ಎಸ್​ಕೆಡಿಆರ್​ಡಿಪಿ ಬಡ ಕುಟುಂಬಗಳಿಗೆ ವರದಾನ! skdrdp

ಎಸ್​ಕೆಡಿಆರ್​ಡಿಪಿ ಬಡ ಕುಟುಂಬಗಳಿಗೆ ವರದಾನ! skdrdp
ಎಸ್​ಕೆಡಿಆರ್​ಡಿಪಿ ಬಡ ಕುಟುಂಬಗಳಿಗೆ ವರದಾನ! skdrdp
Published on

ಪ್ರಮುಖ ಮುಖ್ಯಾಂಶಗಳು

  • ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ ದೇವಸ್ಥಾನಗಳ ಜೀರ್ಣೋದ್ಧಾರ
  • ಮಹಿಳಾ ಸ್ವಾವಲಂಬಿಗೆ ಸಹಕಾರ
ರಾಯಲ್ಪಾಡು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಭಾಗದ ಬಡ ಕುಟುಂಬಗಳಿಗೆ ವರದಾನವಾಗಿದೆ ಎಂದು ಪ್ರಾಂಶುಪಾಲ ಎಂ.ಜಿ.ಗಿರೀಶ್​ ಹೇಳಿದರು. skdrdp
ಶ್ರೀನಿವಾಸಪುರ ತಾಲೂಕು ರಾಯಲ್ಪಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ ಸಂಘದ ಒಕ್ಕೂಟ ಪದಾಧಿಕಾರಿಗಳ ಕಾರ್ಯಾಗಾರದಲ್ಲಿ ಮಾತನಾಡಿ, ಸರ್ಕಾರ ಮಾಡದಂತಹ ಕೆಲಸ ಕಾರ್ಯಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಮಾಡಿ ತೋರಿಸುತ್ತಿದೆ. ಗ್ರಾಮೀಣ ಭಾಗದ ಮಹಿಳೆಯರು ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ನೆರವಾಗಿದೆ ಎಂದು ತಿಳಿಸಿದರು.
ತಾಲೂಕು ಯೋಜನಾಧಿಕಾರಿ ಆಶಾ ಕುಮಾರಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮಾಜದ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಸಮುದಾಯದ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ದೇವಸ್ಥಾನ ಜೀಣೋರ್ದ್ಧಾರ, ಭಜನಾ ಮಂದಿರ, ಸಮುದಾಯ ಭವನ, ಹಾಲು ಉತ್ಪಾದಕರ ಸಹಕಾರಿ ಸಂಘದ ಕಟ್ಟಡ ನಿಮಾರ್ಣ, ಶಾಲೆಗಳಿಗೆ ಅನುದಾನ ನೀಡುವ ಸರ್ವತೋಮುಕ ಅಭಿವೃದ್ಧಿಯಲ್ಲಿ ತೊಡಗಿದೆ ಎಂದರು.
\
ಆಂತರಿಕ ಲೆಕ್ಕ ಪರಿಶೋಧಕ ಜೀವನ್​ ಕುಮಾರ್​, ಸಿಬ್ಬಂದಿ ಪ್ರತಾಪ್​, ಸೇವಾಪ್ರತಿನಿಧಿಗಳಾದ ಶೋಭಾ, ರಾಜಮ್ಮ, ಸುಮಾ, ಲಲಿತಾ, ಭಾರತಿ, ಅನಿತಾ ಮಂಜುನಾಥ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net