ದೇವಸ್ಥಾನದ ಅಭಿವೃದ್ಧಿಗೆ ಎಸ್​ಕೆಡಿಆರ್​ಪಿ ನೆರವು

SKDRDP assistance for temple development
SKDRDP assistance for temple development
Published on
ಚೇಳೂರು:ಗ್ರಾಮೀಣ ಭಾಗದಲ್ಲಿ ದೇವಾಲಯ ನಿಮಾರ್ಣವಾಗಿ ಜನರಲ್ಲಿ ಧಾರ್ಮಿಕ ಭಾವನೆ ಬೆಳೆದು ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಆಗಬೇಕು ಎಂದು ಜಿಲ್ಲಾ ನಿರ್ದೇಶಕ ಸತೀಶ್​ ಸುವರ್ಣ ತಿಳಿಸಿದರು.
ಗುಬ್ಬಿ ತಾಲೂಕಿನ ಚೇಳೂರಿನ ಶ್ರೀ ವೀರಭದ್ರಸ್ವಾಮಿ ದೇವಾಲಯಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 2 ಲಕ್ಷರೂ ಚೆಕ್​ ಅನ್ನು ಜೀಣೋರ್ದ್ಧಾರ ಸಮಿತಿ ಅಧ್ಯಕ್ಷ ಸಿ.ಎನ್​ ವೆಂಕಟೇಶ್​ ಅವರಿಗೆ ವಿತರಿಸಿ ಮಾತನಾಡಿ, ಧರ್ಮಸ್ಥಳದಿಂದ ಪ್ರತಿ ಗ್ರಾಮದ ದೇವಾಲಯಗಳ ಅಭಿವೃದ್ಧಿಗೆ ಆರ್ಥಿಕ ಸಹಾಯಧನ ನೀಡುತ್ತಿದ್ದು, ಇದರ ಉಪಯೋಗ ಎಲ್ಲ ಗ್ರಾಮದವರು ಉಪಯೋಗಿಸಿಕೊಳ್ಳಬೇಕು ಎಂದರು.
ಜೀಣೋರ್ದ್ಧಾರ ಸಮಿತಿ ಅಧ್ಯಕ್ಷ ಸಿ.ಎನ್​.ವೆಂಕಟೇಶ್​ ಮಾತನಾಡಿ, ಚೇಳೂರು ಹೃದಯ ಭಾಗದಲ್ಲಿ ಶ್ರೀ ವೀರಭದ್ರೇಶ್ವರಸ್ವಾಮಿ ದೇವಸ್ಥಾನ ಸುಮಾರು 80 ಲಕ್ಷ ರೂಪಾಯಿಗಳಲ್ಲಿ ನಿಮಾರ್ಣವಾಗುತ್ತಿದ್ದು, ಇದರ ಅಭಿವೃದ್ಧಿಗೆ ಭಕ್ತರ ಸಹಕಾರ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಸಹಾಯಧನ ದೊರೆತಿದೆ ಎಂದರು.
ತಾಲೂಕು ಯೋಜನಾಧಿಕಾರಿ ಜಯಂತಿ ಸಮಿತಿ ಉಪಾಧ್ಯಕ್ಷ ಸಿ.ಎನ್​ ಬಸವರಾಜು, ಮುಖಂಡ ಸಿ.ಎನ್​ ಚಿಕ್ಕೇಗೌಡ, ಇತರರು ಉಪಸ್ಥಿತರದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net