ಕನ್ನಡ ಸಾಹಿತ್ಯ ಲೋಕದ ಒಂಟಿಸಲಗ ಎಸ್.ಎಲ್.ಭೈರಪ್ಪ; ವಿಶ್ವೇಶ್ವರ ಭಟ್ ವಿಶ್ಲೇಷಣೆ

ಎಸ್.ಎಲ್.ಭೈರಪ್ಪ ಸಾಹಿತ್ಯ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರ ಕೃತಿ ಮತ್ತು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ವಿಶ್ವೇಶ್ವರ ಭಟ್, ಸಹನ ವಿಜಯಕುಮಾರ್, ಜಿ.ಬಿ.ಹರೀಶ್, ಉಮಾ ಕುಲಕರ್ಣಿ ಮತ್ತಿತರರಿದ್ದರು.
ಎಸ್.ಎಲ್.ಭೈರಪ್ಪ ಸಾಹಿತ್ಯ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರ ಕೃತಿ ಮತ್ತು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ವಿಶ್ವೇಶ್ವರ ಭಟ್, ಸಹನ ವಿಜಯಕುಮಾರ್, ಜಿ.ಬಿ.ಹರೀಶ್, ಉಮಾ ಕುಲಕರ್ಣಿ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕನ್ನಡ ಸಾಹಿತ್ಯ ಲೋಕದ ಒಂಟಿಸಲಗ ಎಸ್.ಎಲ್.ಭೈರಪ್ಪ
  • ಭೈರಪ್ಪ ಸಾಹಿತ್ಯ ಸಂಸ್ಮರಣೆಯಲ್ಲಿ ವಿಶ್ವೇಶ್ವರ ಭಟ್ ವಿಶ್ಲೇಷಣೆ
  • ಧರ್ಮಶ್ರೀ ಕಾದಂಬರಿಗೆ 65 ವರ್ಷ ಕುರಿತು ಚಿಂತನೆ

ಬೆಂಗಳೂರು:ಯಾರ ನಿಯಂತ್ರಣ,ಹಿಡಿತಕ್ಕೂಸಿಗದೆ ತಮ್ಮ 94ರಇಳಿವಯಸ್ಸಿನವರೆಗೂ ಸ್ವತಂತ್ರವಾಗಿನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಕನ್ನಡ ಸಾಹಿತ್ಯ ಲೋಕದ ಒಂಟಿಸಲಗಎಸ್.ಎಲ್.ಭೈರಪ್ಪಎಂದು ಹಿರಿಯ ಪತ್ರಕರ್ತ ವಿಶ್ವೇಶ್ವರಭಟ್ ವಿಶ್ಲೇಷಿಸಿದ್ದಾರೆ.

ಎಸ್.ಎಲ್.ಭೈರಪ್ಪಪ್ರತಿಷ್ಠಾನ ಆಯೋಜಿಸಿದ್ದಎಸ್.ಎಲ್.ಭೈರಪ್ಪಸಾಹಿತ್ಯ ಸಂಸ್ಮರಣೆ ಕಾರ್ಯಕ್ರಮದಲ್ಲಿಮಾತನಾಡಿದರು.

