ಮುಳಬಾಗಿಲು: ನೈಜ ಪತ್ರಕರ್ತರ ಸಂಖ್ಯೆ ಹೆಚ್ಚಾಗಬೇಕು. ನಕಲಿ ಮತ್ತು ಬ್ಲಾಕ್ ಮೇಲ್ Journalists ಮಾಡುವರ ನಿಯಂತ್ರಣ ಮಾಡಿದಾಗ ಮಾತ್ರ ಸಮಾಜದ ನಾಲ್ಕನೇ ಅಂಗದ ಘನತೆ, ಗೌರವ ಉಳಿಯಲು ಸಾಧ್ಯಎಂದು ಶಾಸಕ ಸಮೃದ್ಧಿವಿ.ಮಂಜುನಾಥ್ ಹೇಳಿದರು.
ನಗರದ ಕಾಂತರಾಜ ವೃತ್ತದ ಬಳಿಯ ಗೃಹ ಕಚೇರಿಯಲ್ಲಿ ಗುರುವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳಿಂದ ಮನವಿ ಸ್ವೀಕರಿಸಿ ಮಾತನಾಡಿ, ತಾಲೂಕು ಕಾರ್ಯನಿರತ ಪತ್ರಕರ್ತರ ಭವನಕ್ಕೆ ಸರ್ಕಾರದಿಂದ ನಿವೇಶನ ಮಂಜೂರು ಮಾಡಿಸುವುದರ ಜತೆಗೆ ಕಟ್ಟಡ ನಿಮಾರ್ಣಕ್ಕೆ ಆರ್ಥಿಕ ಅನುದಾನ ಬಿಡುಗಡೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಪತ್ರಕರ್ತರು ವಾಸ್ತವಾಂಶದ ಸುದ್ದಿ ಮಾಡುವ ಜತೆಗೆ ಪಕ್ಷಾತಿತ, ಜಾತ್ಯತಿತವಾಗಿ ಕೆಲಸ ನಿರ್ವಹಿಸಿದಲ್ಲಿ ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಲು ಸಾಧ್ಯ. ಪತ್ರಕರ್ತರು ಬದ್ಧತೆಯಿಂದ ಕೆಲಸ ನಿರ್ವಹಿಸುವುದರ ಜತೆಗೆ ಪತ್ರಿಕಾ ಧರ್ಮ ಕಾಪಾಡಬೇಕು ಎಂದರು.
ಪತ್ರಕರ್ತರ ಸಂಘದ ವತಿಯಿಂದ ಶಾಸಕರನ್ನು ಗೌರವಿಸಲಾಯಿತು.
ಸಂದ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣಿ, ಉಪಾಧ್ಯಕ್ಷರಾದ ವಿ.ರಾಮಕೃಷ್ಣಪ್ಪ, ವಿ.ಶಂಕರಪ್ಪ, ಖಜಾಂಚಿ ತ್ಯಾಗರಾಜ್, ಕಾರ್ಯದರ್ಶಿಗಳಾದ ಆರ್. ಶ್ರೀನಿವಾಸಪ್ಪ, ವಿ. ಸುಕುಮಾರ್, ಕಾರ್ಯಕಾರಿ ಸಮಿತಿ ಸದಸ್ಯರಾದ ಎಂ.ಪಿ. ನಾಗಭೂಷಣಾಚಾರ್,ನರಸಿಂಹಶೆಟ್ಟಿ, ಪಿ.ಎಲ್. ಅಮೃತಯ್ಯ ಇತರರು ಇದ್ದರು.