ಚಿಂತಾಮಣಿ: ನಿವೇಶನ ನೋಂದಣಿ ವಿವಾದ ಗಲಾಟೆಯಲ್ಲಿ ವ್ಯಕಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಲೂಕಿನ ನಾರಾಯಣಹಳ್ಳಿ ಮುನೇಶ (55) ಗಾಯಾಳು. ಬಿಎಂಟಿಸಿ ಚಾಲಕ ರಮೇಶ್ (45) ಹಲ್ಲೆ ನಡೆಸಿದ ಆರೋಪಿ.
ಗ್ರಾಮದಲ್ಲಿನ ಖಾಲಿ ನಿವೇಶನ ನೋಂದಣಿ ವಿಚಾರವಾಗಿ ಇಬ್ಬರ ನಡುವೆ ನಡೆದ ಗಲಾಟೆಯಲ್ಲಿ ರಮೇಶ್ ಗಾಜಿನ ಚೂರು ಹಾಗೂ ಚಾಕುವಿನಿಂದ ಮುನೇಶ ಮೇಲೆ ಹಲ್ಲೆ ನಡೆಸಿದ್ದಾನೆ. ಗಾಯಾಳುವಿನ ಪತ್ನಿ ದಿವ್ಯಾ ನೀಡಿದ ದೂರಿನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.