ಯಾವುದೇಅಳುಕುಗಳಿಲ್ಲದೆ,ನಿರ್ಭಿಡೆಯಿಂದತಮಗನ್ನಿಸಿದ್ದನ್ನು ಮಾಡುತ್ತಿದ್ದಎಸ್.ಎಲ್.ಭೈರಪ್ಪ,ಅಕ್ಷರ-ಆಚರಣೆಎರಡರಲ್ಲೂ ಒಂದೇ ಆಗಿದ್ದ ಸಾಹಿತಿ.ಅವರ ಕೊನೇದಿನಗಳಲ್ಲಿ ವಯೋಸಹಜ ಮರೆವುಅವರನ್ನು ಆವರಿಸಿದ್ದರೂ ತಮ್ಮಸುತ್ತಲಿನ ಪ್ರಜ್ಞೆಯನ್ನುಕಳೆದುಕೊಂಡಿರಲಿಲ್ಲ.ತಾವು ಮೈಸೂರಿನಲ್ಲಿಹಿಂದೆ ಸ್ಥಾಪಿಸಿದ್ದ ಸಂಸ್ಥೆತಮ್ಮ ಆಶಯಗಳಿಗೆ ತಕ್ಕಂತೆ ಕೆಲಸಮಾಡುತ್ತಿಲ್ಲ ಎಂಬ ಕೊರಗಿನಿಂದತಾವೇ ಸ್ವತಃ ಬೆಂಗಳೂರಿನಲ್ಲಿಪ್ರತ್ಯೇಕ ಟ್ರಸ್ಟಿನ ಸ್ಥಾಪನೆಮತ್ತು ರಚನೆ ಮಾಡಿದ್ದರು.ತಮ್ಮ ಬಳಿ ಇದ್ದಹಣವನ್ನು ಆರ್ಥಿಕವಾಗಿ ದುರ್ಬಲವಾಗಿರುವವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ,ಬಡರೋಗಿಗಳಚಿಕಿತ್ಸೆಗೆ,ಸಮಾಜಸೇವೆಗೆಕೊಡಬೇಕು. ತಾನುಹೋಗುವಾಗ ಬರಿಗೈಯಲ್ಲಿ ಹೋಗಬೇಕುಎಂಬ ಉತ್ಕಟ ಅಪೇಕ್ಷೆ ಅವರಿಗಿತ್ತು.ಆ ಆಶಯಗಳಅನುಷ್ಟಾನಕ್ಕಾಗಿ ಪ್ರತಿಷ್ಠಾನವನ್ನುಸ್ಥಾಪಿಸಿದ್ದರು.ಆದರೆ ಅವರ ಮಕ್ಕಳುಬ್ಯಾಂಕ್ ಖಾತೆಗಳ ನಿರ್ವಹಣೆಯಹಕ್ಕನ್ನು ಪಡೆದುಕೊಳ್ಳಲುಭೈರಪ್ಪನವರನ್ನು ಕೋರ್ಟ್ ಕಟ್ಟೆಹತ್ತುವಂತೆ ಮಾಡಿದ್ದು ಅವರಿಗೆಬಹಳ ನೋವು ತರಿಸಿತ್ತು.ಆ ಕಾರಣಕ್ಕಾಗಿಯೇಭೈರಪ್ಪನವರು ತಮ್ಮ ಅಂತಿಮ ಸಂಸ್ಕಾರಮತ್ತಿತರ ಎಲ್ಲ ವಿಷಯಗಳ ಕುರಿತುವಿಲ್ ಬರೆದಿಟ್ಟಿದ್ದರು.ಈ ವರೆಗೆ ಟ್ರಸ್ಟಿಗಳುಮೌನವಾಗಿರಲು ನಿರ್ಧರಿಸಿದ್ದು,ಈಗ ಎಲ್ಲಪ್ರಶ್ನೆಗಳಿಗೂ ಉತ್ತರ ನೀಡುತ್ತಿದ್ದೇವೆ.ಕುಟುಂಬದವರೊಂದಿಗೆಟ್ರಸ್ಟಿನವರಿಗೆ ಯಾವುದೇಭಿನ್ನಾಭಿಪ್ರಾಯವಿಲ್ಲ.ಆದರೆ ಕಾನೂನುಹೋರಾಟ ಅನಿರ್ವಾರ್ಯ.ಭೈರಪ್ಪನವರಎಲ್ಲ ಆಶಯಗಳನ್ನು ಅನುಷ್ಟಾನಕ್ಕೆತರುವುದು ಟ್ರಸ್ಟಿನ ಮುಖ್ಯ ಗುರಿಎಂದು ವಿಶ್ವೇಶ್ವರ ಭಟ್ ವಿವರಿಸಿದರು.

ಕಾರ್ಯಕ್ರಮದಲ್ಲಿ11 ವಿದ್ಯಾರ್ಥಿಗಳಿಗೆವಿದ್ಯಾರ್ಥಿವೇತನವನ್ನುವಿತರಿಸಲಾಯಿತು.ಟ್ರಸ್ಟಿಗಳಾದಸಹನ ವಿಜಯಕುಮಾರ್,ಅರುಣ್,ಲೇಖಕ ಜಿ.ಬಿ.ಹರೀಶ್,ಅನುವಾದಕಿ ಉಮಾಕುಲಕರ್ಣಿ ಮತ್ತಿತರರು ಪಾಲ್ಗೊಂಡಿದ್ದರು.

ಭೈರಪ್ಪ ಅವರದ್ದು ಹಠದ ಸ್ವಭಾವ. 65 ವರ್ಷಗಳ ಹಿಂದಿನ ಧರ್ಮಶ್ರೀ ಕಾದಂಬರಿಯಲ್ಲಿ ಆರಂಭವಾದ ಮತಾಂತರದ ವಿಷಯ ಸಾರ್ಥ, ಆವರಣದವರೆಗೆ ದಶಕಗಳ ಕಾಲ ಮುಂದುವರೆದಿದ್ದು, ತತ್ವಜ್ಞಾನಕ್ಕಿಂತ, ಮೌಲ್ಯದ ಅನ್ವೇಷಣೆಗೆ ಹೆಚ್ಚು ಒತ್ತು ನೀಡಿದ್ದು ಅವರ ವಿಶೇಷತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net