ತಾಳೂರು ಗ್ರಾಪಂ ಪಿಡಿಒ ಪ್ರಭುಗೌಡಗೆ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಮನವಿ ಸಲ್ಲಿಸಿದರು. ಜಿಲ್ಲಾ ಸಮಿತಿ ಸದಸ್ಯ ಎಸ್.ಕಾಲುಬಾ, ಘಟಕದ ಮುಖಂಡ ಬಂಡಿ ಇಮಾಮ್ ಸಾಬ್,ನಿವಾಸಿಗಳಾದ ಮೌಲಾಬೀ, ಲಕ್ಷ್ಮಣ, ಶಿವಲೀಲಾ, ಸುನೀತಾ, ಹುಸೇನ್ ಬೀ, ಪಕೀರಮ್ಮ, ಹನುಮಂತಮ್ಮ, ಪಂಪಾಪತಿ, ವೀರೇಶ, ಶಿವಕುಮಾರ್, ರಹಮತ್, ಮೆಹಬೂಬ್, ಜಾಫರ್, ಜಹೀರಾ ಬೀ, ರತ್ನಮ್ಮ, ಪಲ್ಲೇದ ನೀಲಮ್ಮ, ಹನುಮಂತ ಇತರರು ಇದ್ದರು.
ಸಂಡೂರು: ತಾಲೂಕಿನ ತಾಳೂರು ಗ್ರಾಮದಲ್ಲಿರುವ ಬಡ ಕುಟುಂಬಗಳು ಹಾಗೂ ವಲಸೆ ಕಾರ್ಮಿಕರಿಗೆ ನಿವೇಶನ ಕಲ್ಪಿಸಿಕೊಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಪಿಡಿಒ ಪ್ರಭುವನಗೌಡಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಸಂಘದ ಜಿಲ್ಲಾ ಸಮಿತಿ ಸದಸ್ಯ ಎಸ್.ಕಾಲೂಬಾ ಮಾತನಾಡಿ, ತೋರಣಗಲ್ ಹೋಬಳಿ ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ತಾಳೂರು ಗ್ರಾಮದಲ್ಲಿಯೂ ಜನಸಂಖ್ಯೆ ಹೆಚ್ಚಳವಾಗುತ್ತಿದೆ.
ಅವಿಭಕ್ತ ಕುಟುಂಬಗಳ ಸಂಖ್ಯೆ ಏರುತ್ತಿದೆ. ಈ ಪ್ರದೇಶದ ಭೂಮಿ ಬೆಲೆ ಗಗನಕ್ಕೇರಿದ್ದು, ಬಡ ಜನರು ನಿವೇಶನ ಖರೀದಿಸಲು ಸಾಧ್ಯವಾಗುತ್ತಿಲ್ಲ. ಕೂಲಿ ಕಾರ್ಮಿಕರು ಮೂರ್ನಾಲ್ಕು ದಶಕಗಳಿಂದ ಅತಂತ್ರ ಸ್ಥಿತಿಯಲ್ಲಿ ಸಿಲುಕಿದ್ದಾರೆ ಎಂದರು.