ಕೌಶಲ ಸಂಬಂಧಿತ ಶಿಕ್ಷಣಕ್ಕೆ ಒತ್ತು skill

suddigoshti
suddigoshti
Published on

ಪ್ರಮುಖ ಮುಖ್ಯಾಂಶಗಳು

  • skill education
  • knowledge
ಕೋಲಾರ:ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಗೆ ಪದವೀಧರರು ನೋಂದಾಯಿಸಿಕೊಂಡು ಹಕ್ಕು ಚಲಾವಣೆ ಮಾಡಬೇಕು. ಈ ಮೂಲಕ ಪದವೀಧರರ ಧ್ವನಿಯಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ತುಮಕೂರಿನ ವಿದ್ಯಾವಾಹಿನಿ ಸಂಸ್ಥೆಯ ಕಾರ್ಯದರ್ಶಿ ಎನ್​.ಬಿ.ಪ್ರದಿಪ್​ ಕುಮಾರ್​ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪದವಿ ಪಡೆದುಕೊಂಡಿವವರು ನೋಂದಣಿ ಮಾಡದಿದ್ದರೆ ಮತದಾನಕ್ಕೆ ಅರ್ಹರಾಗುವುದಿಲ್ಲ. ಅರ್ಜಿಯೊಂದಿಗೆ ಪದವಿ ಘಟಿಕೋತ್ಸವ ಪ್ರಮಾಣಪತ್ರ, ಆಧಾರ್​ ಸಂಖ್ಯೆ, ಚುನಾವಣಾ ಗುರುತಿನ ಚೀಟಿ, ಭಾವಚಿತ್ರ ನೀಡಿ ನೋಂದಾಯಿಸಿಕೊಳ್ಳಬಹುದು ಎಂದು ಹೇಳಿದರು.
ಆಗ್ನೇಯ ಕ್ಷೇತ್ರದ ವ್ಯಾಪ್ತಿಗೆ ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ದಾವಣಗೆರೆ ಒಳಪಟ್ಟಿದೆ. ಚುನಾವಣೆಯ ಮತದಾರರ ಪಟ್ಟಿಗೆ ಹೆಸರು ನೋಂದಣಿಗೆ ಅಕ್ಟೋಬರ್​ನಲ್ಲಿ ಆರಂಭವಾಗಿದ್ದು, ನ.6 ಕಡೆಯ ದಿನವಾಗಿದೆ. ಈಗಾಗಲೇ ತುಮಕೂರು, ಚಿತ್ರದುರ್ಗ, ದಾವಣಗೆರೆಯಲ್ಲಿ ಈಗಾಗಲೇ ಕಚೇರಿ ತೆರೆದಿದ್ದು, ಕೋಲಾರದಲ್ಲಿಯೂ ಕಚೇರಿ ತೆರೆಯಲಾಗುವುದು. ಜಿಲ್ಲೆಯಲ್ಲಿ ಪದವೀಧರರ ನೋಂದಣಿ ತೀರಾ ಕಡಿಮೆ ಇದ್ದು, ಅದನ್ನು ಈ ಬಾರಿ ಹೆಚ್ಚಿಸಲು ಶ್ರಮಿಸಲಾಗುತ್ತಿದೆ. 2022ಕ್ಕಿಂತ ಮುನ್ನ ಪದವಿ ಮುಗಿಸಿದವರು ನೋಂದಣಿಗೆ ಅರ್ಹರು ಎಂದು ತಿಳಿಸಿದರು.
16 ವರ್ಷಗಳಿಂದ ಬಿಜೆಪಿ ಕಾರ್ಯಕರ್ತನಾಗಿ ದುಡಿಯುತ್ತಿದ್ದೇನೆ. ತುಮಕೂರಿನಲ್ಲಿ ವಿದ್ಯಾವಾಹಿನಿ ಸಮೂಹ ಸಂಸ್ಥೆ ಹೊಂದಿದ್ದು, ವಿದ್ಯಾರ್ಥಿಗಳಿಗೆ ಕೈಗಾರಿಕಾ ಕೌಶಲ ಕಲಿಸುತ್ತಿದ್ದೇನೆ. ಐದಾರು ಸಾವಿರ ವಿದ್ಯಾರ್ಥಿಗಳು ಕ್ಯಾಂಪಸ್​ ಸಂದರ್ಶನದಲ್ಲಿ ಆಯ್ಕೆಯಾಗಿ ಹೋಗಿದ್ದು, ಉದ್ಯೋಗ ಸಂಬಂಧ ಕೌಶಲ ಕಲಿಸಬೇಕೆಂಬ ಗುರಿ ಹೊಂದಿದ್ದೇನೆ ಎಂದು ತಿಳಿಸಿದರು.
ಆಗ್ನೇಯ ಪದವೀಧರರ ಕ್ಷೇತ್ರಕ್ಕೆ ಮಾಜಿ ಶಾಸಕ ಕೆ.ವೈ.ನಾರಾಯಣಸ್ವಾಮಿ ಆಕಾಂಕ್ಷಿಯಾಗಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರದಿಪ್​ ಕುಮಾರ್​, ನಾರಾಯಣಸ್ವಾಮಿ ಅವರನ್ನು ಪಕ್ಷದಿಂದ ಸಂಚಾಲಕರನ್ನಾಗಿ ಮಾಡಿದ್ದಾರೆ. ಅವರು ಸ್ಪರ್ಧೆ ಮಾಡುವ ಬಗ್ಗೆ ಗೊತ್ತಿಲ್ಲ. ನಾನು ಸಕ್ರಿಯ ರಾಜಕಾರಣಕ್ಕೆ ಬರುವುದಿಲ್ಲ. ಬದಲಾಗಿ ಪದವೀಧರರ ಕ್ಷೇತ್ರಕ್ಕೆ ಸೀಮಿತವಾಗಿ ಕೆಲಸ ಮಾಡುತ್ತೇನೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net