ್ಲಿಕೆ.
* 68,766ವಿದ್ಯಾರ್ಥಿತಂಡಗಳು ಭಾಗಿ
*8,26,635ವಿದ್ಯಾರ್ಥಿಗಳುಭಾಗವಹಿದ್ದಾರೆ.
*ಅಂತಿಮಗೊಂಡತಂಡಗಳ ಸಂಖ್ಯೆ 1360
* ಐದುತಂಡಗಳು ಆಯ್ಕೆಯಾಗಲಿವೆ.
*ಆಯ್ಕೆಯಾದತಂಡಕ್ಕೆ 1.5 ಲಕ್ಷನಗದು ಬಹುಮಾನ
ಆರ್‌ಯುಎಎಸ್ ಕುಲಪತಿ ಎಂ.ಆರ್.ಜಯರಾಂ ಪರವಾಗಿ ದೇಶದ ವಿವಿಧ ಭಾಗಗಳಿಂದ ಬಂದಿರುವ ವಿದ್ಯಾರ್ಥಿಗಳಿಗೆ ಸ್ವಾಗತ ಬಯಸುತ್ತೇನೆ. ಯುವಕರು ಉತ್ಸಾಹದಿಂದ ಆಗಮಿಸಿ ಸ್ಪರ್ಧೆಯ ಉದ್ದೇಶ ಸಾರ್ಥಕ ಮಾಡಿದ್ದಾರೆ. ನಾನಾ ವಿಷಯಗಳನ್ನು ವ್ಯಾಸಂಗ ಮಾಡುತ್ತಿರುವವರು ಒಗ್ಗೂಡಿ ನಾಳಿನ ಸಮಸ್ಯೆಗಳನ್ನು ಬಗೆಹರಿಸಲು ಇದೊಂದು ಅತ್ಯುತ್ತಮ ವೇದಿಕೆಯಾಗಿದೆ.